Advertisement

ಮೋದಿ ಜೀವನಾಧಾರಿತ ಕರ್ಮಯೋಧ ಗ್ರಂಥ ಲೋಕಾರ್ಪಣೆ

10:33 AM Jan 09, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಕೃತಿಯಾದ ‘ಕರ್ಮ ಯೋಧ ಗ್ರಂಥ’ ಎಂಬ ಹೊತ್ತಗೆಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೊಸದಿಲ್ಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.

Advertisement

ಅನಂತರ ಮಾತನಾಡಿದ ಅವರು, ‘ಕರ್ಮ ಯೋಧ ಎಂದರೆ ಜನರಿಗಾಗಿ ಸದಾ ಮಿಡಿಯುವ ಹೃದಯವುಳ್ಳವನು ಎಂದರ್ಥ. ದೊಡ್ಡ ಸವಾಲುಗಳನ್ನು ಸ್ವೀಕರಿಸಿ ಗೆಲ್ಲುವ ಒಬ್ಬ ರಾಜತಾಂತ್ರಿಕನನ್ನು ಅಥವಾ ಆಡಳಿತಗಾರರನ್ನು ಅಥವಾ ಒಬ್ಬ ನಾಯಕನನ್ನೂ ಕರ್ಮಯೋಧ ಎಂದು ಕರೆಯಬಹುದು. ಈ ಎಲ್ಲಾ ಗುಣ ವಿಶೇಷಣಗಳು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನಾವು ಕಾಣಬಹುದು” ಎಂದರು.

ಪ್ರಧಾನಿಯವರ ಜೀವನದಲ್ಲಿ ಮೂರು ಅಧ್ಯಾಯಗಳಿದ್ದು, ಮೊದಲ ಅಧ್ಯಾಯ ಅವರ ಸೈದ್ಧಾಂತಿಕ ಜೀವನಕ್ಕೆ ಸಂಬಂಧಿಸಿದ್ದಾಗಿದ್ದರೆ, ಎರಡನೆಯದ್ದು ಅವರ ರಾಜಕೀಯ ಪ್ರವೇಶ ಹಾಗೂ ಮೂರನೆಯದ್ದು ಅವರ ಭಾರತದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾಗಿದೆ. ತಮ್ಮ ನಿಸ್ಪೃಹ ಸೇವೆಯಿಂದಾಗಿ ಮೋದಿಯವರು ಇಂದು ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಶಾ ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next