Advertisement
ಬಳ್ಳಾರಿ ಜಿಲ್ಲೆ, ಹಳೆ ಮೈಸೂರು ಮತ್ತು ರಾಜಧಾನಿಯನ್ನು ಗಮನದಲ್ಲಿರಿಸಿಕೊಂಡು ಅಮಿತ್ ಶಾ ಕಾರ್ಯತಂತ್ರ ರೂಪಿಸಿಕೊಂಡೇ ಬರುತ್ತಿದ್ದಾರೆ. ಈ ಭಾಗಗಳಲ್ಲಿ ಬಿಜೆಪಿಯ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿ ಮಹತ್ವದ ಸಭೆ ನಡೆಸಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಇದೊಂದು ಮಹತ್ವದ ಸಭೆ ಎಂದೇ ವಿಶ್ಲೇಷಿಸಲಾಗುತ್ತಿದೆ.
Related Articles
Advertisement
ಸಂಡೂರಿನ ಕಾರ್ಯಕ್ರಮವನ್ನು ಮುಗಿಸಿ ಸಂಜೆ ಬೆಂಗಳೂರಿಗೆ ಆಗಮಿಸುವ ಅಮಿತ್ ಶಾ ಪುರಭವನದಲ್ಲಿ ಆಯೋಜಿಸಿರುವ “ಭಾರತದ ರಾಜಕೀಯದಲ್ಲಿ 65 ವರ್ಷಗಳು ಮತ್ತು ನರೇಂದ ಮೋದಿ ಅವಧಿಯ ಮಾದರಿ ಬದಲಾವಣೆಗಳು’ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಅನಂತರ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿರುವ ಬಿಜೆಪಿಯ ಮಹತ್ವದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಬೆಂಗಳೂರು ನಗರದ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು ಹಾಗೂ ಹಿರಿಯ ನಾಯಕರ ಜತೆಗೆ ಸಭೆ ನಡೆಸಲಿದ್ದಾರೆ.
ಬಲವರ್ಧನೆಗೆ ರೂಟ್ ಮ್ಯಾಪ್ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಪಕ್ಷದ ಬಲವರ್ಧನೆ ಕಾರ್ಯತಂತ್ರದ ಬಗ್ಗೆಯೂ ಚರ್ಚೆಯಾಗಲಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಅಮಿತ್ ಶಾ ರೂಟ್ ಮ್ಯಾಪ್ ನಿಗದಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.