Advertisement
1ಕೆಲವು ವರ್ಷಗಳ ಹಿಂದೆ, 90ರ ದಶಕದ ಆದಿಭಾಗದಲ್ಲಿ. ಉತ್ತರ ದಕ್ಷಿಣವಾಗಿ ಹಬ್ಬಿಕೊಂಡಿರುವ ಪಶ್ಚಿಮ ಘಟ್ಟಗಳ ಸಾಲುಗಳ ತಪ್ಪಲಿನ ಸೆರಗಿಗೆ ಹೊಲಿದಂತೆ ಇರುವ ಮಲೆನಾಡು. ಆ ಮಲೆನಾಡಿನ ತುಂಬಾ ಅಲ್ಲಲ್ಲಿ ಇರುವ ಗುಡ್ಡಬೆಟ್ಟಗಳಲ್ಲಿ, ತಲೆಯೆತ್ತಿ ನಿಂತಿದ್ದ ಸಾವಿರಾರು ಹಸಿರು ಮರಗಳು ತುಂಬಿದ್ದವು. ಈ ಪ್ರದೇಶದ ಮಧ್ಯೆ ಸಕಲೇಶಪುರ ಎಂಬ ಪುಟ್ಟ ಪಟ್ಟಣ. ಆ ಪಟ್ಟಣದಿಂದ ಹಾನುಬಾಳು ಮತ್ತು ಮೂಡಿಗೆರೆ ಮುಂತಾದ ಊರುಗಳಿಗೆ ಹೋಗುವ ಒಂದು ಹಳೆಯ ಡಾಮರ್ ಹಾಕಿದ ರಸ್ತೆ ಇತ್ತು. ಎರಡು ಕಡೆಗಳಲ್ಲೂ ಕಾಫಿ ತೋಟಗಳಿಂದ ತುಂಬಿರುವ ಆ ರಸ್ತೆಯಲ್ಲಿ, ಹತ್ತು ಕಿ.ಮೀ. ಹೋದರೆ ಸಿಗುವ ಪುಟ್ಟ ಊರೇ ರಕ್ಷಿದಿ. ಆ ಊರಿನ ಸುತ್ತಮುತ್ತ ಹಲವು ಕಾಫಿ ಎಸ್ಟೇಟ್‌ಗಳಿದ್ದವು. ಅವುಗಳಲ್ಲಿ ಕಾಫಿಯ ಜೊತೆ ಕಿತ್ತಳೆ, ಏಲಕ್ಕಿ , ಕಾಳುಮೆಣಸು… ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಕೆಲವು ಎಸ್ಟೇಟ್‌ಗಳಲ್ಲಿ ಹಳೆಯದಾದ ದೊಡ್ಡ ದೊಡ್ಡ ಬ್ರಿಟಿಷ್ ಬಂಗಲೆಗಳಿದ್ದವು. ಆ ಎಸ್ಟೇಟುಗಳಲ್ಲಿನ ಕಾಫಿಬೆಳೆಗಾರರಲ್ಲಿ ಹಲವರು ಆ ಬ್ರಿಟಿಷ್ ಬಂಗಲೆಗಳಲ್ಲಿ ವಾಸವಾಗಿದ್ದರು.
ಆ ಹಳ್ಳಿಯ ಅಂಚಿನಲ್ಲಿ ಒಂದು ಒಂಟಿ ಮನೆ, ಅÇÉೊಂದು ಮಧ್ಯಮ ವರ್ಗದ ಕುಟುಂಬ ವಾಸಮಾಡುತ್ತಿತ್ತು. ಆ ಮನೆಯಲ್ಲಿ ಒಬ್ಬಳು ಎರಡು ವರ್ಷದ ಪುಟ್ಟ ಹುಡುಗಿ ಇದ್ದಳು. ಅವಳ ಹೆಸರು ಅಮೃತಾ. ಮನೆಯ ಸುತ್ತಾ ಕಾಡುಮರಗಳು, ತೋಟ, ಹಣ್ಣಿನ ಗಿಡಗಳು, ಕಾಡು ಹೂವಿನ ಗಿಡಮರಗಳು, ಹಕ್ಕಿಗಳು ತುಂಬಿದ್ದವು. ಆ ಮನೆಯಲ್ಲಿದ್ದುದು ಏಳು ಜನ. ಅಪ್ಪ , ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯ, ಗೆಂತಣ್ಣ ಮತ್ತು ಪುಟ್ಟ ಹುಡುಗಿ ಅಮೃತಾ. 2
ಅಂದು ಭಾನುವಾರ ಹವಾ ಚನ್ನಾಗಿತ್ತು. ಅಮೃತಾ ಕಿಟಕಿಯಿಂದಾಚೆ ನೋಡಿದಾಗ ಸೂರ್ಯ ಬಂಗಾರದ ಬಣ್ಣಕ್ಕೆ ಹೊಳೆಯುತ್ತಿದ್ದ. ಗಾಳಿ ಹೂವಿನ ಪರಿಮಳ ಬೀರುತ್ತಿತ್ತು. ಅಂದು ಅಣ್ಣಯ್ಯನೂ ಬೇಗನೆ ಎದ್ದಿದ್ದ, ಅಮ್ಮ ಅಡಿಗೆ ಮನೆಯಲ್ಲಿ ಬೆಳಗಿನ ತಿಂಡಿ ಸಿದ್ಧಪಡಿಸುತ್ತಿದ್ದಳು. ಅಣ್ಣಯ್ಯ ಬೇಗನೆ ಎದ್ದಿ¨ªಾನೆಂದರೆ ಏನೋ ವಿಶೇಷವಿದೆ ಎಂದೇ ಅರ್ಥ. ಅಣ್ಣಯ್ಯ ಬೇಗನೆ ಮುಖ ತೊಳೆದು ಬಂದು ಅಮೃತಾಳನ್ನು ಕರೆದ, “”ಪುಟ್ಟಿà, ಇವತ್ತು ಪುರುಷನೊಟ್ಟಿಗೆ ಹೊಳೆ ಹತ್ರ ಹೋಗಕ್ಕುಂಟು, ನೀನು ಬರಾದಿಲ್ವ?” ಎಂದ.
