Advertisement

ಅಮೃತಾ ಟೀಚರ್‌

03:50 AM Jul 07, 2017 | Team Udayavani |

ನೀವು “ಒಂದು ಮೊಟ್ಟೆಯ ಕಥೆ’ ಚಿತ್ರದ “ಚಂದ ಅವಳು … ‘ ಹಾಡು ನೋಡಿದ್ದರೆ ಈ ಹುಡುಗಿಯ ಪರಿಚಯ ಸಿಗುತ್ತದೆ. ಇನ್ನು ಪರಿಚಯ ಜಾಸ್ತಿಯಾಗಬೇಕು, ನಟನೆ ನೋಡಬೇಕೆಂದರೆ ನೀವು ಇವತ್ತು ತೆರೆಕಾಣುತ್ತಿರುವ “ಒಂದು ಮೊಟ್ಟೆಯ ಕಥೆ’ ಚಿತ್ರ ನೋಡಬೇಕು. ಆ ಚಿತ್ರ ಮೂವರು ನಾಯಕಿಯರಲ್ಲಿ ಅಮೃತಾ ನಾಯಕ್‌ ಕೂಡಾ ಒಬ್ಬರು. ಸದ್ಯ ಬಿಡುಗಡೆಯಾಗುತ್ತಿರುವ “ಒಂದು ಮೊಟ್ಟೆಯ ಕಥೆ’ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಎದುರು ನೋಡುತ್ತಿದ್ದಾರೆ ಅಮೃತಾ. 

Advertisement

ಅಮೃತಾ ನಾಯಕ್‌ ಮೂಲತಃ ಮಂಗಳೂರಿನ ಹುಡುಗಿ. ಚಿಕ್ಕಂದಿನಿಂ ದಲೂ ಸಿನಿಮಾ ಆಸಕ್ತಿ ಹೊಂದಿದ್ದ ಅಮೃತಾಗೆ ಮೊದಲು ಸಿಕ್ಕಿದ್ದು ಧಾರಾವಾಹಿ. “ಯಶೋಧೆ’ ಎಂಬ ಧಾರಾವಾಹಿ ಯಲ್ಲಿ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಅಮೃತಾಗೆ ಸಹಜ ವಾಗಿಯೇ ಸಿನಿಮಾ ಮಾಡುವ ಆಸೆ ಇತ್ತು. ಆದರೆ, ಆ ಆಸೆ ಇಷ್ಟು ಬೇಗ ಈಡೇರುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಒಂದು ಇವೆಂಟ್‌ನಲ್ಲಿ ಇವರನ್ನು ನೋಡಿದ ಸ್ನೇಹಿತರೊಬ್ಬರು, ಸಿನಿಮಾವೊಂದಕ್ಕೆ ಆಡಿಷನ್‌ ನಡೆಯುತ್ತಿದೆ, ನೀವು ಹೋಗಿ ಎಂದರಂತೆ. ಅದರಂತೆ, “ಒಂದು ಮೊಟ್ಟೆಯ ಕಥೆ’ ಚಿತ್ರದ ಆಡಿಷನ್‌ನಲ್ಲಿ ಪಾಲ್ಗೊಂಡರು. ಆಡಿಷನ್‌ನಲ್ಲಿ ಆಯ್ಕೆಯಾದ ಅಮೃತಾಗೆ “ನೀವಿಲ್ಲಿ ಲೆಕ್ಚರರ್‌ ಪಾತ್ರ ಮಾಡುತ್ತಿದ್ದೀರಿ’ ಎಂದಾಗ ಮೊದಲು ಭಯವಾಯಿತಂತೆ. ಲೆಕ್ಚರರ್‌ ಪಾತ್ರವನ್ನು ನಿಭಾಯಿಸಬಹುದಾ ಎಂಬ ಸಂದೇಹ ಅವರಲ್ಲಿ ಇತ್ತಂತೆ. ಆದರೆ, ಚಿತ್ರತಂಡ ಎರಡು ತಿಂಗಳು ರಿಹರ್ಸಲ್‌ ಮಾಡಿಸುವ ಮೂಲಕ ಭಯ ದೂರವಾಯಿತಂತೆ. “ಒಂದು ಮೊಟ್ಟೆಯ ಕಥೆ ಒಂದು ಒಳ್ಳೆಯ ಅನುಭವ. ಮೊದಲ ಚಿತ್ರದಲ್ಲೇ ಒಳ್ಳೆಯ ತಂಡ ಸಿಕ್ಕಿದೆ. ರಿಹರ್ಸಲ್‌ ಮಾಡಿದ್ದರಿಂದ ಯಾವುದೇ ಭಯವಿಲ್ಲದೇ ನಟಿಸಲು ಸಾಧ್ಯವಾಯಿತು’ ಎನ್ನುವುದು ಅಮೃತಾ ಮಾತು.  ಅಮೃತಾಗೆ ಈಗಾಗಲೇ ಒಂದೆರಡು ಸಿನಿಮಾಗಳ ಅವಕಾಶಗಳು ಬಂದಿವೆ. ಸದ್ಯ ಆಮೃತಾ “ಮೊಟ್ಟೆ’ಯನ್ನು ಎದುರು ನೋಡುತ್ತಿದ್ದಾರೆ.

– ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next