Advertisement

Amitabh Bachchan: ಮಹಿಳೆಯರ ಒಳಉಡುಪಿನ ಬಗ್ಗೆ ಟ್ವೀಟ್; ಟ್ರೋಲಾದ ಬಿಗ್‌ ಬಿ ಅಮಿತಾಭ್

11:56 AM Jul 27, 2023 | Team Udayavani |

ಮುಂಬಯಿ: ಬಾಲಿವುಡ್‌ ಸೂಪರ್‌ ಸ್ಟಾರ್‌, ಬಿಗ್‌ ಬಿ ತನ್ನ ನಟನೆ ಮಾತ್ರವಲ್ಲದೆ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೂ ಜನಮನವನ್ನು ಗೆದ್ದವರು. ಅವರ ಸಿನಿಮಾಗಳನ್ನು ಜನ ಎಷ್ಟು ಇಷ್ಟಪಡುತ್ತರೋ, ನಿಜ ಜೀವನದಲ್ಲೂ ಅವರನ್ನು ಅಷ್ಟೇ ಮಂದಿ ಇಷ್ಟಪಡುತ್ತಾರೆ.

Advertisement

ಆದರೆ ಎಷ್ಟೇ ಸರಳ ಸಜ್ಜನಿಕೆಯಿಂದ ಇದ್ದರೂ ಇಂಟರ್‌ ನೆಟ್‌ ಯುಗದಲ್ಲಿ ಒಮ್ಮೆಯಾದರೂ ಟ್ರೋಲ್‌ ಗೆ ಒಳಗಾಗುವ ಕಲಾವಿದರನ್ನು ನೋಡಿದ್ದೇವೆ. ಅಮಿತಾಭ್ ಬಚ್ಚನ್ ಅವರು ಈ ಹಿಂದೆ ಮಾಡಿದ ಟ್ವೀಟ್‌ ವೊಂದು ಮತ್ತೆ ವೈರಲ್‌ ಆಗುತ್ತಿದ್ದು, ಇದರಿಂದ ಬೊಗ್‌ ಬಿ ಟ್ರೋಲ್‌ ಆಗಿದ್ದಾರೆ.

ಟ್ವೀಟ್‌ ನಲ್ಲಿ ಏನಿದೆ?: 2010ರ ಜೂ.12 ರಂದು ಅಮಿತಾಭ್‌ ಟ್ವಿಟರ್‌ ನಲ್ಲಿ “ಬ್ರಾ ಏಕವಚನ ಮತ್ತು ‘ಪ್ಯಾಂಟೀಸ್’ ಬಹುವಚನ ಯಾಕೆ ” ಎಂದು ಟ್ವೀಟ್‌ ಮಾಡಿದ್ದರು.

ಇದೇ ಟ್ವೀಟ್‌ ಸ್ಕ್ರೀನ್‌ ಶಾಟ್‌ ಆಗಿ ವೈರಲ್‌ ಆಗಿತ್ತು. ಇದೀಗ ಮತ್ತೆ ಟ್ವೀಟ್‌ ನ್ನು ರೆಡ್ಡಿಟ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಾರಿ ಜನ ನಾನಾ ರೀತಿಯಲ್ಲಿ ಅಮಿತಾಭ್‌ ಅವರನ್ನು ಟ್ರೋಲ್‌ ಮಾಡಿದ್ದಾರೆ.

“ಇದು ಒಳ್ಳೆಯ ಪ್ರಶ್ನೆ, ಅಮಿತಾಭ್‌ ಅವರು ಇದನ್ನು ಮುಂದಿನ ಕೆಬಿಸಿ ಸೀಸನ್‌ ನಲ್ಲಿ ಕೇಳಿ” ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. “ಈ ಡೌಟ್‌ ಇವತ್ತೇ ಕ್ಲಿಯರ್‌ ಆಗಬೇಕು” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ. “ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ” ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

Advertisement

ಕಳೆದ ವರ್ಷ ತೆರೆಕಂಡಿದ್ದ ‘ಉಂಚೈ’ ಚಿತ್ರದಲ್ಲಿ ಅಮಿತಾಭ್‌ , ಬೋಮನ್ ಇರಾನಿ, ಅನುಪಮ್ ಖೇರ್ ಮತ್ತು ಪರಿಣಿತಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.