Advertisement

ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣಬಲಿಪರಲ್ಲಿತ್ತು: ರಘುರಾಮ ಹೊಳ್ಳ

06:29 PM Feb 20, 2023 | Team Udayavani |

ಕೊಡಿಯಾಲಬೈಲ್‌: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಬಲಿಪ ನಾರಾಯಣ ಭಾಗವತರಿಗೆ “ಸಾರ್ವಜನಿಕ ಶ್ರದ್ಧಾಂಜಲಿ’ ಕಾರ್ಯಕ್ರಮ ಶನಿವಾರ ಶಾರದಾ ವಿದ್ಯಾಲಯದಲ್ಲಿ ನಡೆಯಿತು.

Advertisement

ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ನುಡಿನಮನ ಸಲ್ಲಿಸಿ, ಬಲಿಪರ ಮತ್ತು ತನ್ನ ಯಕ್ಷಗಾನ ಒಡನಾಟವನ್ನು ಸ್ಮರಿಸಿದರು. ಮಗುವಿನ ಮುಗ್ಧತೆ ಬಲಿಪರಲ್ಲಿತ್ತು. ಭಾಗವತಿಕೆಯ ಹಾಗೂ ಯಕ್ಷಗಾನ ಕಲೆಯ ಕುರಿತ ಅಗಾಧವಾದ ಜ್ಞಾನ ಅವರಲ್ಲಿತ್ತು. ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಗುಣ ಅವರದಾಗಿತ್ತು ಎಂದರು.

ಯಕ್ಷಗಾನದ ಹಿರಿಯ ತಲೆಮಾರಿನ ಕೊಂಡಿಯಂತಿದ್ದ ಬಲಿಪ ನಾರಾಯಣ ಭಾಗವತರು ತನ್ನ ಅಸಾಧಾರಣವಾದ ಜ್ಞಾನ ಸಂಪನ್ನತೆಯಿಂದ, ಎಲ್ಲರೊಂದಿಗೆ ಬೆರೆತು ಸಜ್ಜನಿಕೆಯಿಂದ ಕೂಡಿದ ಮಾತುಗಳಿಂದ ಜನಪ್ರೀತಿ ಗಳಿಸಿದ್ದರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಮುಖರಾದ ಪ್ರೊ| ಎಂ.ಬಿ.ಪುರಾಣಿಕ್‌, ಭುವನಾಭಿರಾಮ ಉಡುಪ, ದಿವಾಣ ಗೋವಿಂದ ಭಟ್‌, ಡಾ| ಶ್ರುತಕೀರ್ತಿ, ತಮ್ಮ ಲಕ್ಷ ¾ಣ, ಚಂದ್ರಶೇಖರ ಮಯ್ಯ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ಭಾಸ್ಕರ ರೈ ಕುಕ್ಕುವಳ್ಳಿ, ದಯಾನಂದ ಕಟೀಲು, ಜಿ.ಕೆ.ಭಟ್‌ ಸೆರಾಜೆ, ಸುಧಾಕರ ರಾವ್‌ ಪೇಜಾವರ, ಪುರುಷೋತ್ತಮ ಭಟ್‌, ರಾಮಕೃಷ್ಣ ರಾವ್‌, ಪ್ರಭಾಕರ ರಾವ್‌ ಪೇಜಾವರ, ಪೂರ್ಣಿಮಾ ರಾವ್‌ ಪೇಜಾವರ, ಚಂದ್ರಶೇಖರ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next