Advertisement
ಅನುದಾನದಲ್ಲಿ ನಗರ, ಪಟ್ಟಣವನ್ನು ಸ್ವಚ್ಛ, ಸುಂದರವಾಗಿಸಬೇಕು. ಹಸಿ ಕಸ, ಒಣಕಸ ಸಂಸ್ಕರಣೆಗೆ ಯಂತ್ರ ಖರೀದಿ, ಆವರಣ ಗೋಡೆ, ಬೇಲಿ, ಸಂಪರ್ಕ ರಸ್ತೆ, ಶೌಚಾಲಯ ನಿರ್ಮಾಣ, ಸಕ್ಕಿಂಗ್ ಯಂತ್ರ, ಟ್ಯಾಂಕರ್ ಖರೀದಿ, ಪೌರಕಾರ್ಮಿಕರಿಗೆ ಸಮವಸ್ತ್ರ, ಕಲುಷಿತ ನೀರು ಸಂಸ್ಕರಣೆ, ಮಾಹಿತಿ ಚಟುವಟಿಕೆ, ನಗರ ಹಸುರೀ ಕರಣ, ಸೌಂದರ್ಯ ವೃದ್ಧಿ ಮಾಡಬಹುದು.
Related Articles
Advertisement
ಪ್ರಗತಿಯಲ್ಲಿ ಕುಂದಾಪುರ ಮುಂದೆ:
ಅನುದಾನ ಬಿಡುಗಡೆಗೊಂಡ 75 ಪೌರಸಂಸ್ಥೆಗಳ ಪೈಕಿ ತ್ಯಾಜ್ಯ ಸಂಸ್ಕರಣ ಪ್ರಗತಿಯಲ್ಲಿ ಕುಂದಾಪುರ ಪುರಸಭೆ ಮುಂಚೂಣಿಯಲ್ಲಿದೆ. ಉಡುಪಿ, ದ.ಕ. ಜಿಲ್ಲೆಗಳಲ್ಲಿ ಕುಂದಾಪುರ ಪುರಸಭೆ 96 ಶೇ., ಕಾರ್ಕಳ ಪುರಸಭೆ 93.9 ಶೇ., ಬೈಂದೂರು ಹೊಸ ಪಟ್ಟಣ ಪಂಚಾಯತ್ ಆದ ಕಾರಣ 0 ಶೇ., ಬಂಟ್ವಾಳ ಪುರಸಭೆ 57.14 ಶೇ., ಬೆಳ್ತಂಗಡಿ ಪ. ಪಂ. 66.67 ಶೇ., ಮೂಡುಬಿದಿರೆ ಪುರಸಭೆ 66.67 ಶೇ., ಪುತ್ತೂರು ನಗರಸಭೆ 57.14 ಶೇ. ಪ್ರಗತಿ ಸಾಧಿಸಿವೆ. ಕೋಲಾರ ನಗರಸಭೆ ಕನಿಷ್ಠ ಅಂದರೆ ಶೇ. 2.48ರಷ್ಟು ಪ್ರಗತಿ ಸಾಧಿಸಿದೆ.
ಕಸದಿಂದ ಗೊಬ್ಬರ:
ಕುಂದಾಪುರದಲ್ಲಿ ಶೇ. 96 ಪ್ರಗತಿ ಆಗುವಲ್ಲಿ ಪುರ ಸಭೆಯ ಪಾಲು ಮಹತ್ವದ್ದಾಗಿದೆ. ಇಲ್ಲಿ ಕಸವನ್ನು ಪ್ರತ್ಯೇಕಿಸಿ ಗೊಬ್ಬರ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಕಸದ ರಾಶಿ ಹೆಚ್ಚಿಸುತ್ತಾ ಕಸ ವಿಲೇಗೆ ಜಾಗದ ಕೊರತೆ ಉಂಟಾಗದಂತಿರಲು ಈ ವ್ಯವಸ್ಥೆ ಅನುಕೂಲವಾಗಿದೆ. ಕಸ ಪ್ರತ್ಯೇಕಿಸಲು ಯಂತ್ರಗಳು, ಕಸ ಪ್ರತ್ಯೇಕಿಸಿ ಮಾರಾಟ, ಕಸಗೊಬ್ಬರ, ಎರೆಗೊಬ್ಬರ, ಜೀವಜಲ ಹೀಗೆ ವೈವಿಧ್ಯಮಯವಾಗಿ ವಿಲೇವಾರಿ ನಡೆಯುತ್ತದೆ.
ರಾಜ್ಯದ 75 ಸಂಸ್ಥೆಗಳು, ಅಧಿಕಾರಿಗಳ ಜತೆ ನ. 11ರಂದು ನಡೆಯಬೇಕಿದ್ದ ಅಮೃತ ನಿರ್ಮಲ ನಗರ ಯೋಜನೆ ಕುರಿತ ಸಭೆ ನೀತಿಸಂಹಿತೆ ಕಾರಣದಿಂದ ಮುಂದೂಡಿಕೆಯಾಗಿದೆ. ಚುನಾ ವಣೆ ಬಳಿಕ ಪ್ರಕ್ರಿಯೆ ಮುಂದುವರಿ ಯಲಿದೆ. ಅನುದಾನ ಬಳಕೆಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ.-ಎಂ. ಕೂರ್ಮಾ ರಾವ್ ,ಜಿಲ್ಲಾಧಿಕಾರಿ, ಉಡುಪಿ
-ಲಕ್ಷ್ಮೀ ಮಚ್ಚಿನ