Related Articles
“”ಓ… ನಾನು ಬರ್ತೇನೆ… ಎಷ್ಟು ಹೊತ್ತಿಗೆ?”
“”ಈಗ್ಲೆ ತಿಂಡಿ ತಿಂದು ಬೇಗ ಹೋಗುವ” ಎಂದ ಅಣ್ಣಯ್ಯ.
“”ಏ… ಇವತ್ತು ಹೊಳೆಗೇ…” ಎಂದು ಕೂಗುತ್ತಾ ಅಮೃತಾ ಅಡುಗೆ ಮನೆಗೆ ಓಡಿದಳು. ಅವಳಿಗೆ ನೀರಿನಲ್ಲಿ ಆಡುವುದೆಂದರೆ ಮೋಜಿನ ವಿಷಯ. ನೀರಿನಲ್ಲಿ ಪುಟ್ಟ ಮೀನುಗಳನ್ನು ಅವಳು ಹಿಡಿಯಬಹುದು. ಆದರೆ, ಅಮೃತಾ ಹೊಳೆಗೆ ಹೋಗಲು ಅಮ್ಮನ ಒಪ್ಪಿಗೆ ಬೇಕು.
“”ಅಮ್ಮಾ ನಾನೂ ಹೋಗಬಹುದಾ?” ಎಂದಳು ಅಮೃತಾ.
“”ಹೋಗು, ಆದ್ರೆ ಹೆಚ್ಚು ಹೊತ್ತು ನೀರಲ್ಲಿ ಆಡಾºರದು ಮತ್ತೆ ಆಳದ ಗುಂಡಿಗಳಿಗೆ ಹೋಗಕೂಡದು. ಪುಟ್ಟ ನೀನೂ ಅಷ್ಟೆ!”
Advertisement
ಎಂದು ಅಮ್ಮ ಎರಡೆರಡು ಬಾರಿ ಎಚ್ಚರಿಕೆ ನೀಡಿದಳು, ಅಲ್ಲದೇ ಅಮೃತಾ ಇನ್ನೂ ಪುಟ್ಟವಳಾದುದರಿಂದ ಆದಷ್ಟು ಬದಿಯÇÉೇ ಆಟವಾಡಿಕೊಳ್ಳಬೇಕೆಂದೂ ಹೇಳಿದಳು. ಇಬ್ಬರೂ ತಿಂಡಿ ತಿಂದಾದ ಮೇಲೆ, ಅಮ್ಮ ಅವರಿಬ್ಬರಿಗೆ ಒಂದೊಂದು ಟವೆಲುಗಳನ್ನು ಕೊಟ್ಟಳು. ಅದು ನೀರಿನಲ್ಲಿ ಆಡಿದ ಮೇಲೆ ಮೈ ಒರೆಸಿಕೊಳ್ಳಲು. “”ಸರಿ ಈಗ ಹೋಗಿ ಬನ್ನಿ” ಎಂದಳು ಅಮ್ಮ.
ಇಬ್ಬರೂ ಜೊತೆಯಾಗಿ ಹೊರ ನಡೆದರು. ಅಣ್ಣಯ್ಯ ಮೀನು ಹಿಡಿಯುವ ಬುಟ್ಟಿಯೊಂದನ್ನು ಹಿಡಿದುಕೊಂಡಿದ್ದ. ಅಮೃತಾ ಕುಣಿಯುತ್ತ¤ ಅವನೊಂದಿಗೆ ಮುಂದೆ ಸಾಗಿದಳು. ಅÇÉೊಂದು ಇÇÉೊಂದು ಹಕ್ಕಿಗಳು ರೆಕ್ಕೆ ಬಡಿಯುತ್ತ ಹಾರುತ್ತಿದ್ದವು. ಆಕಾಶ ಸ್ವತ್ಛ ನೀಲಿಯದಾಗಿತ್ತು. ರಸ್ತೆ ಬದಿಯ ಹುಲ್ಲುಗಳು ತೂಗುತ್ತಿದ್ದವು. ಮುಂದೆ ಮುಂದೆ ಹೋಗುತ್ತಿದ್ದಂತೆ ಮೇಲಿನ ಅಡ್ಡದಾರಿ ಬಂತು. ಇನ್ನು ಪುರುಷನ ಮನೆಗಿರುವುದು ಅರ್ಧ ಮೈಲೆಂದು ಅಣ್ಣಯ್ಯ ಹೇಳಿದ.
ಇಬ್ಬರೂ ಆ ಅಡ್ಡ ದಾರಿಯÇÉೇ ನಡೆದುಹೋದರು. ಮಣ್ಣಿನಲ್ಲಿ ಅರ್ಧ ಹೂತಿದ್ದ ಚೌಕಾಕಾರದ ಪುಟ್ಟ ಜಲ್ಲಿಕಲ್ಲುಗಳು ಬಿಸಿಲಿಗೆ ಬೆಚ್ಚಗಾಗುತ್ತಿದ್ದವು. ಕೆಲವು ನೆಲದ ಮೇಲೆ ಹಾಗೇ ಕುಳಿತಿದ್ದು ಅವರ ಕಾಲಿಗೆ ಸಿಕ್ಕಿ ಬುಡಬುಡನೆ ಉರುಳಿ ಹೋಗುತ್ತಿದ್ದವು. ರಸ್ತೆ ಬದಿಯಲ್ಲಿ ಯಾರ್ಯಾರ¨ªೋ ಮನೆಗಳಿದ್ದವು. ಹಾದಿ ಪಕ್ಕದ ಚಿತ್ರಂಗಿ ಪೊದೆಗಳು ಸಾಕಷ್ಟು ಹೂ ಬಿಟ್ಟಿದ್ದವು.
