ದೇಹಕ್ಕೆ ಬೇಕಾಗಿರುವ ಪೋಷಕಾಂಶವನ್ನು ಒದಗಿಸುವ ನಿಟ್ಟಿನಲ್ಲಿ ತರಕಾರಿಗಳು ನಮಗೆ ಹೆಚ್ಚು ಸಹಕಾರಿ. ದೇಹಕ್ಕೆ ಬೇಕಾದ ವಿಟಾಮಿನ್‌ಗಳನ್ನು ಪೂರೈಸುವ ಕೆಲಸವನ್ನು ನಾವು ಬಳಕೆ ಮಾಡುವ ಹೆಚ್ಚಿನ ತರಕಾರಿಗಳು, ಸೊಪ್ಪುಗಳು ಮಾಡುತ್ತವೆ. ನಮ್ಮ ದೈನಂದಿನ ಆಹಾರ ಕ್ರಮಗಳಲ್ಲಿಯೂ ಸೊಪ್ಪು, ತರಕಾರಿಯ ಬಳಕೆಯನ್ನೇ ನಾವು ಹೆಚ್ಚಿಸಿದಲ್ಲಿ ಆರೋಗ್ಯವಂತರಾಗಿರಲು ಸಾಧ್ಯ.
ಆಷಾಢ ಮಾಸದ ಜಡಿ ಮಳೆಗೆ ಚಳಿಯಲ್ಲಿ ನಡುಗುವ ದೇಹಕ್ಕೆ ಜ್ವರ, ಶೀತ, ತಲೆನೋವು ಬರುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭದಲ್ಲಿ ಹೆಸರಿನಲ್ಲಿಯೇ ಅಮೃತವನ್ನು ಹೊತ್ತಿರುವ ಅಮೃತಬಳ್ಳಿಯ ಆಹಾರ ವೈವಿಧ್ಯಗಳ ಸೇವನೆಯಿಂದ ಈ ಸಮಸ್ಯೆಗಳನ್ನು ತಡೆಗಟ್ಟುವುದು ಸಾಧ್ಯ.
ವಿಧಾನ: ಕಾಯಿತುರಿ, ಉಪ್ಪು, ಹುಣಸೇ ಹಣ್ಣು, ಹಸಿಮೆಣಸು,ಜೀರಿಗೆ, ಬೆಲ್ಲ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಅಮೃತ ಬಳ್ಳಿಯ ಎಲೆಗಲನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹೀಗೆ ತಯಾರಾದ ತಂಬುಳಿಯನ್ನು ಅನ್ನ, ದೋಸೆ ಜತೆಗೆ ಸೇವಿಸಿದರೆ ಹೆಚ್ಚು ಸೂಕ್ತ.
ಬೇಕಾಗುವ ಸಾಮಗ್ರಿಗಳು
ಅಮೃತ ಬಳ್ಳಿಯ ಎಲೆ: ಹತ್ತು
ಮೊಸರು: ಒಂದು ಕಪ್
ತೆಂಗಿನ ತುರಿ: ಒಂದು ಕಪ್
ಉಪ್ಪು ರುಚಿಗೆ ತಕ್ಕಷ್ಟು
ಹುಣಸೇ ಹಣ್ಣು ರುಚಿಗೆ ತಕ್ಕಷ್ಟು
ಹಸಿಮೆಣಸು: ಐದು
ಜೀರಿಗೆ ಒಂದು ಚಿಟಿಕೆ
ಬೆಲ್ಲ ಒಂದು ಟೆಬಲ್ ಸ್ಪೂನ್
ಬಟಾಟೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಿಟಿಕೆ ಉಪ್ಪು ಹಾಕಿ. ಇದರಿಂದ ಸಿಪ್ಪೆ ಸುಲಭವಾಗಿ ತೆಗೆಯಲು ಸಾಧ್ಯವಾಗುತ್ತದೆ.
ಬಟಾಣಿಕಾಳನ್ನು ಬೇಯಿಸುವುದಕ್ಕಿಂತ ಮೊದಲು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ. ಇದರಿಂದ ಹಸುರು ಬಣ್ಣ ಹಾಗೇ ಉಳಿಯುತ್ತದೆ.
ಭಾವಭೃಂಗ