Advertisement
ಸಮುದ್ರದಲ್ಲಿ ಗಾಳಿಯ ಅಬ್ಬರ ಜೋರಾಗಿದ್ದು, ಗಂಟೆಗೆ 40 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಗಾಳಿ ಬೀಸುತ್ತಿದೆ. ಇದಲ್ಲದೆ ಅಲೆಗಳ ಅಬ್ಬರವು ಹೆಚ್ಚಾಗಿದ್ದು, ಮೀನುಗಾರರು ಅಪಾಯವನ್ನರಿತು ಮಂಗಳವಾರವೂ ಕಡಲಿಗಿಳಿಯದಿರಲು ನಿರ್ಧರಿಸಿದ್ದಾರೆ. ಗಂಗೊಳ್ಳಿ, ಮರವಂತೆ, ಕೋಡಿ, ಕೊಡೇರಿ, ಮಡಿಕಲ್, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಸೋಮವಾರ ಮೀನುಗಾರಿಕೆ ನಡೆದಿಲ್ಲ.
ಮೀನುಗಾರಿಕೆ ಆರಂಭವಾದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗುತ್ತಿಲ್ಲ. ಮೀನುಗಾರಿಕೆಗೆ ತೆರಳಿ ನಷ್ಟ ಅನುಭವಿಸುವುದು ಬೇಡವೆಂದು ಹೆಚ್ಚಿನ ಬೋಟ್‌ಗಳು ಕಡಲಿಗಿಳಿಯದೇ ದಡದಲ್ಲಿಯೇ ಲಂಗರು ಹಾಕಿವೆ. ಸೀಸನ್‌ನಲ್ಲೇ 45 ದಿನಗಳಿಗೂ ಹೆಚ್ಚು ಕಾಲದಿಂದ ಮೀನುಗಾರಿಕೆಯಿಲ್ಲದೆ ಸಂಕಷ್ಟದಲ್ಲಿರುವ ಮೀನುಗಾರರಿಗೆ ಈಗ ಅಂಫಾನ್ ಚಂಡಮಾರುತದಿಂದ ಹೊಡೆತ ಬಿದ್ದಂತಾಗಿದೆ.