Advertisement

ಅಮ್ನೆಸ್ಟಿ ಇಂಡಿಯಾ, ಮಾಜಿ ಸಿಇಒಗೆ ದಂಡ ವಿಧಿಸಿದ ಜಾರಿ ನಿರ್ದೇಶನಾಲಯ

08:45 PM Jul 09, 2022 | Team Udayavani |

ನವದೆಹಲಿ: ಅಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಷನಲ್‌ ಪ್ರೈ.ಲಿ.ಗೆ 51.72 ಕೋಟಿ ರೂ. ಹಾಗೂ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಕರ್‌ ಪಟೇಲ್‌ ಅವರಿಗೆ 10 ಕೋಟಿ ರೂ.ನ ದಂಡವನ್ನು ಜಾರಿ ನಿರ್ದೇಶನಾಲಯ ವಿಧಿಸಿದೆ.

Advertisement

ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ದಂಡ ವಿಧಿಸಲಾಗಿದೆ. ಬ್ರಿಟನ್‌ನ ಅಮ್ನೆಸ್ಟಿ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಇದು ಬ್ರಿಟನ್‌ನ ಮೂಲ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಹಣ ನೀಡಿದೆ.

ನಿಯಮ ಉಲ್ಲಂಘನೆ ಮಾಡಿ, ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ದಂಡದ ಬಗ್ಗೆ ಸಮನ್ಸ್‌ ಅನ್ನು ಸಂಸ್ಥೆ ಮತ್ತು ಆಕರ್‌ಗೆ ಕಳುಹಿಸಿಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next