Advertisement

ರಾಜಾರಾಂ ತಲ್ಲೂರು ಅವರ ಕೃತಿ ‘ನುಣ್ಣನ್ನಬೆಟ್ಟ’ಕ್ಕೆ ಅಮ್ಮ ಪ್ರಶಸ್ತಿ

04:08 PM Nov 13, 2017 | Karthik A |

ಉಡುಪಿ: 2016-17ನೇ ಸಾಲಿನ ಅಮ್ಮ ಪ್ರಶಸ್ತಿಯನ್ನು ಗುಲ್ಬರ್ಗದ ಮಾತೋಶ್ರೀ ಮಹದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪ್ರಕಟಿಸಿದ್ದು, ಉಡುಪಿಯ ಮಾಜೀ ಪತ್ರಕರ್ತ, ಅಂಕಣಕಾರ ರಾಜಾರಾಂ ತಲ್ಲೂರು ಅವರ ಕ್ರತಿ’ ನುಣ್ಣನ್ನಬೆಟ್ಟ’ ಸೇರಿದಂತೆ ಐದು ಕ್ರತಿಗಳಿಗೆ ಈ ಪ್ರಶಸ್ತಿ ಸಂದಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Advertisement

ಈ ಬಾರಿಯ ಇತರ ಪ್ರಶಸ್ತಿ ವಿಜೇತ ಕ್ರತಿಗಳೆಂದರೆ, ಕವಯಿತ್ರಿ ಎಂ. ಆರ್. ಕಮಲ ಅವರ ಕವನ ಸಂಕಲನ ’ ಮಾರಿಬಿಡಿ’, ರೇಖಾ ಕಾಖಂಡಕಿ ಅವರ ಕಾದಂಬರಿ ’ವೈವಸ್ವತ’, ಎಚ್ ಆರ್ ಸುಜಾತ ಅವರ ಕವನ ಸಂಕಲನ ’ನೀಲಿ ಮೂಗಿನ ನತ್ತು’ ಮತ್ತು ಗಿರೀಶ್ ಜಕಾಪುರೆ ಅವರ ನಾಝಿ ನರಮೇಧ ಸಂಶೋಧನಾ ಕ್ರತಿಗಳು.

18ನೇ ವರ್ಷದಲ್ಲಿ ಕೊಡಲಾಗುತ್ತಿರುವ ಈ ವಾರ್ಷಿಕ ಪ್ರಶಸ್ತಿಯು 5000 ರೂ. ನಗದು, ಫಲಕ, ಶಾಲು ಇತ್ಯಾದಿಗಳನ್ನು ಒಳಗೊಂಡಿದ್ದು, ಸೇಡಂನಲ್ಲಿ ನವೆಂಬರ್ 26ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.


ಅವಧಿ ಅಂತರ್ಜಾಲ ತಾಣದಲ್ಲಿ ರಾಜಾರಾಂ ತಲ್ಲೂರು ಅವರ ಬರೆದ ನುಣ್ಣನ್ನಬೆಟ್ಟ ಅಂಕಣಗಳನ್ನು ಪ್ರೊಡಿಜಿ ಮುದ್ರಣ ಅದೇ ಹೆಸರಿನಲ್ಲಿ ಪ್ರಕಟಿಸಿದ್ದು, ಇದೇ ಆಗಸ್ಟಿನಲ್ಲಿ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಪುಸ್ತಕವನ್ನು ಉಡುಪಿಯಲ್ಲಿ ಬಿಡುಗಡೆಗೊಳಿಸಿದ್ದರು.

ಅಮ್ಮ ಪ್ರಶಸ್ತಿಯನ್ನು ಕಳೆದ 17 ವರ್ಷಗಳಿಂದ ನೀಡಲಾಗುತ್ತಿದ್ದು, ಎಚ್ ಎಸ್ ಮುಕ್ತಾಯಕ್ಕ, ವಸುಧೇಂದ್ರ, ಜಯಶ್ರೀ ಕಾಸರವಳ್ಳಿ, ಸರಜೂ ಕಾಟ್ಕರ್, ರೂಪಾ ಹಾಸನ್, ಸಿ ಜಿ ಮಂಜುಳಾ, ಜ್ಯೋತಿ ಗುರುಪ್ರಸಾದ್, ಉಷಾ ಪಿ. ರೈ ಮತ್ತಿತರ ಲೇಖಕರು ಗಳಿಸಿಕೊಂಡಿದ್ದಾರೆ. ಗುಲ್ಬರ್ಗಾ ಕ. ಸಾ. ಪ. ಅಧ್ಯಕ್ಷರಾಗಿದ್ದ, ಪತ್ರಕರ್ತ ಮಹಿಪಾಲ ರೆಡ್ಡಿ ಮುನ್ನೂರ ಅವರು ತಮ್ಮ ತಾಯಿಯ ನೆನಪಿನಲ್ಲಿ ಮಾತೋಶ್ರೀ ಮಹದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನದ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

Advertisement

ಅಮ್ಮ ಪ್ರಶಸ್ತಿ ವಿಜೇತರಿವರು…:


ರೇಖಾ ಕಾಖಂಡಕಿ


ಎಚ್ ಆರ್ ಸುಜಾತ


ಗಿರೀಶ್ ಜಕಾಪುರೆ


ಎಂ ಆರ್ ಕಮಲ

Advertisement

Udayavani is now on Telegram. Click here to join our channel and stay updated with the latest news.

Next