Advertisement

ರನ್‌ವೇ ದಾಟಿದ ಎಎನ್‌ -32 ವಾಯುಪಡೆಯ ವಿಮಾನ

12:03 PM May 09, 2019 | Team Udayavani |

ಮುಂಬಯಿ: ಮುಂಬಯಿ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ಎಎನ್‌-32 ವಿಮಾನ ಮಂಗಳವಾರ ರಾತ್ರಿ ರನ್‌ವೇಯಿಂದ ಹೊರಗೆ ಜಾರಿದ ಘಟನೆ ನಡೆದಿದೆ.

Advertisement

ಮಂಗಳವಾರ ರಾತ್ರಿ ಸುಮಾರು 11:39ರ ವೇಳೆಗೆ ವಿಮಾನವು ಮುಂಬಯಿ ನಿಲ್ದಾಣದಿಂದ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಹೊರಡುವ ವೇಳೆ ರನ್‌ವೇ ಸಂಖ್ಯೆ 27ರಲ್ಲಿ ಈ ದುರಂತ ನಡೆದಿದೆ ಎಂದು ಮುಂಬಯಿ ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿ¨ªಾರೆ.

ಘಟನೆ ಬಳಿಕ ತತ್‌ಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸ್ವಲ್ಪ ಸಮಯ ವಿಮಾನ ನಿಲ್ದಾಣವನ್ನು ಮುಚ್ಚಿ ಸಮಸ್ಯೆಯನ್ನು ಪರಿಹರಿಸಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next