Advertisement
ಜತೆಗೆ, ಇನ್ನೂ ಕೆಲವು ದಿನಗಳ ಕಾಲ ಅಪ್ಪ ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆಯಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ ಅಭಿಷೇಕ್. ಬಿಗ್ ಬಿ ಕೂಡ ಈ ಕುರಿತು ಟ್ವೀಟ್ ಮಾಡಿ, ‘ನನ್ನ ವರದಿ ನೆಗೆಟಿವ್ ಬಂದಿದೆ. ನಾನೀಗ ಮನೆಗೆ ಮರಳಿ, ಕ್ವಾರಂಟೈನ್‌ನಲ್ಲಿರುತ್ತೇನೆ. ದೇವರ ದಯೆ, ನಿಮ್ಮೆಲ್ಲರ ಪ್ರಾರ್ಥನೆ, ನಾನಾವತಿ ಆಸ್ಪತ್ರೆಯ ಸಿಬಂದಿಯ ಅತ್ಯದ್ಭುತ ಸೇವೆಯು ನಾನು ಈ ದಿನವನ್ನು ನೋಡುವಂತೆ ಮಾಡಿತು’ ಎಂದು ಬರೆದುಕೊಂಡಿದ್ದಾರೆ. ಜುಲೈ 11ರಂದು ಅಮಿ ತಾಭ್ ಹಾಗೂ ಅಭಿಷೇಕ್‌ಗೆ ಸೋಂಕು ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿದ್ದರು.
ಕುತೂಹಲಕಾರಿ ವಿಚಾರವೆಂದರೆ, ಆಗಸ್ಟ್ 2 ಬಿಗ್‌ಬಿ ಪಾಲಿಗೆ ವಿಶೇಷ ದಿನ. ಯಾಕೆಂದರೆ, ಅಮಿತಾಭ್ ಬಚ್ಚನ್ ಅವರ ಬದುಕಿಗೆ ದೊಡ್ಡ ಆಘಾತ ಹಾಗೂ ತಿರುವು ನೀಡಿದ್ದಂಥ 1982ರ ದುರಂತದ ವೇಳೆ ಕೋಮಾದಿಂದ ಅವರು ಹೊರಬಂದಿದ್ದೂ ಇದೇ ದಿನ. ಬೆಂಗಳೂರಿನಲ್ಲಿ ಕೂಲಿ ಸಿನೆಮಾ ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಮಿತಾಭ್ ಕೋಮಾ ಸ್ಥಿತಿಗೆ ತಲುಪಿದ್ದರು. ನಿರಂತರ ಚಿಕಿತ್ಸೆಯ ಬಳಿಕ ಆ. 2ರಂದು ಅವರು ಕೋಮಾದಿಂದ ಹೊರಬಂದಿದ್ದರು. ಇದು ನನಗೆ ಮರುಹುಟ್ಟು ನೀಡಿದ ದಿನ ಎಂದು ಅವರೇ ಹಲವು ಬಾರಿ ಹೇಳಿಕೊಂಡಿದ್ದರು. ಈಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಡಿಸಾcರ್ಜ್ ಆಗಿ ಮನೆಗೆ ತೆರಳಿದ್ದೂ ಆಗಸ್ಟ್ 2ರಂದು ಎನ್ನುವುದು ವಿಶೇಷ.