ಡೊಂಬಿವಲಿ: ಮಾತಾ ಅಮೃತಾ ನಂದಮಯಿ ಸತ್ಸಂಗ ಸಮಿತಿ ಡೊಂಬಿವಲಿ ಇದರ 18ನೇ ವಾರ್ಷಿಕ ಮಹಾಪೂಜೆಯು ಇತ್ತೀಚೆಗೆ ಎರಡು ದಿನಗಳ ಕಾಲ ಸ್ಥಳೀಯ ಸಭಾಗೃಹದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ ಯಿಂದ ಗಣಹೋಮ, ಮಹಾಪ್ರಸಾದ ವಿತರಣೆ, ಅಪರಾಹ್ನ 3ರಿಂದ ಮಾತಾ ಅಮೃತಾನಂದಮಯಿ ಅವರ ಭಕ್ತರಾದ ಗಿರಿ ಮೆನನ್ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು. ಸಂಜೆ 5ರಿಂದ ಭಜನ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ದ್ವಿತೀಯ ದಿನ ಮುಂಜಾನೆ 6ರಿಂದ ಲಲಿತ ಸಹಸ್ರ ನಾಮಾವಳಿ, ಪೂರ್ವಾಹ್ನ 9.45ರಿಂದ ಚಂದ್ರಶೇಖರ್ ಕುಂದರ್ ಅವರ ನೇತೃತ್ವದಲ್ಲಿ ಗುರುಪಾದುಕಾ ಪೂಜೆ ನಡೆಯಿತು. ಪಾದುಕಾ ಪೂಜೆಯನ್ನು ಪುರುಷೋತ್ತಮ ಕೋಟ್ಯಾನ್ ದಂಪತಿ ನೆರವೇರಿಸಿದರು. ಪೂರ್ವಾಹ್ನ 11 ರಿಂದ ಭಜನೆ, ಮಧ್ಯಾಹ್ನ 12.30ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಮಹಾಪ್ರಸಾದ ವಿತರಣೆ ಜರಗಿತು.
ಸಾವಿರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಾತಾ ಅಮೃತಾನಂದಮಯಿ ಅವರ ಭಕ್ತರಾದ ಆನಂದ ಶೆಟ್ಟಿ, ರೋಹಿತ್ ಆರ್. ಸುವರ್ಣ ಪಲಿಮಾರು, ಹರೀಶ್ ಶೆಟ್ಟಿ, ದಿವಾಕರ ರೈ, ರವಿ ಸನಿಲ್, ಸುರೇಶ್ ಶೆಟ್ಟಿ ಶೃಂಗೇರಿ, ಚಂದ್ರ ಎನ್. ನಾಯ್ಕ, ವಸಂತ್ ಎಸ್. ಸುವರ್ಣ, ಸಂತೋಷ್ ಪಿ. ಶೆಟ್ಟಿ, ಬಾಬು ಮೊಗವೀರ, ರಾಜೇಶ್ ಕೋಟ್ಯಾನ್, ಮೋಹನ್ ಸಾಲ್ಯಾನ್, ಗೀತಾ ಶೇಖರ್ ಮೆಂಡನ್, ವಿನೋದಾ ಶೆಟ್ಟಿ, ಜಯ ಶೆಟ್ಟಿ, ಸನತ್ ಕುಮಾರ್ ಜೈನ್, ಪ್ರಮೋದ್ ಎಸ್. ಪೂಜಾರಿ, ಆರ್. ಕೆ. ಸುವರ್ಣ, ಜಯ ಪೂಜಾರಿ, ಸುಭಾಶ್ ಶೆಟ್ಟಿ, ಸತೀಶ್ ಶೆಟ್ಟಿ ವರ್ಲಿ, ಸತ್ಸಂಗ ಸಮಿತಿಯ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು.