Advertisement

ಬಿಗ್‌ಬಿ ನಿವೃತ್ತಿಯ ಸುಳಿವು

12:34 AM Nov 29, 2019 | mahesh |

ಹೊಸದಿಲ್ಲಿ : ಸಿನೆಮಾ ವೃತ್ತಿ ಜೀವನದಲ್ಲಿ 50 ವರ್ಷ ಪೂರೈಸಿ ರುವ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌, ಸಿನೆಮಾದಿಂದ ನಿವೃತ್ತಿ ಹೊಂದುವಂತೆ ತಮ್ಮ ದೇಹ ಸೂಚನೆ ನೀಡುತ್ತಿ¤ದೆ ಎಂಬ ಭಾವನೆ ಮೂಡುತ್ತಿದೆ ಎಂದು ತಿಳಿಸಿದ್ದಾರೆ. ತಮ್ಮ ಬ್ಲಾಗ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ನಾನು ನಿವೃತ್ತಿ ಹೊಂದಬೇಕಿದೆ. ಆದರೆ, ತಲೆ ಬೇರೆಯದ್ದೇ ರೀತಿಯಲ್ಲಿ ಯೋಚನೆ ಮಾಡುತ್ತಿದ್ದರೆ, ಬೆರಳುಗಳು ಮತ್ತೂಂದನ್ನು ಹೇಳುತ್ತಿವೆ. ಇದು ಸಂದೇಶವಾಗಿದೆ ಎಂದು ತಿಳಿಸಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಅಲಿಯಾ ಭಟ್‌, ರಣಬೀರ್‌ ಕಪೂರ್‌ ಅಭಿನಯದ “ಬ್ರಹ್ಮಾಸ್ತ್ರ’ ಸಿನೆಮಾ ಚಿತ್ರೀಕರಣದಲ್ಲಿ ಅವರು ತೊಡಗಿಸಿ ಕೊಂಡಿದ್ದಾರೆ. ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಅವರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next