Advertisement
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಯಿಂದ ಜಾರಿಗೊಳ್ಳುತ್ತಿರುವ ಯೋಜನೆಗೆ “ಅಮೃತ ಸಿರಿ’ ಮತ್ತು “ಅಮೃತ ಧಾರಾ’ ಎಂದು ಹೆಸರಿಡಲು ನಿರ್ಧರಿಸಲಾಗಿದೆ.
ರೈತರು ಮತ್ತು ಪಶುಪಾಲಕರಿಗೆ ಹೆಣ್ಣು ಕರುಗಳಿಗೆ ಶೇ. 75ರಷ್ಟು ರಿಯಾಯಿತಿ ಮತ್ತು ಗಂಡು ಕರುಗಳಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲು ಇಲಾಖೆ ನಿರ್ಧರಿಸಿದೆ.
Related Articles
Advertisement
ಇದನ್ನೂ ಓದಿ:ಅಮೆರಿಕದ ಮೊದಲ ಕಪ್ಪುವರ್ಣೀಯ ವಿದೇಶಾಂಗ ಸಚಿವ ಪೊವೆಲ್ ನಿಧನ
ಒಂದು ಕರುವಿನ ಬೆಲೆ ಅಂದಾಜು 10 ಸಾವಿರ ರೂ. ಎಂದು ಇಲಾಖೆ ನಿಗದಿಪಡಿಸಿ ಕೊಂಡಿದ್ದು, ಅದರ ಶೇ. 25ರಷ್ಟು ಅಂದರೆ, 2,500 ರೂ.ಗಳಿಗೆ ನೀಡಲು ಇಲಾಖೆ ತೀರ್ಮಾನಿಸಿದೆ. ಗಂಡು ಕರುಗಳನ್ನು ಕಡಿಮೆ ಬೆಲೆಗೆ ನೀಡಲು ತೀರ್ಮಾನಿಸಿದೆ. ವಯಸ್ಸಿನ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಲೆನಾಡು ಗಿಡ್ಡ ತಳಿಗಳನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ರೈತರಿಗೆ ನೀಡಲು ಇಲಾಖೆ ನಿರ್ಧರಿಸಿದೆ.
ಅಮೃತಧಾರಾ ಯೋಜನೆ ಮೂಲಕ ಗಂಡು ಕರುಗಳನ್ನು ಹಾಗೂ ಅಮೃತ ಸಿರಿ ಯೋಜನೆ ಮೂಲಕ ಹೆಣ್ಣು ಕರುಗಳನ್ನು ರೈತರಿಗೆ ನೀಡುವ ವಿಶೇಷ ಯೋಜನೆಯನ್ನು ಪಶು ಸಂಗೋಪನೆ ಇಲಾಖೆ ರೂಪಿಸಿದೆ ದೇಶಿ ತಳಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡ ಲಾಗುತ್ತಿದ್ದು , ರೈತರು ಇದರ ಸದುಪಯೋಗ ವನ್ನು ಪಡೆದುಕೊಳ್ಳಬೇಕು.-ಪ್ರಭು ಚೌವ್ಹಾಣ್,
ಪಶು ಸಂಗೋಪನೆ ಇಲಾಖೆ ಸಚಿವ.