Advertisement

ಪಣಜಿ: ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ : ಅಮಿತ್ ಪಾಲೇಕರ್ ಆರೋಪ

05:58 PM Oct 06, 2022 | Team Udayavani |

ಪಣಜಿ: ಗೋವಾ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲ್ಲಲು ಸಂಚು ರೂಪಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ  ಅಮಿತ್ ಪಾಲೇಕರ್ ಆರೋಪಿಸಿದ್ದಾರೆ.

Advertisement

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು – ಬಿಜೆಪಿ ಈಗಾಗಲೇ ಎಂಟು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮೂಲಕ ಗೋಮಾಂತಕದ ಜನರಿಗೆ ದ್ರೋಹ ಮಾಡಿದೆ. ಇದೀಗ ಮೇಯರ್, ಉಪಮೇಯರ್ ಆಯ್ಕೆಗೆ ಗೌಪ್ಯ ಮತದಾನದ ಬದಲು ಕೈ ಎತ್ತುವ ಮೂಲಕ ಅನುಮೋದನೆ ನೀಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು  ಪಾಲೇಕರ್ ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಕ್ರೂಜ್ ಸಿಲ್ವಾ ಮಾತನಾಡಿ-ಇಂದು ಬಿಜೆಪಿ ಸರಕಾರದಿಂದಾಗಿ ದೇಶ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆಪರೇಷನ್ ಕಮಲದ ಮೂಲಕ ಇಲ್ಲವೇ ಬೇರೆ ಮಾರ್ಗಗಳ ಮೂಲಕ ವಿರೋಧವನ್ನು ಹೋಗಲಾಡಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಆದರೆ, ಬಿಜೆಪಿಯ ಷಡ್ಯಂತ್ರಕ್ಕೆ ಎಎಪಿ ನಾಯಕರು ಎಂದಿಗೂ ಬಲಿಯಾಗುವುದಿಲ್ಲ ಎಂದು ಎಎಪಿ ಶಾಸಕ ಕ್ರೂಜ್ ಸಿಲ್ವಾ ಹೇಳಿದರು. ಈ ಸಂದರ್ಭದಲ್ಲಿ ಎಎಪಿ ಶಾಸಕ ವೆಂಜಿ ವಿಗಾಸ್ ಮತ್ತು ಕ್ರೂಜ್ ಸಿಲ್ವಾ ಉಪಸ್ಥಿತರಿದ್ದರು.

ಇದನ್ನೂ ಓದಿ : ಲೋಕಾರ್ಪಣೆಗೊಂಡು ವಾರದ ಒಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಹಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next