Advertisement

ಅಮಿತಾಭ್‌ಗೆ 8 ಕೋಟಿ ಫಾಲೋವರ್‌ಗಳು

07:30 AM Dec 12, 2017 | Team Udayavani |

ಮುಂಬಯಿ: ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚಟುವಟಿಕೆಯಿಂದ ಇರುವ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ರ ಒಟ್ಟು ಫಾಲೋವರ್‌ಗಳ ಸಂಖ್ಯೆ 8 ಕೋಟಿ ದಾಟಿದೆ. ಈ ವಿಷಯವನ್ನು ಸ್ವತಃ ಅಮಿತಾಭ್‌ ಅವರೇ ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ. “ನನ್ನ ವಿಸ್ತರಿಕ ಕುಟುಂಬದ ಎಲ್ಲರೂ ಕೇಳಿ. ಒಂದು ಕ್ಷಣ ಉಸಿರು ಬಿಗಿ ಹಿಡಿಯಿರಿ. ಹಲವಾರು ಸಾಮಾಜಿಕ ಜಾಲತಾಣಗಳ ಲ್ಲಿಯ ನನ್ನ ಫಾಲೋವರ್‌ಗಳ ಸಂಖ್ಯೆ ಈಗ 8 ಕೋಟಿ ತಲುಪಿದೆ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯ ವಾದ ಗಳು’ ಎಂದು ಅವರು ಬರೆದಿದ್ದಾರೆ. ಬಚ್ಚನ್‌ ಸದ್ಯ ಟ್ವಿಟರ್‌ನಲ್ಲಿ 3.17 ಕೋಟಿ, ಫೇಸ್‌ಬುಕ್‌ನಲ್ಲಿ 2.76 ಕೋಟಿ ಮತ್ತು ಇನ್‌ಸ್ಟಾrಗ್ರಾಂನಲ್ಲಿ 62 ಲಕ್ಷ ಫಾಲೊವರ್‌ಗಳನ್ನು ಹೊಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next