Advertisement

Kannada Cinema; ‘ಅಮೂಲ್ ಬೇಬಿ’ ಪೋಸ್ಟರ್ ಬಂತು

02:53 PM Jan 28, 2024 | Team Udayavani |

ಲವ್‌ ಕಂ ಕಾಮಿಡಿ ಕಥಾಹಂದರದ “ಅಮೂಲ್‌ ಬೇಬಿ’ ಸಿನಿಮಾದ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಕೆ. ಪಿ. ನವೀನ್‌ ಕುಮಾರ್‌ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆ್ಯಕ್ಷನ್‌-ಕಟ್‌ ಹೇಳಿರುವ “ಅಮೂಲ್‌ ಬೇಬಿ’ ಸಿನಿಮಾವನ್ನು “ಮಾನಸ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಬಿ. ನರಸಿಂಹಮೂರ್ತಿ ನಿರ್ಮಿಸುತ್ತಿದ್ದಾರೆ.

Advertisement

ಭಗತ್‌, ಶಿವ, ಆವಿನ್‌ ನಾಯಕರಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ವಿದ್ಯಾ ಶಾಸ್ತ್ರೀ ನಾಯಕಿಯಾಗಿದ್ದಾರೆ. ಬೇಬಿ ರೀತುಸಿಂಗ್‌, ಪೂಜಿತ, ಪ್ರತಿಮ, ಮೈತ್ರಿ ಸತೀಶ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸದ್ಯ ಸೆನ್ಸಾರ್‌ ಪಾಸ್‌ ಆಗಿರುವ”ಅಮೂಲ್‌ ಬೇಬಿ’ ಸಿನಿಮಾವನ್ನು ಮಾರ್ಚ್‌ ವೇಳೆಗೆ ತೆರೆಗೆ ತರುವ ಪ್ಲಾನ್‌ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next