“”ಬೇಗ ಹೋಗುವ ಪುಟ್ಟಿ, ಮತ್ತೆ ಹೊತ್ತಾಗ್ತಿ” ಅಣ್ಣಯ್ಯ ಹೇಳಿದ. ಅಮೃತಾ ಬೇಗ ಬೇಗ ಹೆಜ್ಜೆ ಹಾಕಿದಳು.“”ಅಲ್ಲಿ ತುಂಬಾ ನೀರಿದ್ರೆ ನಾವು ಈಜೆ¤àವೆ, ನೀನು ಇಳಿಬಾರ್ಧು” ಎಂದ ಅಣ್ಣಯ್ಯ.
“”ಯಾಕೆ, ನನ್ನನ್ನೂ ಇಳುÕ ನನಗೂ ಈಜ್ಬೇಕು”
“”ಪುಟ್ಟಿ! ನಮ್ಗೆ ಈಜಕ್ಕೆ ಬರೆ¤. ನಾವೆÇÉಾ ದೊಡ್ಡವರು. ನೀನು ಬರಬಾರ್ಧು, ನಿಲ್ಲು ಅಮ್ಮನಿಗೆ ಹೇಳೆ¤àನೆ” ಒದರಿದ ಅಣ್ಣಯ್ಯ.
“”ಈ… ನೀನಾದ್ರೆ ಈಜಬಹುದಾ ನನಗೂ…” ಎಂದು ರಾಗ ತೆಗೆದಳು ಅಮೃತಾ.
“”ಸರಿ ಈಗ ಬಾ” ಅಣ್ಣಯ್ಯ ಮುನ್ನಡೆದ.
“”ಹಿØಹಿØಹಿØ” ಎನ್ನು ತ್ತ ಅಮೃತಾ ಅವನ ಹಿಂದೆಯೇ ಹೊರಟಳು. 3
ಶಾಲಾ ವಾರ್ಷಿಕೋತ್ಸವ ಹತ್ತಿರ ಬಂದಿತ್ತು. ತರಗತಿಯಲ್ಲಿ ಕುಳಿತಿ¨ªಾಗ ಸುನಂದಾ ಟೀಚರ್ ಮುಂಬರಲಿರುವ ಸ್ಕೂಲ್ ಡೇಯ ಬಗ್ಗೆ ಮಾತಾಡುತ್ತಿದ್ದರು. ಇನ್ನು ಸ್ಕೂಲ್ ಡೇಗೆ ಒಂದು ತಿಂಗಳಿತ್ತು. ಸ್ಕೂಲ್ ಡೇ ಎಂದರೆ ಮಕ್ಕಳಿಗೆಲ್ಲರಿಗೂ ಉತ್ಸಾಹ. ಇನ್ನು ಒಂದು ತಿಂಗಳು ಕಾಲ ಸ್ಕೂಲ್‌ಡೇಗೆ ಸಿದ್ಧತೆ. ಎಲ್ಲರೂ ನೃತ್ಯ ಹಾಡುಗಳ ತಯಾರಿ ನಡೆಸಬೇಕು. ಅದರ ಜೊತೆಗೆ ಬೇರೆಬೇರೆ ಆಟೋಟ ಸ್ಪರ್ಧೆಗಳು, ಗೆದ್ದವರಿಗೆ ದೊರಕುವ ಬಹುಮಾನಗಳು. ಓಹ್ ಸಂಭ್ರಮವೇ ಸಂಭ್ರಮ. ಟೀಚರ್, “”ಯಾರು ಯಾರು ಸ್ಕೂಲ್‌ಡೇಯ ನೃತ್ಯಕ್ಕೆ ಸೇರುತ್ತೀರಿ?” ಎಂದು ಕೇಳಿದರು. ಲಿಖೀತಾ, ಅಮೃತಾ, ಅಸ್ಮತ್ ಇನ್ನೂ ಕೆಲವರು ಕೈ ಎತ್ತಿದರು. ಟೀಚರ್, “”ಸರಿ ಇನ್ನೆರಡು ದಿವಸ ಬಿಟ್ಟು ಹೇಳ್ತೀನಿ” ಎಂದರು.
ಮಾರನೆಯ ದಿನ ಅಮೃತಾ ತರಗತಿಯಲ್ಲಿ ಕುಳಿತಿದ್ದಳು. ಇದ್ದಕ್ಕಿದ್ದಂತೆ ಪಕ್ಕದ ತರಗತಿಯ ಕೋಣೆಯಿಂದ ಆಫೀಸ್ ರೂಮಿನ ಕಡೆಗೆ ಯಾರೋ ಹೋದಂತೆನ್ನಿಸಿತು. ಅಮೃತಾ ಕಿಟಕಿಯಿಂದ ಇಣುಕಿದಳು. ಯೋಗಿತಾ ಮತ್ತು ಇಂಪನಾ ಒಂದು ಟೇಪ್ ರೆಕಾರ್ಡರ್ ಹಿಡಿದುಕೊಂಡು ಆ ಕಡೆ ಒಯ್ಯುತ್ತಿದ್ದುದು ಕಾಣಿಸಿತು. “ಓಹ್ ಡ್ಯಾನ್ಸ್’ ಎಂದು ಅಮೃತಾ ಸಂತೋಷಗೊಂಡಳು. ಸ್ವಲ್ಪ ಹೊತ್ತಾದ ಮೇಲೆ ಸುನಂದಾ ಟೀಚರ್ ಆರನೆಯ ತರಗತಿಯಿಂದ ಚೆನ್ನವೀರನ ಮಗಳು ರಮ್ಯಾಳನ್ನು ಆಫೀಸ್ ರೂಮಿಗೆ ಬರಹೇಳಿದರು. ಅಮೃತಾ ಅದೆಲ್ಲವನ್ನು ಕಿಟಕಿಯಿಂದ ನೋಡುತ್ತಿದ್ದಳು. ಮಧ್ಯಾಹ್ನವಾಗುತ್ತಿತ್ತು. ಇನ್ನೇನು ಊಟಕ್ಕೆ ಗಂಟೆ ಹೊಡೆಯಬೇಕಿತ್ತು. ತರಗತಿಯಲ್ಲಿ ಯಾವ ಟೀಚರ್ ಕೂಡಾ ಇರಲಿಲ್ಲ. ಈಗ ಯೋಗಿತಾ ಟೇಪ್ ರೆಕಾರ್ಡರ್ ಮತ್ತು ಕ್ಯಾಸೆಟ್ ಹಿಡಿದು ಅಮೃತಾ ಇದ್ದ ಐದನೆಯ ತರಗತಿಗೆ ಬರುತ್ತಿರುವುದು ಕಾಣಿಸಿತು. ಯೋಗಿತಾ ಯಾಕೋ ಬಂದಿದ್ದಳು. ಅಮೃತಾ ಓಡಿಹೋಗಿ, “”ಯೋಗಿತಾ, ಏನೇ ಡ್ಯಾನ್ಸ್ ಏನೇ?” ಎಂದು ಕಾತರದಿಂದ ಕೇಳಿದಳು.
