Advertisement

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ: ಮಥುರಾದಲ್ಲಿ ಅಮಿತ್ ಶಾ

02:57 PM Jan 27, 2022 | Team Udayavani |

ನವದೆಹಲಿ: ಉತ್ತರಪ್ರದೇಶದಲ್ಲಿನ 20 ಕೋಟಿಗೂ ಅಧಿಕ ಜನರು ಪ್ರಗತಿಯಾಗದ ಹೊರತು ಭಾರತವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ನಿಮ್ಮ ವಿಶ್ವಾಸ ಮತ್ತು ನಂಬಿಕೆಯಿಂದಾಗಿ ಉತ್ತರಪ್ರದೇಶ ಇಂದು ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ನುಡಿದಿದ್ದಾರೆ.

Advertisement

ಇದನ್ನೂ ಓದಿ:ಸವದಿ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ: ಲಖನ್ ಜಾರಕಿಹೊಳಿ ಬಾಂಬ್

ಗುರುವಾರ(ಜನವರಿ 27) ಮಥುರಾದಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಿಗದಿತ ಜನರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಮತ್ತೆ ತಮ್ಮ ಪಕ್ಷವನ್ನು ಅಧಿಕಾರ ತನ್ನಿ ಎಂದು ಹೇಳುತ್ತಿದ್ದಾರೆ. ಅಂದರೆ ಅದರ ಅರ್ಥ ಉತ್ತರಪ್ರದೇಶದಲ್ಲಿ ಪುನಃ ಗೂಂಡಾರಾಜ್ಯ ಮರಳಿದೆ ಎಂಬುದಾಗಿದೆ ಎಂದು ಶಾ ತಿರುಗೇಟು ನೀಡಿದ್ದಾರೆ.

ಅಖಿಲೇಶ್ ಯಾದವ್ ಅವರು ಭಾರತೀಯ ಜನತಾ ಪಕ್ಷ ಸಮಾಜವಾದಿ ಪಕ್ಷ ಪ್ರಮುಖ ಸ್ಪರ್ಧಿ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಫೆಬ್ರುವರಿ 10ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ಬಗ್ಗೆ ಯಾದವ್ ಭರವಸೆ ಹೊಂದಿರುವುದಾಗಿ ವ್ಯಂಗ್ಯವಾಡಿದರು.

Advertisement

ರಾಜ್ಯದಲ್ಲಿ ಈ ಹಿಂದೆ ಗೂಂಡಾಗಳು, ಕ್ರಿಮಿನಲ್ಸ್ ಗಳಿಂದಾಗಿ ಪೊಲೀಸರು ಕೂಡಾ ಭಯಪಡುತ್ತಿದ್ದರು. ಮಹಿಳೆಯರು ಮತ್ತು ಯುವತಿಯರು ಮನೆಯಿಂದ ಹೊರಹೋಗಲು ಆತಂಕಪಡುತ್ತಿದ್ದರು. ಆದರೆ ಇಂದು ಉತ್ತರಪ್ರದೇಶದಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ ಉತ್ತರಪ್ರದೇಶದಲ್ಲಿ ಗೂಂಡಾಗಳು, ಕ್ರಿಮಿನಲ್ಸ್ ಗಳೇ ಹೆದರುತ್ತಿದ್ದು, ತಾವೇ ಸ್ವಯಂ ಆಗಿ ಪೊಲೀಸರಿಗೆ ಶರಣಾಗುತ್ತಿದ್ದಾರೆ ಎಂದು ಶಾ ಹೇಳಿದರು.

ಉತ್ತರಪ್ರದೇಶದಲ್ಲಿ ಕ್ರಿಮಿನಲ್ಸ್ ಮತ್ತು ಗೂಂಡಾಗಳನ್ನು ಜೈಲಿಗೆ ತಳ್ಳಿದ್ದೇವೆ. ನಾವು ಉತ್ತರಪ್ರದೇಶವನ್ನು ವಂಶಾಡಳಿತ ಮತ್ತು ಜಾತಿವಾದದಿಂದ ಹೊರತಂದು, ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next