Advertisement
ಅಪರಾಹ್ನ 12 ಗಂಟೆಯಿಂದಲೇ ಎಚ್‌ಎಎಲ್‌ನಿಂದ ಸಚಿವರು ಸಂಚರಿಸಿದ ಎಲ್ಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಅಪರಾಹ್ನ 12.15ರ ಸುಮಾ ರಿಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮುಗಿಸಿದ ಅಮಿತ್ ಶಾ, ಬಳಿಕ ಜಯನಗರ ತೆರಳಿದರು. ಅನಂತರ ಕತ್ರಿಗುಪ್ಪೆಯ ವಿದ್ಯಾಪೀಠಗೆ ಭೇಟಿ ನೀಡಿ ದರು. ಈ ಎಲ್ಲ ಮಾರ್ಗಗಳಲ್ಲಿ ನಿರೀಕ್ಷೆಗೂ ಮೀರಿದ ಸಂಚಾರ ದಟ್ಟಣೆಯನ್ನು ಪ್ರಯಾಣಿಕರು ಎದುರಿಸಬೇಕಾಯಿತು.
Related Articles
Advertisement
ಕ್ರಿಕೆಟ್ ಪಂದ್ಯ ಸಂಚಾರ ನಿರ್ಬಂಧ: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧನೆ ಮಾಡಲಾಗಿದೆ. ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ ಹಾಗೂ ಕ್ವೀನ್ಸ್‌ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30ರ ವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಆಟೋ ಸಂಚಾರ ನಿಷೇಧ: ಕ್ವೀನ್ಸ್ ರಸ್ತೆಯ ಟ್ರಾಫಿಕ್ ಹೆಡ್‌ಕಾರ್ಟರ್ ಜಂಕ್ಷನ್‌ನಿಂದ ಕ್ವೀನ್ಸ್ ವೃತ್ತದವರೆಗೆ (ರಸ್ತೆಯ ಎರಡೂ ಬದಿ), ಬಿ.ಆರ್.ವಿ. ಜಂಕ್ಷನ್‌ನಿಂದ ಸಿಟಿಒ ವೃತ್ತದ ವರೆಗೆ (ರಸ್ತೆಯ ಎರಡೂ ಬದಿ), ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಮ.12 ರಿಂದ ರಾತ್ರಿ 11.30ರ ವರೆಗೆ ಆಟೋ ರಿಕ್ಷಾ ಸಂಚಾರ ನಿಷೇಧಿಸಲಾಗಿದೆ.
ವಾಹನ ನಿಲುಗಡೆ: ಮಲ್ಯ ಆಸ್ಪತ್ರೆ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೆಂಟ್ ಜೋಸೆಫ್ ಬಾಲಕರ ಶಾಲೆ ಮ್ಯೂಸಿಯಂ ರಸ್ತೆ, ಶಿವಾಜಿನಗರ ಬಸ್ ನಿಲ್ದಾ ಣದ 1ನೇ ಮಹಡಿಯಲ್ಲಿ ಪಂದ್ಯ ವೀಕ್ಷಣೆಗೆ ಬರುವ ಸಾರ್ವ ಜನಿಕರು ವಾಹನ ನಿಲುಗಡೆ ಮಾಡಬಹುದು. ಎಂ.ಜಿ. ರಸ್ತೆಯಲ್ಲಿರುವ ಫ್ರೀಪೇಯ್ಡ ಆಟೋ ನಿಲ್ದಾಣ ಬಳಸಲು ಮನವಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.