“”ಹ್ಞುಂ ಹೌದು ಸುನಂದ ಟೀಚರ್ ಡ್ಯಾನ್ಸ್ ಕಲುಸ್ತಾ ಇದಾರೆ” ಎಂದಳು ಯೋಗಿತಾ.
“”ನಾನೂ ಬರೆಲàನೆ, ಯಾವ ಡ್ಯಾನ್ಸ್, ನೀನೂ ಇದೀಯ?” ಎಲ್ಲವನ್ನೂ ಅಮೃತಾ ಒಟ್ಟಿಗೆ ಕೇಳಿದಳು.
ಯೋಗಿತಾ ಹೇಳಿದಳು, “”ಇಲ್ಲ ನೀನು ಬರೋಕಾಗಲ್ಲ ಟೀಚರ್ ಅವರೇ ಡ್ಯಾನ್ಸಿಗೆ ಯಾರು ಬೇಕು ಸೆಲೆಕ್ಟ್ ಮಾಡ್ಕೊàತ ಇದಾರೆ, ಅವರೇ ಸೇರಿÕದ್ರೆ ಬರಬಹುದು” ಎಂದು ಬೇಗ ಬೇಗನೆ ತರಗತಿಯಿಂದ ಹೊರಟು ಹೋದಳು. ಅಮೃತಾ ಮತ್ತೇನನ್ನೂ ಕೇಳಲು ಅವಳು ಅಲ್ಲಿರಲಿಲ್ಲ. ಅಮೃತಾಳಿಗೆ ಗಾಬರಿಯಾಯಿತು. “”ಅಯ್ಯೋ, ನನ್ನನ್ನು ಬಿಟ್ಟು ಬಿಟ್ಟಿ¨ªಾರೆ, ಹೇಗಾದರೂ ಡ್ಯಾನ್ಸಿಗೆ ಸೇರಲೇಬೇಕು” ಎಂದುಕೊಂಡಳು. ಅಂದು ಮಧ್ಯಾಹ್ನ ಅಮೃತಾ ಮನೆಗೆ ಹೋಗಿ ಊಟ ಮುಗಿಸಿಕೊಂಡು ಬಂದಾಗ ಆಫೀಸ್ ರೂಮಿನ ಪಕ್ಕದ ಖಾಲಿ ಇದ್ದ ಒಂದು ಕೋಣೆಯಲ್ಲಿ ಡ್ಯಾನ್ಸನ್ನು ಅಭ್ಯಾಸ ಮಾಡುತ್ತಿರುವುದು ಕಾಣಿಸಿತು. ಬಡಿದೆಬ್ಬಿಸುವಂತಹ ಹಾಡು ಕೇಳಿಬರುತ್ತಿತ್ತು. ಅಮೃತಾ ಅಲ್ಲಿಗೆ ಓಡಿದಳು. ಬಾಗಿಲು ಹಾಕಿಕೊಂಡಿತ್ತು. ಒಳಗೆ ಇಂಪನಾ, ಯೋಗಿತಾ, ರಮ್ಯಾ ಇನ್ನೂ ತುಂಬಾ ಜನ ನೃತಾಭ್ಯಾಸ ಮಾಡುತ್ತಿದ್ದರು. ಅಮೃತಾ ಕಿಟಕಿಯಲ್ಲಿ ಇಣುಕಿದಳು. ಹೋಳಿ ಹೋಳಿ ಎಂಬ ಹಾಡು ಅಬ್ಬರಿಸುವ ಅಲೆಗಳಂತೆ ಕೇಳುತ್ತಿತ್ತು. ಬಣ್ಣಗಳನ್ನೆರೆಚುತ್ತ ಸುಂದರವಾಗಿ ನರ್ತಿಸುವ ಹಾಡು ಅಮೃತಾಳಿಗೆ ಭಾರೀ ಇಷ್ಟವಾಗಿತ್ತು. ಅಮೃತಾಳಿಗೆ ನರ್ತಿಸಬೇಕೆನ್ನಿಸುತ್ತಿತ್ತು. ಅವಳ ಪಾದಗಳು ತಾಳ ಬಡಿದವು. ಅವಳಿಗೆ ಈಗಲೇ ಆ ಡ್ಯಾನ್ಸಿಗೆ ಸೇರಬೇಕೆನ್ನಿಸಿತು. ಅವರು ನೃತ್ಯದ ಸಿದ್ಧತೆ ಮಾಡುವುದನ್ನು ಅವಳು ಕಿಟಕಿಯಿಂದಲೇ ನೋಡಿದಳು. ಅಮೃತಾಳಿಗೆ ಹೇಗಾದರೂ ಆ ಡ್ಯಾನ್ಸಿಗೆ ಸೇರಬೇಕೆನಿಸುತ್ತಿತ್ತು. ಸ್ವಲ್ಪ ಹೊತ್ತಾದ ಮೇಲೆ ಗಂಟೆ ಹೊಡೆಯಿತು. ಎಲ್ಲರೂ ಡ್ಯಾನ್ಸ್ ನಿಲ್ಲಿಸಿ ಚಪ್ಪಲಿ ಸಿಕ್ಕಿಸಿಕೊಂಡು ತರಗತಿಗಳಿಗೆ ತೆರಳಲು ಅಣಿಯಾದರು. ಅಮೃತಾ ಬೇಗನೆ ನೃತ್ಯ ಮಾಡುತ್ತಿದ್ದವರ ಬಳಿಗೆ ಓಡಿದಳು. “”ನಾನೂ ಬರೆಲàನೆ ಈ ಡ್ಯಾನ್ಸಿಗೆ”
