Advertisement

ಬಡವರಿಗೆ ಕೇಂದ್ರದ ಯೋಜನೆ ಸಿಗದಂತಾಗಿದೆ. ಮಮತಾ ಜನ ವಿರೋಧಿ: ಅಮಿತ್ ಶಾ ಕಿಡಿ

06:24 PM Nov 05, 2020 | Nagendra Trasi |

ಕೋಲ್ಕೋತಾ: ಪಶ್ಚಿಮ ಬಂಗಾಳದ ಜನರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಡಳಿತದ ವಿರುದ್ಧ ಆಕ್ರೋಶಿತಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ(ನವೆಂಬರ್ 5, 2020) ಹೇಳಿದರು.

Advertisement

ಎರಡು ದಿನಗಳ ಪಶ್ಚಿಮಬಂಗಾಳ ಭೇಟಿಗಾಗಿ ಆಗಮಿಸಿದ್ದ ಶಾ ಅವರು ಇಂದು ಬಂಕುರಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಪಶ್ಚಿಮಬಂಗಾಳದ ಜನತೆಯ ಕಣ್ಣುಗಳಲ್ಲಿ ಬದಲಾವಣೆಯ ನಿರೀಕ್ಷೆಯನ್ನು ಕಾಣುತ್ತಿರುವುದಾಗಿ ತಿಳಿಸಿದರು. ಇದು ಕೇವಲ ನರೇಂದ್ರ ಮೋದಿ ಅವರ ನಾಯಕತ್ವದಿಂದ ಮಾತ್ರ ಸಾಧ್ಯ ಎಂದರು.

ಕೇಂದ್ರ ಸರ್ಕಾರ ನೀಡಿರುವ ಸುಮಾರು 80ಕ್ಕೂ ಅಧಿಕ ಯೋಜನೆಗಳು ಪಶ್ಚಿಮ ಬಂಗಾಳದ ಜನರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ದೊರೆಯದಂತೆ ಮಾಡಿದೆ ಎಂದು ದೂರಿದರು. ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿದ್ದ ಶಾ ಅವರು ಖ್ಯಾತ ಬುಡಕಟ್ಟು ಮುಖಂಡ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಹೂಮಾಲೆ ಹಾಕಿದರು.

ಇಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಡಕಟ್ಟು ಜನರ ವಸತಿ ಯೋಜನೆಗೆ ನೀಡಿದ ಹಣವೂ ಕೂಡಾ ತಲುಪಿಲ್ಲ. ರೈತರಿಗೆ ವಾರ್ಷಿಕವಾಗಿ ಸಿಗಬೇಕಾಗಿದ್ದ ಕೇಂದ್ರದ ಆರು ಸಾವಿರ ರೂಪಾಯಿ ಹಣವನ್ನೂ ಕೂಡಾ ಮಮತಾ ಸರ್ಕಾರ ನಿರಾಕರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next