Advertisement

ಲ್ಯಾಂಡಿಂಗ್ ವೇಳೆ  ಅಪಘಾತಕ್ಕೀಡಾದ ಆ್ಯನ್-26 ವಿಮಾನ : ನಾಲ್ವರ ಸಾವು

12:01 PM Mar 14, 2021 | Team Udayavani |

ನೂರ್ ಸುಲ್ತಾನ್: ಕಝಕಿಸ್ಥಾನ್ ರಾಜಧಾನಿಯಾದ ನೂರ್ ಸುಲ್ತಾನ್ ನಿಂದ ಹಾರಾಟ ಆರಂಭಿಸಿ, ಆಲ್ಮಟಿ ಪ್ರದೇಶದಲ್ಲಿ ಇಳಿಯುವ ವೇಳೆ ಆ್ಯನ್-26 ಮಿಲಿಟರಿ ವಿಮಾನವೊಂದು ಅಪಘಾತಕ್ಕೆ ಈಡಾಗಿರುವ ಘಟನೆ ನಡೆದಿದೆ.

Advertisement

ಈ ಕುರಿತು ಮಾಹಿತಿ ನೀಡಿರುವ ತುರ್ತು ಪರಿಸ್ಥಿತಿ ಸಚಿವಾಲಯದ ಅಧಿಕಾರಿಗಳು, ಈ ವಿಮಾನ ನೂರ್ ಸುಲ್ತಾನ್ ನಿಂದ ತೆರಳಿ ಆಲ್ಮಟಿ ಪ್ರದೇಶದಲ್ಲಿ ಲ್ಯಾಂಡ್ ಆಗುವ ವೇಳೆ ಅಪ‍ ಘಾತಕ್ಕೆ ಈಡಾಗಿದ್ದು, ಪರಿಣಾಮ ವಿಮಾನದಲ್ಲಿದ್ದ ಆರು ಜನರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಮಾನವು ರಾಷ್ಟ್ರೀಯ ಭದ್ರತಾ ವಿಭಾಗದ ಭಾಗವಾದ ಕಝಕಿಸ್ಥಾನದ ಗಡಿ ಕಾವಲು ಪಡೆಗೆ ಸೇರಿದ ವಿಮಾನವಾಗಿದೆ ಎಂದು ರಷ್ಯಾ ಮೂಲದ ಇಂಟರ್ಫ್ಯಾಕ್ಸ್ ಸುದ್ದಿ ಮಾಧ್ಯಮ ಮಾಹಿತಿ ನೀಡಿದೆ.

ಘಟನೆಯ ಬಳಿಕ ವಿಮಾನದಲ್ಲಿದ್ದ ಒಟ್ಟು ಆರು ಜನರಲ್ಲಿ ನಾಲ್ಕು ಜನರು ಅಸುನೀಗಿದ್ದು, ಇನ್ನುಳಿದ ಎರಡು ಜನರಿಗೆ ಗಾಯಗಳಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ ಎಂದು  ತುರ್ತು ಪರಿಸ್ಥಿತಿ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ:ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಒಟ್ಟು ಸಂಪತ್ತಿನ ಮೌಲ್ಯವೆಷ್ಟು ಗೊತ್ತಾ..!?

Advertisement

ಘಟನೆಯ ಕುರಿತಾದ ಚಿತ್ರಗಳಲ್ಲಿ ವಿಮಾನವು ಹೊತ್ತಿ ಉರಿಯುತ್ತಿರುವುದು ಕಂಡುಬಂದಿದ್ದು, ಈ ಕುರಿತಾದ ವಿಡಿಯೋ ದಲ್ಲಿಯೂ ವಿಮಾನ ಬಿದ್ದ ಸ್ಥಳದಲ್ಲಿ ಭಾರಿ ಪ್ರಮಾಣದ ಹೊಗೆ ಆವರಿಸಿರುವುದು ಕಂಡು ಬಂದಿದೆ ಎಂದು ವರದಿಯಾಗಿದೆ

ಇದನ್ನೂ ಓದಿ:ಬೆಂಗಳೂರಿನಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ‘ ಇಂಗ್ಲೀಷ್’

 

 

Advertisement

Udayavani is now on Telegram. Click here to join our channel and stay updated with the latest news.

Next