ಆಗ ಅವರು, “”ನಮಗೊತ್ತಿಲ್ಲ. ಟೀಚರನ್ನ ಕೇಳು. ಅವೆÅ ನಮ್ಮನ್ನ ಇದಿಕ್ಕೆ ಸೆಲೆಕ್ಟ್ ಮಾಡಿರೋದು”ಎಂದು ಬೀಗಿದರು. ಅಮೃತಾ ತಕ್ಷಣ ಪೆಚ್ಚಾದಳು. ನಂತರ ಅÇÉೇ ಸ್ವಲ್ಪ ಹೊತ್ತು ನಿಂತಿದ್ದಳು. ಟೀಚರ್ ಕೂಡ ಅಲ್ಲಿಂದ ಹೊರಟು ಹೋದರು. ಸುನಂದಾ ಟೀಚರ್ ಅವಳನ್ನು ನೋಡಿಯೂ ಡ್ಯಾನ್ಸಿಗೆ ಬಾ ಎಂದು ಕರೆಯಲಿಲ್ಲ. ಅಮೃತಾ ಕೊನೆಗೆ ತರಗತಿಗೆ ಹೋಗಲೇ ಬೇಕಾಯಿತು. ಅಮೃತಾ ಸಂಜೆ ಮನೆಗೆ ಹಿಂದಿರುಗಿದ ಮೇಲೆ ಅಮ್ಮನ ಬಳಿ ಶಾಲೆಯÇÉಾದ ಎಲ್ಲ ವಿಷಯವನ್ನು ಹೇಳಿದಳು. “”ಅಮ್ಮಾ, ಟೀಚರ್ ಆ ಡ್ಯಾನ್ಸಿಗೆ ಅವ್ರೇ ಎಲÅನ್ನೂ ಸೆಲೆಕ್ಟ್ ಮಾಡಿ¨ªಾರಮ್ಮಾ ನನ್ನ ಸೇರುಸ್ಲೇ ಇಲ್ಲ. ನೀನೂ ಬಾಮ್ಮ. ಟೀಚರಿಗೆ ಹೇಳು” ಅಮೃತಾ ಗೋಗರೆದಳು. ಆಗ ಅಮ್ಮ, “”ನಾನು ಬಂದ್ರೆ ಟೀಚರಿಗೆ ಇಷ್ಟ ಆಗದಿಲ್ಲ. ನೀನೇ ಹೋಗಿ ಕೇಳು” ಎಂದಳು. “”ಅಮ್ಮಾ ನನಗೆ ಹೆದ್ರಿಕೆ” ಮೆಲುದನಿಯಲ್ಲಿ ಅಮೃತಾ ಹೇಳಿದಳು. “”ನೋಡು ನೀನು ಧೈರ್ಯಮಾಡಿ ಕೇಳು, ಕೇಳಿದ್ರೆ ಯಾಕೆ ಬೈತಾರೆ?” ಎಂದು ಅಮ್ಮ ಒಪ್ಪಿಸಿದಳು. 4
ಅಮೃತಾಳಿಗೆ ಪ್ಯಾರಾನಾಯ್ಡ ಇದೆ ಎಂದು ಹೇಳಿದಾಗ ಅಪ್ಪನ ಕೆಲವರು ಗೆಳೆಯರೂ ಅಂಥವರು ಅದ್ಭುತ ವ್ಯಕ್ತಿಗಳಾಗಿರುತ್ತಾರೆ ಎಂದಿದ್ದರು. ಇನ್ನೊಬ್ಬರು ಪ್ಯಾರಾನಾಯ್ಡಗಳೆಲ್ಲ ಜೀನಿಯಸ್‌ಗಳಾಗಿರುತ್ತಾರೆ. ಆದರೆ, “ಜೀನಿಯಸ್‌ಗಳೆಲ್ಲ ಪ್ಯಾರಾನಾಯ್ಡ ಆಗಿರಬೇಕಿಲ್ಲ’ ಎಂದಿದ್ದರು. ಇನ್ನೊಬ್ಬರು ಅಪ್ಪನ ಹಿರಿಯ ಗೆಳೆಯರು, “”ಏನು ಮಾಡೋದು ಪ್ರಸಾದ್, ಕೆಲವರು ವರ ಪಡೆದು ಹುಟ್ಟಿಬಿಡ್ತಾರೆ” ಎಂದಿದ್ದರು. ಅಮೃತಾಳಿಗೆ ಎಲ್ಲರೂ ಹೀಗೆ ಹೇಳುತ್ತಾರೆ, ಆದರೆ ನನ್ನನ್ನು ಯಾರೋ ಇವಳು ಷೇಕ್ಸ್‌ಪಿಯರ್ ಅಥವಾ ಗಿಬ್ರಾನಿನಂತೆ, ಅಥವಾ ಅಮೃತಾ ಶೇರ್‌ಗಿಲ್‌ಳಂತೆ ಗುರ್ತಿಸುತ್ತಿಲ್ಲ ಎಂದುಕೊಳ್ಳುವಳು. ಬೇರೆಯವರ ಚಿತ್ರಗಳನ್ನು ನೋಡಿದಾಗ ನನ್ನ ಚಿತ್ರ ಚೆನ್ನಾಗಿಲ್ಲ ನಾನು ಅವರಂತೆ ಬಿಡಿಸಬೇಕು. ಎಲ್ಲರೂ ಅಯ್ಯೋ ಪಾಪ, ಈ ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂದು ಅನುಕಂಪ ತೋರಿಸುತ್ತಾರೆ ಎನ್ನಿಸಿ ಕೋಪಬರುವುದು. ತನ್ನ ಶಕ್ತಿಯನ್ನು ಗುರುತಿಸುತ್ತಿಲ್ಲ ಎಂದು ವ್ಯಥೆ ಪಡುವಳು.
