Advertisement

ಅಮೃತ್‌ ಮಹಲ್‌ ಉಪ ಕೇಂದ್ರ ನವೀಕರಣ

05:09 PM Apr 17, 2020 | mahesh |

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ರಾಯಸಮುದ್ರ ಕಾವಲಿನ ಅಮೃತ್‌ ಮಹಲ್‌ ತಳಿ ಸಂವರ್ಧನಾ ಉಪಕೇಂದ್ರ ನವೀಕರಣಗೊಂಡಿದ್ದು, ಎಲ್ಲಾ ಜಾನುವಾರುಗಳು ಕ್ಷೇಮವಾಗಿವೆ. ಅಮೃತ್‌ ಮಹಲ್‌ ತಳಿ ಸಂವರ್ಧನಾ ಉಪ ಕೇಂದ್ರದ ಅವ್ಯವಸ್ಥೆಯ ಬಗ್ಗೆ “ಉದಯವಾಣಿ’ ಪತ್ರಿಕೆ ಸುದ್ದಿ ಪ್ರಕಟ ಮಾಡುವ ಮೂಲಕ ರಾಜ್ಯ ಸರ್ಕಾರ ಗಮನ ಸೆಳೆದಿತ್ತು. ಅಂದು ಸ್ಥಳಕ್ಕೆ ಪಶುಪಾಲನಾ ಮಂತ್ರಿ ಪ್ರಭು ಚೌವ್ಹಾಣ್‌ ಭೇಟಿ ನೀಡಿ ಅಮೃತ್‌ ಮಹಲ್‌ ತಳಿ ಸಂವರ್ಧನಾ ಉಪಕೇಂದ್ರವನ್ನು ನವೀಕರಣಕ್ಕೆ ತಕ್ಷಣ ಹಣ ಬಿಡುಗಡೆ ಮಾಡಿದ್ದರು.

Advertisement

ಸಿಎಂ ಆದೇಶದಂತೆ ಸಚಿವರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರಾಯಸಮುದ್ರ ಕಾವಲು ಉಪ ಕೇಂದ್ರಕ್ಕೆ ಸೂಕ್ತ ಮೂಲಭೂತ ಸೌಲಭ್ಯ ನೀಡಿದ್ದು 50 ಲಕ್ಷ ರೂ. ವೆಚ್ಚದಲ್ಲಿ ಉಪ ಕೇಂದ್ರದ ಕೊಟ್ಟಿಗೆ ನವೀಕರಣ ಮಾಡಿದ್ದರಿಂದ ರಾಸುಗಳಿಗೆ ಅನುಕೂಲವಾಗಿದೆ. ರಾಯಸಮುದ್ರ ಕಾವಲಿನ ಅಮೃತ್‌ ಮಹಲ್‌ ತಳಿ ಸಂವರ್ಧನಾ ಉಪ ಕೇಂದ್ರಕ್ಕೆ ಬಿದರೆ ಕಾವಲಿನಲ್ಲಿದ್ದ ಜಾನುವಾರುಗಳನ್ನು ಉಪಕೇಂದ್ರಕ್ಕೆ ಕರೆತರಲಾಗಿದೆ. ಒಟ್ಟು ಏಳು ಮಂದಿ ಪಶು ಪಾಲಕರಿದ್ದು, ಪ್ರತಿದಿನ ಕೊಟ್ಟಿಗೆ ಸ್ವತ್ಛತೆ ಯೊಂದಿಗೆ ಮೇವು ಹಾಗೂ ನೀರು ನೀಡುವ ಮೂಲಕ ಜಾನುವಾರುಗಳನ್ನು ಉತ್ತಮವಾಗಿ ಪಾಲನೆ ಮಾಡುತ್ತಿದ್ದಾರೆ.

ಉಪ ಕೇಂದ್ರದಲ್ಲಿರುವ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸಮಸ್ಯೆ ಇಲ್ಲ. ತಿಂಗಳಲ್ಲಿ ಎರಡು ಬಾರಿ ಅವುಗಳ ಆರೋಗ್ಯ ಪರೀಕ್ಷೆ ಮಾಡಿ ಸಮೀಪದ ಕೆರೆಯಲ್ಲಿ ರಾಸುಗಳ ಸ್ವತ್ಛತೆ ಮಾಡಲಾಗುತ್ತಿದೆ.
● ಡಾ.ರವೀಂದ್ರ, ಪ್ರಭಾರ ಮುಖ್ಯ ಪಶುವೈದ್ಯಾಧಿಕಾರಿ, ರಾಯಸಮುದ್ರ ಕಾವಲು

ಹಾಸನ ನಿರ್ಮಿತಿ ಕೇಂದ್ರದಿಂದ ಕೊಟ್ಟಿಗೆ ನವೀಕರಣ ಗೊಂಡಿದೆ. ಅರಸೀಕೆರೆ ತಾಲೂಕಿನ ಬಿದರೆ ಕಾವಲಿನಿಂದ ಜಾನುವಾರುಗಳನ್ನು ಇಲ್ಲಿಗೆ ಕರೆತಂದಿದ್ದು ಉತ್ತಮ ನಿರ್ವಹಣೆಯೊಂದಿಗೆ ಸಂರಕ್ಷಿಸಲಾಗುತ್ತಿದೆ.
● ಸಿ.ಎನ್‌.ಬಾಲಕೃಷ್ಣ , ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next