Advertisement
ಸ್ವಾತಂತ್ರ್ಯ ಚಳವಳಿಯ ಕುರಿತು ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ಪೇಂಟಿಂಗ್ ಸ್ಪರ್ಧೆ, ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ಕಿರು ನಾಟಕಗಳ ಸ್ಪರ್ಧೆ, ಪೋಸ್ಟರ್ ಸಿದ್ಧಪಡಿಸುವ ಸ್ಪರ್ಧೆ, ಸ್ವಾತಂತ್ರ್ಯ ಓಟ ಸ್ಪರ್ಧೆ, ನುರಿತ ಭಾಷಣಕಾರರ ಮೂಲಕ ಸ್ವಾತಂತ್ರ್ಯ ಚಳವಳಿ ಬಗ್ಗೆ ವಿಶೇಷ ಉಪನ್ಯಾಸ, ಸ್ವಾತಂತ್ರ್ಯ ಹೋರಾಟಗಾರರಿದ್ದರೆ ಅವರನ್ನು ಕಾಲೇಜಿಗೆ ಆಹ್ವಾನಿಸಿ ಅವರ ಅನುಭವ ಹಂಚಿಕೊಳ್ಳಲು ವ್ಯವಸ್ಥೆ ಮಾಡುವುದು, ಸ್ವಾತಂತ್ರ್ಯ ಚಳವಳಿಯ ಪ್ರಮುಖ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡುವಂತೆ ಮಾಡುವುದು ಸೇರಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿ ವಿದ್ಯಾರ್ಥಿಯೂ ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿಚಾರ ಗೋಷ್ಠಿ ಯಗಳನ್ನು ಆಯೋಜಿಸಲು ಸೂಚಿಸಿದೆ.
ಮಂಗಳೂರು ವಿ.ವಿ.ಯಿಂದ ಕಿರು ನಾಟಕಗಳ ಸ್ಪರ್ಧೆ, ಮೈಸೂರು ವಿ.ವಿ.ಯಿಂದ ಪ್ರಬಂಧ ಸ್ಪರ್ಧೆ, ಬೆಂಗಳೂರು ವಿ.ವಿ.ಯಿಂದ ಚರ್ಚಾ ಸ್ಪರ್ಧೆ, ವಿಜಯನಗರದ ಶ್ರೀ ಕೃಷ್ಣದೇವರಾಯ ವಿ.ವಿ.ಯಿಂದ ಪೇಂಟಿಂಗ್ ಸ್ಪರ್ಧೆ, ಧಾರವಾಡದ ಕರ್ನಾಟಕ ವಿ.ವಿ.ಯಿಂದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ರಾಣಿ ಚೆನ್ನಮ್ಮ ವಿ.ವಿ.ಯಿಂದ ಪೋಸ್ಟರ್ ಸಿದ್ಧಪಡಿಸುವ ಸ್ಪರ್ಧೆ ಹಾಗೂ ಬೆಂಗಳೂರು ನಗರ ವಿ.ವಿ.ಯಿಂದ ಸ್ವಾತಂತ್ರ್ಯ ಓಟ ಸ್ಪರ್ಧೆ ಏರ್ಪಡಿಸಲು ನಿರ್ದೇಶಲಾಗಿದೆ. ಪ್ರತಿ ಕಾಲೇಜಿನಲ್ಲಿ ಸ್ಪರ್ಧೆ ನಡೆಸಿ ವಿಜೇತರ ಹೆಸರನ್ನು ಸಂಬಂಧಪಟ್ಟ ವಿ.ವಿ.ಯ ಸಂಪರ್ಕಾಧಿಕಾರಿಗೆ ಕಳುಹಿಸಬೇಕು. ಅನಂತರ ವಿ.ವಿ.ಹಂತದಲ್ಲಿ ಸ್ಪರ್ಧೆ ನಡೆಸಿ ವಿಜೇತ 5 ವಿದ್ಯಾರ್ಥಿ ಗಳನ್ನು ಅಂತರ್ ವಿ.ವಿ. ಮಟ್ಟದ ಸ್ಪರ್ಧೆ ನಡೆಸುವ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಅಂತರ್ ವಿ.ವಿ. ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ 3 ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಸೂಚಿಸಬೇಕು. ಆಗಸ್ಟ್ 1ರಿಂದ ಆಗಸ್ಟ್ 10ರ ವರೆಗೆ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.