ನಾಟಕಗಳಲ್ಲಿ ಅಭಿನಯಿಸಬೇಕು, ಒಳ್ಳೆಯ ನಟಿ ಎನಿಸಿಕೊಳ್ಳಬೇಕು. ನೃತ್ಯ ಕಾರ್ಯಕ್ರಮ ಕೊಡಬೇಕು ಹಾಗೆÇÉಾ ಆದರೆ ನಾನು ಸಂತೋಷವಾಗಿರಬÇÉೆ. ನನ್ನ ಕಿವಿ ಸರಿಯಾದೊಡನೆ ನಾನು ಸಂತೋಷವಾಗಿರಬÇÉೆ ಎಂದುಕೊಳ್ಳುವಳು. ಅವಳನ್ನು ಎಷ್ಟು ಜನ ಮೆಚ್ಚಿಕೊಂಡರೂ ಅವಳಿಗೆ ಏನೇನೂ ಸಾಲದು ಮತ್ತೆ ಮತ್ತೆ ಅತೃಪ್ತಿ ಕಾಡುತ್ತಿತ್ತು. ಒಮ್ಮೆ ಇದನ್ನೆಲ್ಲ ಗಮನಿಸಿದ ಕಿಶನ್ ಅವರು ಅಮೃತಾಳಿಗೆ ಒಂದು ಪುಸ್ತಕವನ್ನು ಓದಲು ಕೊಟ್ಟರು. ಅದು ಜಗ್ಗಿ ವಾಸುದೇವ್ ಅವರ “ಎನ್ ಕೌಂಟರ್ ದ ಎನ್ ಲೈಟನ್x’ ಎಂಬ ಪುಸ್ತಕವಾಗಿತ್ತು. ಅಮೃತಾ ಅದನ್ನು ಓದತೊಡಗಿದಳು.
“”ಪ್ರತಿಯೊಬ್ಬರೂ ಸಂತೋಷವಾಗಿರುವುದಕ್ಕಾಗಿಯೇ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಕಾರು ಬಂಗಲೆ ಏನೆಲ್ಲವನ್ನೂ ಸಂಪಾದಿಸುತ್ತಾರೆ. ಆದರೆ ಸಂತೋಷವಿರುವುದಿಲ್ಲ. ನಮ್ಮಲ್ಲಿ ಹೆಚ್ಚು ಹೆಚ್ಚು ಯೋಚನೆ ಮಾಡುವವರನ್ನು ಬುದ್ಧಿವಂತ ಎಂದು ಗುರ್ತಿಸುತ್ತಾರೆ. ಆದರೆ ಒಂದು ತುಂಡು ಬಟ್ಟೆಯಲ್ಲಿರುವ ಭಿಕ್ಷುಕ ಕಾರಣವಿಲ್ಲದೆ ಸಂತೋಷವಾಗಿದ್ದರೆ ಅವನನ್ನು ದಡ್ಡ ಎನ್ನುತ್ತಾರೆ. ಮೊದಲಿನವರು ವಿನಾಕಾರಣ ಅಸಂತೋಷವನ್ನು ಸೃಷ್ಟಿ ಮಾಡಿಕೊಳ್ಳುತ್ತಾ ಇರುತ್ತಾರೆ. ನಿಜವಾಗಿಯೂ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆಗಳಿದ್ದರೆ ಅಂಥವರಿಗೆ ಚಿಕಿತ್ಸೆ ಅಗತ್ಯ. ಇನ್ನುಳಿದವರಿಗೆ ದುಃಖೀಗಳಾಗಲು ಒಂದು ನೆಪ ಬೇಕು ಅಷ್ಟೆ. ಸಂತೋಷ ಹೊರಗಿನಿಂದ ಸಿಗುವುದಿಲ್ಲ. ನಮ್ಮೊಳಗೇ ಅದು ಇದೆ. ಹೊರಮುಖವಾಗಿ ಪರಿಪೂರ್ಣತೆಯನ್ನು ಸಾಧಿಸಲು ಹೊರಟರೆ ನೀವೆಂದೂ ಸಂತೋಷವಾಗಿರಲು ಸಾಧ್ಯವಿಲ್ಲ. ನೀವು ಒಳಮುಖವಾಗಿ ನಿಮ್ಮನ್ನು ನೀವು ಪರಿಪೂರ್ಣರಾಗಿಸಲು ಪ್ರಯತ್ನಿಸಿ. ನಿಮ್ಮ ಕೆಲಸಗಳು ನಿಮ್ಮ ನಿರ್ಧಾರಗಳಾಗಿರಲಿ. ಎಲ್ಲವನ್ನೂ ಅರಿವಿನಿಂದ ಮಾಡಲು ಪ್ರಯತ್ನಿಸಿ. ಈ ಪ್ರಪಂಚದಲ್ಲಿ ಏನನ್ನಾದರೂ ಬದಲಾಯಿಸಲು ಸಾಧ್ಯವಿದ್ದರೆ ಅದು ನಿಮ್ಮನ್ನೇ.. ” ಎಂಬ ವಿಚಾರಗಳನ್ನು ಓದುತ್ತ ಹೋದಳು. ಅಮೃತಾಳಿಗೆ ಜಗ್ಗಿ ವಾಸುದೇವ್ ಅವರ ಪುಸ್ತಕಗಳು ಆಸಕ್ತಿ ಮೂಡಿಸಿದವು. ಶಿವ ಮತ್ತು ಶಕ್ತಿ ಎಂದರೇನು ಅದು ಶಿವ ಎಂದರೆ ಶೂನ್ಯ, ಶಕ್ತಿ ಎಂದರೆ ಚೈತನ್ಯರೂಪ-ಎನರ್ಜಿ ಇವುಗಳ ಸಮ್ಮಿಲನದಿಂದ ಇಡೀ ಬ್ರಹ್ಮಾಂಡ ಸೃಷ್ಟಿಯಾಗಿದೆ. ಹಿಂದೂ ಎಂದರೆ ಅದು ಯಾವುದೇ ಧರ್ಮವಲ್ಲ , ಅದೊಂದು