Advertisement

ಉಗ್ರ ದಾಳಿ ಬೆಂಬಲಿಸಿ ಪೋಸ್ಟ್‌ :AMU ವಿದ್ಯಾರ್ಥಿ ವಿರುದ್ಧ FIR 

02:41 PM Feb 15, 2019 | Team Udayavani |

ಹೊಸದಿಲ್ಲಿ: ಆವಂತಿಪೋರಾದಲ್ಲಿ  ಆತ್ಮಾಹುತಿ ದಾಳಿಗೈದು 42 ಯೋಧರ ಬಲಿ ಪಡೆದ ಉಗ್ರರ ಪೈಶಾಚಿಕ ಕೃತ್ಯವನ್ನು ಬೆಂಬಲಿಸಿ ಟ್ವೀಟ್‌ ಮಾಡಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. 

Advertisement

ಬಾಸಿಮ್‌ ಹಿಲಾಲ್‌ ಎಂಬ ವಿದ್ಯಾರ್ಥಿ ಜೈಶ್‌  ಎ ಮೊಹಮ್ಮದ್‌ ಉಗ್ರರ  ಕೃತ್ಯವನ್ನು ಪ್ರಶಂಸಿದ್ದಾನೆ. ವಿಚಾರ ಗಮನಕ್ಕೆ ಬರುತ್ತಿದ್ದಂತೆ ಆತನನ್ನು ವಿವಿ ಸಂಸ್ಪೆಂಡ್‌ ಮಾಡಿದೆ. 

ಹಿಲಾಲ್‌ ಬಿಎಸ್‌ಸಿ ವಿದ್ಯಾರ್ಥಿಯಾಗಿದ್ದು, ಜಮ್ಮ ಮತ್ತು ಕಾಶ್ಮೀರ ಮೂಲದವನಾಗಿದ್ದಾನೆ. 

ಹಿಲಾಲ್‌ ವಿರುದ್ದ  ಐಪಿಸಿ ಸೆಕ್ಷನ್‌ 153 ಎ ಮತ್ತು 67 ಎ ಮತ್ತು ಐಟಿ ಕಾಯಿದೆ ಅಡಿ ಪ್ರಕರಣ ಗಳನ್ನು ದಾಖಲಿಸಲಾಗಿದೆ. 

ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ, ಕೂಡಲೆ ಹಿಲಾಲ್‌ ಟ್ವೀಟರ್‌ ಖಾತೆಯನ್ನೇ ಡಿಲಿಟ್‌ ಮಾಡಿದ್ದಾನೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next