Advertisement

ಗಂಡು ಮಗುವಿನ ತಾಯಿಯಾದ ಆ್ಯಮಿ ಜಾಕ್ಸನ್

08:35 AM Sep 24, 2019 | Sriram |

ಹೊಸದಿಲ್ಲಿ: ಬಹುಭಾಷೆಯ, ಬಹು ಬೇಡಿಕೆ ನಟಿ ಆ್ಯಮಿ ಜಾಕ್ಸನ್ ಅವರು ಮದುವೆಯಾಗುವುದಕ್ಕೂ ಮೊದಲೇ ಗಂಡುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮದುವೆಗೂ ಮೊದಲು ಮಗುವನ್ನು ಪಡೆಯಬೇಕೆನ್ನುವ ಅವರ ಅಭಿಲಾಷೆ ಈಡೇರಿದೆ. ಈ ವರ್ಷದ ಆರಂಭದಲ್ಲಿ ಆ್ಯಮಿ ಜಾಕ್ಸ್ ನ್ ಅವರು ಉದ್ಯಮಿ ಜಾರ್ಜ್ ಪನಾಯಿಯೋಟ್ ಎಂಬವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಅವರಿಬ್ಬರ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಬಹಿರಂಗೊಳಿಸಿದ್ದರು.

Advertisement

ಬಳಿಕ ಎಪ್ರಿಲ್ ತಿಂಗಳಲ್ಲಿ ತಾನು ತಾಯಿಯಾಗುತ್ತಿರುವ ವಿಷಯವನ್ನು ಇನ್ ಸ್ಟಗ್ರಾಂ ಮೂಲಕ ಬಹಿರಂಗ ಪಡಿಸಿದ್ದರು. ಇದೀಗ ಸೋಮವಾರ ಮಗುವಿನೊಂದಿಗೆ ತಾನು ಮತ್ತು ಭಾವೀ ಪತಿ ಇರುವ ಚಿತ್ರವನ್ನು ತನ್ನ ಇನ್ ಸ್ಟಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಲಂಡನ್ ನಾಡಿನ ಸುಂದರಿ ಆ್ಯಮಿ ಜಾಕ್ಸನ್ ಕನ್ನಡ, ತಮಿಳು, ಹಿಂದಿ ಸೇರಿದಂತೆ ನಾನಾ ಭಾಷೆಯಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ಭಾರತದಲ್ಲೂ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆಸ್ಪತ್ರೆಯಲ್ಲಿ ಭಾವೀ ಪತಿ ಮತ್ತು ಮಗುವಿನೊಂದಿಗೆ ಇರುವ ಚಿತ್ರವನ್ನು ಸುಮಾರು 7.5 ಲಕ್ಷ ಜನರು ಲೈಕ್ ಮಾಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಆ್ಯಮಿ ಜಾಕ್ಸನ್ ಮತ್ತು ಜಾರ್ಜ್ ಮುಂದಿನ ವರ್ಷ ವಿವಾಹವಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next