Advertisement
ಪ್ರಕಾಶ ರೈ ಅವರ “ಇರುವುದೆಲ್ಲವ ಬಿಟ್ಟು “(ಲೇಖನಗಳ ಸಂಕಲನ), ಬೀದರಿನ ಡಾ| ವಿಕ್ರಮ ವಿಸಾಜಿ ಅವರ “ರಸಗಂಗಾಧರ'(ನಾಟಕ), ಉತ್ತರ ಕನ್ನಡದ ರೇಣುಕಾ ರಮಾನಂದ ಅವರ “ಮೀನುಪೇಟೆಯ ತಿರುವು’ (ಕಾವ್ಯ), ಬೆಳಗಾವಿಯ ಯ.ರು.ಪಾಟೀಲ ಅವರ “ಬೆಳ್ಳಿಚುಕ್ಕಿಯ ಬಂಗಾರದ ಕನಸು’ (ಕಾದಂಬರಿ) ಮತ್ತು ಕಲಬುರಗಿಯ ಶಶಿಕಾಂತ ದೇಸಾಯಿ ಅವರ “ಕಂಬಳಿಯ ಕೆಂಡ’ (ಕಥಾ ಸಂಕಲನ) ಕೃತಿಗಳನ್ನು 18 ನೇ ವರ್ಷದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಮತ್ತು ಸತ್ಕಾರ ಒಳಗೊಂಡಿರುತ್ತದೆ. ನ.26 ರಂದು ಸಂಜೆ 5.30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಿಂದ ಆರಂಭಗೊಂಡ “ಅಮ್ಮ ಗೌರವ ಪುರಸ್ಕಾರ’ಕ್ಕೆ ಈ ಬಾರಿ ಹಿರಿಯ ಚಲನಚಿತ್ರ ನಟ ಶ್ರೀನಾಥ, ಮಾಜಿ ಉಪಸಭಾಪತಿ ಚಂದ್ರಶೇಖರರೆಡಿª ದೇಶಮುಖ ಮದನಾ, ಮುದ್ರಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಶೀಲರಾದ ಬೆಂಗಳೂರಿನ ಸ್ವಾÂನ್ ಕೃಷ್ಣಮೂರ್ತಿ, ಹಿರಿಯ ಲೇಖಕ ಚಂದ್ರಕಾಂತ ಕರದಳ್ಳಿ ಶಹಾಪುರ ಮತ್ತು ಕೆರೆ ಹೂಳೆತ್ತುವ ಮೂಲಕ ಮಹಿಳಾ ಸ್ವಾವಲಂಬಿತನಕ್ಕೆ ಸಾಕ್ಷಿಯಾಗಿರುವ ಚಂದಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.