Advertisement

ಸೆನ್ಸಾರ್‌ ಮುಂದೆ ಅಮೃತಮತಿ

09:47 AM Dec 04, 2019 | Suhan S |

ಹಿರಿಯ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹೊಸಚಿತ್ರ ಅಮೃತಮತಿಸದ್ದಿಲ್ಲದೆ ತನ್ನಕೆಲಸಗಳನ್ನು ಪೂರ್ಣಗೊಳಿಸಿದ್ದು, ಚಿತ್ರ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಮುಂದೆ ಬರಲು ತಯಾರಾಗಿದೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 13ನೇ ಶತಮಾನದ ಕಥೆ ಯೊಂದನ್ನು ಆಯ್ಕೆಮಾಡಿಕೊಂಡು, ಸಿನಿಮಾ ಮಾಡಲು ಮುಂದಾಗಿದ್ದಾರೆ.

Advertisement

ಹದಿಮೂರನೇ ಶತಮಾನದಲ್ಲಿ ಮಹಾಕವಿ ಜನ್ನ ಬರೆದಿರುವ ಯಶೋಧರ ಚರಿತೆಕೃತಿಯನ್ನು ಆಧರಿಸಿದ ತಯಾರಾಗುತ್ತಿರುವ ಈ ಚಿತ್ರ ಅಮೃತಮತಿಹೆಸರಿನಲ್ಲಿ ತೆರೆಗೆ ಬರುತ್ತಿದೆ. ಅರಮನೆಯಲ್ಲಿದ್ದರೂ, ಅಷ್ಟೆ„ಶ್ವರ್ಯಗಳಿದ್ದರೂ ಅಮೃತಮತಿ ಮನಸ್ಸಿಗೆ ನೆಮ್ಮದಿ, ಖುಷಿ ಇರುವುದಿಲ್ಲ. ಇದೇ ವೇಳೆ ಒಮ್ಮೆ ಕುದುರೆಲಾಯದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ಕೆಲಸದ ಆಳು ಅಷ್ಟಾವಂಕನ

ಹಾಡನ್ನು ಕೇಳಿದ ಅಮೃತಮತಿ ಅವನ ಪ್ರೀತಿಯಲ್ಲಿ ಬೀಳುತ್ತಾಳೆ.ಮುಂದೆ ಏನಾಗುತ್ತದೆ ಎನ್ನುವುದರ ಸುತ್ತ ಅಮೃತಮತಿಚಿತ್ರದ ಕಥೆ ಸಾಗುತ್ತದೆ.

ಇತ್ತೀಚೆಗೆ ಪ್ರತಿ ಚಿತ್ರದಲ್ಲೂ ಸಾಕಷ್ಟು ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ನಟಿ ಹರಿಪ್ರಿಯಾ ಈ ಚಿತ್ರದಲ್ಲಿ ಅಮೃತಮತಿಆಗಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಟಕಿಶೋರ್‌ ಯಶೋಧರನ ಪಾತ್ರದಲ್ಲಿ, ನಟ ತಿಲಕ್‌ ಅಷ್ಟಾವಂಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ಹಿರಿಯ ನಟ ಸುಂದರರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್‌,ಅಂಬರೀಶ್‌ ಸಾರಂಗಿ, ವತ್ಸಲಾ ಮೋಹನ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನಾಗರಾಜಅದವಾನಿ ಛಾಯಾಗ್ರಹಣವಿದ್ದು, ಸುರೇಶ್‌ ಅರಸ್‌ ಸಂಕಲನ ಕಾರ್ಯವಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಶಮಿತಾ ಮಲಾಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ರಾಜೇಶ್‌ ಕೃಷ್ಣನ್‌, ಸುನೀತಾ, ಖಾಸಿಂ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ಬ್ಯಾನರ್‌ನಲ್ಲಿ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next