ಪ್ರಾದೇಶಿಕತೆ. ಅಂದರೆ ಹಿಮಾಲಯದಿಂದ ಹಿಂದೂ ಸಾಗರದವರೆಗಿನ ಭೂಭಾಗ ಎಂದೆಲ್ಲ ಓದುತ್ತ ಹೋದಂತೆ ಅಮೃತಾಳಿಗೆ ಏನೋ ಹೊಸ ಹೊಳಹು ಮೂಡಿದಂತಾಯಿತು. ಅಮೃತಾ ಕೆಲವು ದಿನಗಳ ಕಾಲ ಅದನ್ನು ಓದಿದಳು. ಒಂದು ದಿನ ಅಪ್ಪ ಇನ್ನೊಂದು ಪುಸ್ತಕವನ್ನು ತಂದರು. ಅದು ಅವರಿಗೆ ಅವರ ಗೆಳೆಯರೊಬ್ಬರು ಕೊಟ್ಟ ಪುಸ್ತಕವಾಗಿತ್ತು. ಅದರ ಹೆಸರು ಕೋಡ್ ನೇಮ್ ಗಾಡ್. ಅಮೆರಿಕದಲ್ಲಿರುವ ಭಾರತೀಯ ಭೌತವಿಜ್ಞಾನಿ ಮಣಿಭೌಮಿಕ್ ಅವರು ಬರೆದ ಪುಸ್ತಕವದು. ಅಮೃತಾ ಈಗ ಅದನ್ನು ಓದತೊಡಗಿದಳು. ಅದು ಕ್ವಾಂಟಮ್ ಫಿಸಿಕ್ಸ್ ಮತ್ತು ಆಧ್ಯಾತ್ಮವನ್ನು ಜೊತೆಜೊತೆಯಾಗಿ ವ್ಯಾಖ್ಯಾನಿಸಿದ ಪುಸ್ತಕ. ಆ ಪುಸ್ತಕದಲ್ಲಿ ಮಣಿಭೌಮಿಕ್- “”ಇಡೀ ವಿಶ್ವವೇ ಶಕ್ತಿಯಿಂದಾಗಿದೆ. ಅಣುವಿನಲ್ಲಿ ಇಲೆಕ್ಟ್ರಾನ್ ನ್ಯೂಕ್ಲಿಯಸ್‌ನ ಸುತ್ತ ಸುತ್ತುತ್ತಿರುತ್ತದೆ. ಇಲೆಕ್ಟ್ರಾನ್ ತನ್ನ ಜಾಗವನ್ನು ಬದಲಿಸುವಾಗ ಅಲ್ಲಿ ಖಾಲಿ ಸ್ಥಳ ಉಂಟಾಗುತ್ತದೆ ಎಂದು ಸಾಮಾನ್ಯವಾಗಿ ನಾವು ಭಾವಿಸುತ್ತೇವೆ. ಆದರೆ, ಅದು ಕೂಡಾ ಖಾಲಿಯಲ್ಲ. ಅಲ್ಲಿ ಶಕ್ತಿ ಕ್ವಾಂಟಮ್ ರೂಪದಲ್ಲಿರುತ್ತದೆ. ಅದು ಏಕಕಾಲಕ್ಕೆ ಕಣವಾಗಿಯೂ, ಅಲೆಯಾಗಿಯೂ ವರ್ತಿಸುತ್ತಿರುತ್ತದೆ. ಏಕಕಾಲಕ್ಕೆ ಕ್ವಾಂಟಮ್ ಕಣವೊಂದು ಒಂದೂ ಆಗಬಹುದು, ಎರಡೂ ಆಗಿರಬಹುದು. ಹಾಗಾಗಿ, ವಸ್ತು ಎನ್ನುವುದು ವಾಸ್ತವ ಮತ್ತು ಮಿಥ್ಯೆ. ಏಕಕಾಲಕ್ಕೆ ಸೃಷ್ಟಿಯಾದ ಬೇರೆ ಬೇರೆ ಕ್ವಾಂಟಮ್ ಕಣಗಳು ಎಷ್ಟೇ ದೂರದಲ್ಲಿದ್ದರೂ ಒಂದೇ ರೀತಿ ವರ್ತಿಸುತ್ತವೆ. ಆದ್ದರಿಂದ ಕ್ವಾಂಟಮ್ ಜಗತ್ತಿಗೆ ದೂರ ಮತ್ತು ಕಾಲ ಎನ್ನುವುದು ಇಲ್ಲ. ಉದಾಹರಣೆಗೆ ಇಲ್ಲಿರುವ ವ್ಯಕ್ತಿ ಕೈ ಎತ್ತಿದರೆ ಯಾವುದೇ ಸಂಪರ್ಕ ಇಲ್ಲದೆ ಅಮೆರಿಕದಲ್ಲಿರುವ ವ್ಯಕ್ತಿ ಅದೇ ಕಾಲಕ್ಕೆ ಅದೇ ರೀತಿ ಕೈ ಎತ್ತಿದಂತೆ”
ಇದರಿಂದ ಇಡೀ ವಿಶ್ವವೇ “ಒಂದು’ ಎಂಬ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ಎಲ್ಲವೂ ಒಂದೇ ಶಕ್ತಿಯ ವಿವಿಧ ರೂಪಗಳು. ನಾನು ಬೇರೆ ಅಲ್ಲ , ನಾಯಿ ಬೇರೆ ಅಲ್ಲ, ಈ ಮೇಜು ಕುರ್ಚಿಗಳೂ ಬೇರೆ ಬೇರೆ ಅಲ್ಲ. ಇದನ್ನು ನೀವು ಕ್ವಾಂಟಮ್ ಶಕ್ತಿ ಎಂದಾದರೂ ಕರೆಯಿರಿ, ದೇವರು ಎಂದಾದರೂ ಕರೆಯಿರಿ. ಇವೆಲ್ಲವೂ ವಿಶ್ವಶಕ್ತಿ ಅಷ್ಟೇ ಎಂದು ವಿವರಿಸುತ್ತ ಹೋಗುತ್ತಾರೆ. ಅಮೃತಾಳಿಗೆ ಈ ವಿಚಾರಗಳು ಜಗ್ಗಿ ವಾಸುದೇವ್ ಹೇಳುವ ಶಿವ-ಶಕ್ತಿಯರ ವಿಚಾರವಲ್ಲದೆ ಬೇರೇನೂ ಅಲ್ಲ ಎನಿಸಿತು.
