Advertisement

ಅಮೃತ್‌ ಕುಡಿವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

01:08 PM Nov 02, 2021 | Team Udayavani |

ಚಿಕ್ಕಮಗಳೂರು: ನಗರದಲ್ಲಿ ಕೈಗೊಂಡಿರುವ ಒಳಚರಂಡಿ, ಅಮೃತ್‌ ಕುಡಿಯುವ ನೀರು ಯೋಜನೆ ಕಾಮಗಾರಿ ಹಂತಮತ್ತು ಗುಣಮಟ್ಟ ಕುರಿತು ಶಾಸಕ ಸಿ.ಟಿ. ರವಿ ಅಧಿಕಾರಿಗಳಜೊತೆ ನಗರ ಪ್ರದಕ್ಷಿಣೆ ಹಾಕಿ ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

Advertisement

ಸೋಮವಾರ ನಗರದ ಬೇಲೂರು ರಸ್ತೆ, ಬೈಪಾಸ್‌, ಎಐಟಿ ವೃತ್ತ, ಹೌಸಿಂಗ್‌ ಬೋರ್ಡ್‌, ದಂಟರಮಕ್ಕಿ ಕೆರೆ ಏರಿ, ಶರೀಫ್‌ಗಲ್ಲಿ, ಮಾರ್ಕೆಟ್‌ ರಸ್ತೆ, ಟಿಪ್ಪುನಗರ, ಪಾಯಸ್‌ ಕಾಂಪೌಂಡ್‌, ತೊಗರಿಹಂಕಲ್‌ ವೃತ್ತ, ಹುಣಸೆ ಮರದ ಬೀದಿ, ಅಂಡೆ ಛತ್ರ, ಗುಂಡಪ್ಪ ಬೀದಿ, ರತ್ನಗಿರಿ ರಸ್ತೆ, ರಾಮನಹಳ್ಳಿ ಮತ್ತಿತರಕಡೆಗಳಲ್ಲಿ ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿ ಕಾರದ ಅಧಿಕಾರಿಗಳೊಂದಿಗೆ ಕಾಮಗಾರಿಗಳನ್ನು ವೀಕ್ಷಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಗರದಲ್ಲಿ ಕೈಗೊಂಡಿರುವ ಯುಜಿಡಿ ಹಾಗೂ ಅಮೃತ್‌ ಕಾಮಗಾರಿಗಳು ಕೆಲವು ಕಡೆಗಳಲ್ಲಿ ತಾಂತ್ರಿಕ, ಮತ್ತಿತರ ಕಾರಣದಿಂದಾಗಿ ವಿಳಂಬವಾಗಿದ್ದು, ಕಾಮಗಾರಿ ಗುಣಮಟ್ಟದ ಲೋಪದೋಷಗಳು, ಇತರೆ ಸಮಸ್ಯೆಗಳ ಕುರಿತು ಪರಿಶೀಲಿಸಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಸಮಾಲೋ ಚನೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ ಎಂದರು.

ನಗರದಲ್ಲಿನ 92 ರಸ್ತೆಗಳಿಗೆ ಸುಮಾರು 28 ಕೋಟಿ ಅನುದಾನದಲ್ಲಿ ಡಾಂಬರೀಕರಣ ನಡೆಯಲಿದೆ. ಇದಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದು ಟೆಂಡರ್‌ ಪ್ರಕ್ರಿಯೆ ಬಾಕಿಇದೆ. ಅಮೃತ್‌ ಹಾಗೂ ಯುಜಿಡಿ ಕಾಮಗಾರಿಗಳುಪೂರ್ಣಗೊಂಡಲ್ಲಿ ಮುಂದಿನ ಫೆಬ್ರವರಿಯಿಂದ ರಸ್ತೆಗಳ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಡಿಸೆಂಬರ್‌ ಅಥವಾ ಜನವರಿ ಅಂತ್ಯದೊಳಗೆ ಬಾಕಿ ಇರುವ ಯುಜಿಡಿ, ಅಮೃತ್‌ ಯೋಜನೆಯ ಕಾಮಗಾರಿಗಳುಪೂರ್ಣಗೊಳ್ಳಬೇಕು. ಗುತ್ತಿಗೆದಾರನ ವಿಳಂಬ ನೀತಿಯಿಂದಾಗಿಕಾಮಗಾರಿ ಪೂರ್ಣಗೊಂಡಿಲ್ಲ ಈ ಬಗ್ಗೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ ಇಲಾಖೆಯಿಂದಲೇ ಕಾಮಗಾರಿ ನಡೆಯುತ್ತಿದೆ ಎಂದರು.

Advertisement

ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಸಂಬಂಧಿ ಸಿದಂತೆ ಅಗತ್ಯ ಅನುದಾನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಮನವಿಮಾಡಲಾಗುವುದು. ಜೊತೆಗೆ ನಗರದಲ್ಲಿ ಬೀದಿದೀಪಗಳಅವ್ಯವಸ್ಥೆ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮವಹಿಸಲಾಗಿದೆ. ನಗರದ ಎಲ್ಲಾ ವಾರ್ಡ್‌ಗಳಿಗೂ ಎಲ್‌ಇಡಿ ಬೀದಿ ದೀಪ ಅಳವಡಿಕೆಗೆ ನಗರಸಭೆ ಮುಂದಾಗಿದ್ದು ಟೆಂಡರ್‌ ಕರೆಯಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್‌, ತಹಶೀಲ್ದಾರ್‌ ಡಾ| ಕೆ.ಜೆ. ಕಾಂತರಾಜ್‌, ಬಿಜೆಪಿಮುಖಂಡ ಎಚ್‌.ಡಿ. ತಮ್ಮಯ್ಯ, ದೀಪಕ್‌ ದೊಡ್ಡಯ್ಯ, ಪುಷ್ಪರಾಜ್‌, ದೇವರಾಜ್‌ ಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next