Advertisement

ವೈಭವದ ಬಿಸಿಲು ಕೊಂಡೋತ್ಸವ

02:42 PM Feb 27, 2022 | Team Udayavani |

ನಾಗಮಂಗಲ: ತಾಲೂಕಿನ ಇತಿಹಾಸ ಪ್ರಸಿದ್ಧ ಸೋಮನಹಳ್ಳಿ ಅಮ್ಮನ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನದ ಹಕ್ಕು ಹೊಂದಿರುವ 12 ತತ್ತಿನ ಗ್ರಾಮಗಳ ಗ್ರಾಮಸ್ಥರಿಂದ ಶನಿವಾರ ನಡೆದವೈಭವದ ಬಿಸಿಲು ಕೊಂಡೋತ್ಸವಕ್ಕೆ ಜಿಲ್ಲೆ ಸೇರಿದಂತೆನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

Advertisement

ವಿಶೇಷ ಪೂಜೆ: ಚಿಣ್ಯ ಗ್ರಾಮದ ಮೂಲ ದೇವ ಸ್ಥಾನದಲ್ಲಿ ಸೋಮನಳಮ್ಮದೇವಿಯ ಸರ್ವಾಲಂಕೃತಅಶ್ವಾರೋಹಣ ಉತ್ಸವ ಮೂರ್ತಿಗೆ ವಿಶೇಷ ಪೂಜಾಕಾರ್ಯ ನೆರವೇರಿದ ನಂತರ, ಡೊಳ್ಳು ಕುಣಿತ,ಪೂಜಾ ಕುಣಿತ, ಸೋಮನಕುಣಿತ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಉತ್ಸವ ಮೂರ್ತಿಯನ್ನು ಸೋಮನಹಳ್ಳಿ ಕ್ಷೇತ್ರಕ್ಕೆ ಕರೆತರಲಾಯಿತು.

ಕೊಂಡ ಹಾಯ್ದ ಭಕ್ತರು: ಇದೇ ವೇಳೆ ದೇವಾಲಯದ ಹಕ್ಕು ಹೊಂದಿರುವ ವಡ್ಡರಹಳ್ಳಿ,ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ,ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ,ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿ ಸುತ್ತಮುತ್ತಲ12ಗ್ರಾಮಗಳಲ್ಲಿ ದೇವಿ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ, ತಂಬಿಟ್ಟಿನ ಆರತಿಯೊಂದಿಗೆದೇವತೆಗಳನ್ನು ಕ್ಷೇತ್ರಕ್ಕೆ ಕರೆತಂದು ದೇವಾಲಯದಸುತ್ತ ಪ್ರದಕ್ಷಣೆ ನಡೆಸಿದ ನಂತರ ಸರತಿಯಂತೆ ಆಯಾಗ್ರಾಮಗಳ ದೇವಿಯ ಪೂಜೆ ಹೊತ್ತಿದ್ದ ದೇವರ ಗುಡ್ಡಪ್ಪನವರು ಕೊಂಡ ಹಾಯ್ದರು.

ಪ್ರಸಾದ ವಿತರಣೆ: ನಂತರ ಕ್ಷೇತ್ರದ ಓಕಳಿಮಂಟಪದಲ್ಲಿ ಉತ್ಸವಮೂರ್ತಿ ಮುಂದೆ ನಡೆದಅರಿಶಿಣ, ಕುಂಕುಮ ಬೆರೆಸಿದ ಬಣ್ಣದ ನೀರಿನಓಕುಳಿಯಾಟ ಮನಮೋಹಕವಾಗಿತ್ತು. ಅಲ್ಪಹಳ್ಳಿ ಗ್ರಾಮದಿಂದ ಆಗಮಿಸಿದ್ದ ಕುರ್ಜುಬಂಡಿ ಉತ್ಸವನೆರೆದಿದ್ದ ಸಹಸ್ರಾರು ಭಕ್ತರ ಗಮನಸೆಳೆಯಿತು. ದೇವಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗದೊಂದಿಗೆ ಪಾಲ್ಗೊಂಡು ತಮ್ಮ ಹರಕೆತೀರಿಸಿದರು. ಕೊಂಡೋತ್ಸವಕ್ಕೆ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಪುಳಿಯೋಗರೆ, ಮೊಸರನ್ನ ವಿತರಣೆ ಮಾಡಲಾಯಿತು.

ಬಿಗಿ ಭದ್ರತೆ: ಜಾತ್ರೆ ಪ್ರಯುಕ್ತ ಸುತ್ತಮುತ್ತಲ 12 ಗ್ರಾಮಗಳಿಂದ ಕೊಂಡೋತ್ಸವ ನಡೆದ ಹಿನ್ನೆಲೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಜೇಬುಗಳ್ಳರು,ಸರಗಳ್ಳರ ಬಗ್ಗೆ ಭಕ್ತಾದಿಗಳು ಎಚ್ಚರದಿಂದ ಇರುವಂತೆ ಪೊಲೀಸ್‌ ಸಿಬ್ಬಂದಿ ಪ್ರಚಾರ ನಡೆಸಿದರು.

Advertisement

ಹರಿದುಬಂದ ಭಕ್ತಸಾಗರ :

ಮಧ್ಯಾಹ್ನದ ವೇಳೆ ನಡೆಯುವಸೋಮನಳಮ್ಮದೇವಿ ಬಿಸಿಲು ಕೊಂಡೋತ್ಸವನೋಡಿ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತಸಮೂಹವೇ ಹರಿದುಬಂದಿತ್ತು.ಕೊಂಡೋತ್ಸವ ವೇಳೆ ಜನರನ್ನು ನಿಯಂತ್ರಿಸಲುಪೊಲೀಸರು ಹರಸಾಹಸ ಪಟ್ಟರು. ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಸೋಂಕು ಹರಡಬಾರದೆಂಬ ಉದ್ದೇಶದಿಂದ ಆರೋಗ್ಯಇಲಾಖೆ ವತಿಯಿಂದ ತಾತ್ಕಾಲಿಕ ಆರೋಗ್ಯಹೊರ ಕೇಂದ್ರ ತೆರೆಯಲಾಗಿತ್ತು. ದೇಗುಲಸುತ್ತಮುತ್ತ ಸ್ವತ್ಛತೆ ಕಾಪಾಡುವ ಕುರಿತು ಪ್ರಚಾರ ನಡೆಸಿದರು. ಅಲ್ಲದೆ ಮುನ್ನೆಚ್ಚರಿಕೆಕ್ರಮವಾಗಿ ಸ್ಥಳದಲ್ಲಿಯೇ ಒಂದು ಆ್ಯಂಬುಲೆನ್ಸ್‌ ವಾಹನ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next