Advertisement
ಮತ್ತೂಂದು ಆಶ್ಚರ್ಯಕರ ಅಂಶ ತಾಯಿಯೇಕೆ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸು ವಳು? ತಂದೆ, ಅಣ್ಣ, ತಂಗಿ, ಸ್ನೇಹಿತರು ಹೀಗೆ ಎಲ್ಲ ಸಂಬಂಧಕ್ಕಿಂತ ತಾಯಿಯ ಪ್ರೀತಿ ಹಿರಿದೇಕೆ? ಅಥವಾ ಹುಟ್ಟಿನಿಂದ ಸಾಯುವ ವರೆಗೆ ಇರುವ ಎಲ್ಲ ಸಂಬಂಧಗಳ ಒಟ್ಟು ಪ್ರೀತಿಗೂ ತಾಯಿಯ ಪ್ರೀತಿಗೂ ಸರಿಸಾಟಿಯಾಗದು ಏಕೆ? ಇದಕ್ಕೆ ಕಾರಣ ಪ್ರತಿಯೊಬ್ಬರೂ ಈ ಪ್ರಪಂಚಕ್ಕೆ ಬರುವ ಮೊದಲು ತಾಯಿಗರ್ಭವೆಂಬ ಪ್ರಪಂಚದಲ್ಲಿರುವವರು.
Related Articles
Advertisement
ತಾಯಿಗೆ ಮಕ್ಕಳೆಂದರೆ ಇಷ್ಟವೆಂಬುದು ತಿಳಿಯಿತು. ಆದರೆ ಎಲ್ಲರಿಗೂ ಅಮ್ಮಾ ಎಂದರೆ ಏಕಿಷ್ಟ? ತಾಯಿಯ ಈ ಪ್ರೀತಿ, ಕರುಣೆ, ಕಾಳಜಿ, ತ್ಯಾಗ, ದುಡಿಮೆ ಮುಂತಾದವುಗಳೆಲ್ಲ ಸಹಜವಾಗಿ ಮತ್ತು ಅನಿವಾರ್ಯವಾಗಿ ಮಕ್ಕಳು ತಾಯಿಯನ್ನು ಪ್ರೀತಿಸುವಂತೆ ಮಾಡುತ್ತವೆ.
ಅಮ್ಮನ ಆ ನಿಸ್ವಾರ್ಥ ಪ್ರೀತಿಯು ಮಕ್ಕಳ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತದೆ. ಜಗತ್ತೇ ಶತ್ರುವಂತೆ ಕಂಡಾಗಲೂ ತಾಯಿ ಮಾತ್ರ ಆತ್ಮೀಯಳಾಗಿ ಕಾಣುತ್ತಾಳೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಂಬಂಧಗಳು ಶಿಥಿಲಗೊಳ್ಳುತ್ತಿರುತ್ತವೆ. ಆದರೆ ತಾಯಿ ಸಂಬಂಧ ಸಾರ್ವಾಕಾಲಿಕ.
ತನಗಿಲ್ಲದಿದ್ದರೂ ಮಕ್ಕಳಿಗೆ ಹೊಟ್ಟೆ ತುಂಬ ಊಟ ನೀಡುತ್ತಾಳೆ, ಯಾಕೆಂದರೆ ತಾಯಿಗೆ ಮಕ್ಕಳೇ ಸರ್ವಸ್ವ. ತಾಯಿಯ ಪ್ರೀತಿಯ ಮಹತ್ವದ ಕುರಿತಾಗಿ ಹೇಳುವ ಅದೆಷ್ಟೋ ಹಾಡು, ಕವನ – ಕವಿತೆ, ಚಲನಚಿತ್ರಗಳು ಬಂದಿದ್ದರೂ ತಾಯಿಯ ಪ್ರೀತಿಯನ್ನು ವರ್ಣಿಸಲು ಸಾಲದು. ಹಗಲಿರುಳು ಮಕ್ಕಳ ಏಳಿಗೆಯ ಬಗ್ಗೆ ಯೋಚಿಸುವ ಏಕೈಕ ಜೀವ ಎಂದರೆ ಅದು ತಾಯಿ ಮಾತ್ರ.
ತಾಯಿಯ ಅವರ್ಣನೀಯ ಅಪ್ರತಿಮ ಪ್ರೀತಿಯೇ ಮಗು ತಾಯಿಯನ್ನು ಅನಿವಾರ್ಯವಾಗಿ ಇಷ್ಟಪಡುವಂತೆ ಮಾಡುತ್ತದೆ. ಮಕ್ಕಳ ಪ್ರೀತಿಯೋ ಋಣದ ಭಾರ ತೀರಿಸುವ ವ್ಯಾವಹಾರಿಕ ಪ್ರೀತಿಯಾದರೆ; ತಾಯಿಯದೋ ನಿಸ್ವಾರ್ಥ ಬತ್ತದ ಅಕ್ಕ ರೆಯ ಆಗರ. ತಾಯಿಗೆ ತಾಯಿಯೇ ಉಪಮೇಯ. ಉಳಿದೆಲ್ಲಾ ಮಾತು ಅತ್ಯಲ್ಪ, ಮಾತೃ ವಾತ್ಸಲ್ಯಕ್ಕೆ ಮಿಗಿಲಾದ ಪ್ರೀತಿ ಈ ಭೂಮಿಯ ಮೇಲೆ ಸಿಗಲು ಸಾಧ್ಯವಿಲ್ಲ.
ಶಂಕರ ಸನ್ನಟ್ಟಿ
ಬಾಗಲಕೋಟೆ