ಕೆಲವೇ ದಿನಗಳ ಅಂತರದಲ್ಲಿ ಅಮೃತಾಳ ಕೈಯಲ್ಲಿ ಇನ್ನೊಂದು ಪುಸ್ತಕವಿತ್ತು. ಅದು ಓಶೋನ ಬುದ್ಧ ಮತ್ತು ಪರಂಪರೆ.
ನಾನು ದೇವರನ್ನು ಮೂರ್ತರೂಪಗೊಳಿಸಿ ಹರಕೆ ಹೇಳಿಕೊಂಡು ಅದನ್ನು ತೀರಿಸದಿದ್ದರೆ ಕೆಟ್ಟ¨ªಾಗುತ್ತದೆ ಎಂದುಕೊಂಡಿ¨ªೆ. ಆದರೆ, ನಿಜವಾಗಿಯೂ ಹರಕೆ ಎನ್ನುವುದು ಕೆಲಸಮಾಡುತ್ತದೆಯೆ? ದೇವರು ಇ¨ªಾನೆಂಬ ಮೂರ್ತರೂಪದಲ್ಲಿ ನಂಬಿಕೆ ಇಟ್ಟರೆ ನಮ್ಮ ಕಷ್ಟ ಪರಿಹಾರವಾಗುತ್ತದೆಯೆ? ಎಂದೆÇÉಾ ಪ್ರಶ್ನೆಗಳು ಮೂಡಿದವು. ಅಮೃತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಆದರೆ ಆಸ್ತಿಕಳಾಗಿಯೂ ಇರಲಿಲ್ಲ. ನಾಸ್ತಿಕಳಾಗಿಯೂ ಇರಲಿಲ್ಲ. ದೇವರನ್ನು ನಂಬಲೂ ಆಗದೆ, ತನ್ನಲ್ಲಿಯೂ ನಂಬಿಕೆಯಿರದೆ ಒ¨ªಾಡುತ್ತಿದ್ದಳು. ಈಗ ಅಮೃತಾಳಿಗೆ ದೇವರು ಎಂಬ ಕಲ್ಪನೆಗೆ ವಿಜ್ಞಾನದ ವಿವರಣೆ ಸಿಗುತ್ತಿದೆ. ಆ ಮೂಲಕ ದೇವರು ಮತ್ತು ವಿಜ್ಞಾನ ಜೊತೆಯಾಗಿ ಸಾಗುತ್ತಿದೆ ಎನ್ನಿಸಿತು. ಹಿಂದೆ ದೇವರ ಕಲ್ಪನೆ ಕಾಲ ಕಾಲಕ್ಕೆ ಬದಲಾಗಿದೆ. ಆದರೆ, ಈಗ ಅದು ಹೆಚ್ಚು ನಿಖರವಾಗುತ್ತಿದೆ ಎನ್ನಿಸಿತು. ಎಲ್ಲವೂ ಒಂದೇ ಆಗಿರುವಾಗ ಯಾರ ಬಳಿಯೂ ಸ್ಪರ್ಧೆಗಿಳಿಯುವುದು ವ್ಯರ್ಥವಲ್ಲವೆ, ಎಲ್ಲ ಜೀವಿಗಳೂ, ವಸ್ತುಗಳೂ ಹೊಂದುವುದು ರೂಪಾಂತರ ಮಾತ್ರ, ನಾಶವಲ್ಲ. ನಮ್ಮ ದೇಹವೂ ಒಂದು ಅಂಗಿಯಷ್ಟೇ. ಶಕ್ತಿಯು ಅಂಗಿ ಕಳಚಿ ರೂಪಾಂತರವಾಗುತ್ತದೆ. ಅದೇ ಪುನರ್ಜನ್ಮ.
ಅವಳಿಗೀಗ ಸ್ವರ್ಗ-ನರಕ, ಸತ್ತವರನ್ನು ನಾವು ಪುನಃ ಭೇಟಿಯಾಗುತ್ತೇವೆಯೇ ಮುಂತಾದ ಪ್ರಶ್ನೆಗಳಿಗೆ ಉತ್ತರ ದೊರಕಿತ್ತು. ಅಮೃತಾಳ ಮನಸ್ಸು ಬೇರೆಯೇ ದಿಕ್ಕಿನಲ್ಲಿ ಯೋಚಿಸಲಾರಂಭಿಸಿತು. – ಅಮೃತಾ ರಕ್ಷಿದಿ