Advertisement

AMS ಭಾರತ-ಎಎಂಸಿ ಆಸ್ಟ್ರೇಲಿಯಾ ಒಪ್ಪಂದ

11:50 PM Apr 19, 2023 | Team Udayavani |

ಉಡುಪಿ: ಭಾರತದ ಅಸೆಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿಯು ಆಸ್ಟ್ರೇಲಿಯಾದ ಅಸೆಟ್‌ ಮ್ಯಾನೇಜ್‌ಮೆಂಟ್‌ ಕೌನ್ಸಿಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಆಸ್ಟ್ರೇಲಿಯಾದ ಅಸೆಟ್‌ ಮ್ಯಾನೇಜ್‌ಮೆಂಟ್‌ ಕೌನ್ಸಿಲ್‌ (ಎಎಂಸಿ) ಅಧ್ಯಕ್ಷ ಟೋಬಿ ಹಾಸ್ಟೆìಡ್‌, ಸಿಇಒ ಡಾ| ಅನ್ನಿ ಗಿಬ್ಸ್, ಭಾರತದ ಅಸೆಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿ ಅಧ್ಯಕ್ಷ ಪ್ರೊ| ರಘುವೀರ್‌ ಪೈ, ಎಎಂಸಿಯ ಗಿಪ್ಸ್‌ ಪ್ಯಾಂಡ್‌ ಚಾಪ್ಟರ್‌ ಅಧ್ಯಕ್ಷ ಡಾ| ಗೋಪಿ ಚಟ್ಟೋಪಾಧ್ಯಾಯ ಉಪಸ್ಥಿತರಿದ್ದರು.

ಪ್ರೊ| ರಘುವೀರ್‌ ಪೈ ಅವರು, ಸಿಡ್ನಿ ಮೇಸೋನಿಕ್‌ ಸೆಂಟರ್‌ನಲ್ಲಿ ನಡೆಯಲಿರುವ ಎಎಂಪಿಎಕೆ-2023 ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಿದರು.

ಸಿಡ್ನಿ ಗ್ಲೋಬಲ್‌ ಫೋರಮ್‌ ವಿವಿಧ ದೇಶಗಳಿಗೆ ಅಂತಾರಾಷ್ಟ್ರೀಯ ಆಸ್ತಿ ನಿರ್ವಹಣಾ ಸಮುದಾಯದೊಂದಿಗೆ ಸಹಕರಿಸಲು ಅವಕಾಶ ನೀಡುತ್ತದೆ. ಸ್ಟೀರಿಂಗ್‌ ಕಮಿಟಿ ಸಭೆಯನ್ನು ಆಸ್ಟ್ರೇಲಿಯಾ, ಯುಎಸ್‌ಎ, ಫ್ರಾ®Õ…, ಯುಕೆ, ಕೆನಡಾ, ಸ್ಲೊವೇನಿಯಾ, ಜಪಾನ್‌, ದಕ್ಷಿಣ ಆಫ್ರಿಕಾ, ಮಲೇಷ್ಯಾ ಮತ್ತು ಭಾರತದಿಂದ ಪ್ರತಿನಿಧಿಸಲಾಯಿತು. ಸ್ಟೀರಿಂಗ್‌ ಕಮಿಟಿ ಸಭೆಯು ಅಸೆಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಹೊಂದಿಸಲು ಲ್ಯಾಂಡ್‌ಸ್ಕೇಪ್‌ ಡಾಕ್ಯುಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ತಿ ನಿರ್ವಹಣೆಯ ಮಾನದಂಡಗಳಿಗಾಗಿ ಐಎಸ್‌ಒದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಮೂರು ದಿನಗಳ ಕಾಲ ನಡೆದ ಸಭೆಯಲ್ಲಿ ಹಲವಾರು ಪರಿಷ್ಕರಣೆಗಳು ಮತ್ತು ಸಂಪಾದನೆಗಳ ಅನಂತರ ಹಲವಾರು ಭಾಷೆಗಳಲ್ಲಿ ಮುಂದಿನ ವರ್ಷ ಲ್ಯಾಂಡ್‌ಸ್ಕೇಪ್‌ ಡಾಕ್ಯುಮೆಂಟ್‌ ಅನ್ನು ಪ್ರಕಟಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next