Advertisement

ಐಟಿಬಿಪಿ ಮುಖ್ಯ ಕಚೇರಿಗೆ ಅಮಿತ್‌ ಶಾ ಭೇಟಿ

11:41 PM Dec 28, 2019 | Team Udayavani |

ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಯ ಇಂಡೊ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ) ಮುಖ್ಯ ಕಚೇರಿಗೆ ಭೇಟಿ ನೀಡಿ, ಭಾರತ – ಚೀನ ಗಡಿ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸಲು ಇರುವ ಸನ್ನದ್ಧತೆ ಕುರಿತು ಪರಾಮರ್ಶೆ ನಡೆಸಿದರು. ಅಮಿತ್‌ ಶಾ ಜತೆ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಮತ್ತು ಗೃಹ ಕಾರ್ಯದರ್ಶಿ ಅಜಯ್‌ ಬಲ್ಲಾ ಇದ್ದರು. ಐಟಿಬಿಪಿಯ ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಕಾರ್ಯಸೂಚಿಗಳನ್ನು ಮಂಡಿಸಿದರು. ತೀರಾ ಕಡಿಮೆ ತಾಪಮಾನವಿರುವ ಪ್ರದೇಶಗಳಲ್ಲಿ ಗೆಜೆಟ್‌ಗಳನ್ನು ಮತ್ತು ತಂತ್ರಜ್ಞಾನವನ್ನು ಯಥೇತ್ಛವಾಗಿ ಬಳಸುವಂತೆ ಅಮಿತ್‌ ಶಾ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next