ಪಟಿಯಾಲ: ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾದ ಅಮಿತ್ ಪಂಘಲ್ ಮತ್ತು ಶಿವ ಥಾಪ ಅವರು ಮುಂಬರುವ ಕಾಮನ್ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಲ್ಲಿನ ನೇತಾಜಿ ಸುಭಾಸ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸೋರ್ಟ್ಸ್ ಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಗೆಲ್ಲುವ ಮೂಲಕ ಅವರು ಗೇಮ್ಸ್‌ಗೆ ಆಯ್ಕೆಯಾದರು.
2019ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ 51 ಕೆಜಿ ವಿಭಾಗದಲ್ಲಿ, ಶಿವ ಥಾಪ 63.5 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಭಾರತದ ಇತರ ಬಾಕ್ಸರ್‌ಗಳೆಂದರೆ 2018ರ ಕಂಚಿನ ಪದಕ ವಿಜೇತ ಮೊಹಮ್ಮದ್ ಹುಸಮುದ್ದೀನ್, ರೋಹಿತ್ ತೋಕಸ್, ಸುಮಿತ್, ಆಶಿಷ್ ಕುಮಾರ್, ಸಂಜೀತ್ ಮತ್ತು ಸಾಗರ್.
ಅಮಿತ್ ಪಂಘಲ್ ಸರ್ವೀಸಸ್ ಬಾಕ್ಸರ್ ದೀಪಕ್ ಅವರನ್ನು 4-1 ಅಂತರದಿಂದ ಮಣಿಸಿದರು. ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲೇ ಎಡವಿದ ಪಂಘಲ್, ಗೋಲ್ಡ್‌ಗೇಮ್ಸ್ ಕಾಮನ್ವೆಲ್ತ್
ಗೇಮ್ಸ್‌ಗೂ ಮಿಗಿಲಾದ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಅಲ್ಲಿ ಅವರಿಗೆ ಬೆಳ್ಳಿ ಲಭಿಸಿತ್ತು. ಏಷ್ಯನ್ ಚಾಂಪಿಯನ್ ಕಿರೀಟ ಏರಿಸಿಕೊಂಡಿರುವ ಪಂಘಲ್, 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕವನ್ನು ತಮ್ಮದಾಗಿಸಿ ಕೊಂಡಿದ್ದರು. 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಶಿವ ಥಾಪ. ಆಯ್ಕೆ ಟ್ರಯಲ್ಸ್‌ನಲ್ಲಿ ಮನೀಷ್ ಕೌಶಿಕ್ ವಿರುದ್ಧ 5-0 ಜಯ ಸಾಧಿಸಿದರು.
ಭಾರತ ಬಾಕ್ಸಿಂಗ್ ತಂಡ :
ಅಮಿತ್ ಪಂಘಲ್ (51 ಕೆಜಿ), ಮೊಹಮ್ಮದ್ ಹುಸಮುದ್ದೀನ್ (57 ಕೆಜಿ), ಶಿವ ಥಾಪ (63.5 ಕೆಜಿ), ರೋಹಿತ್ ತೋಕಸ್ (67 ಕೆಜಿ), ಸುಮಿತ್ (75 ಕೆಜಿ), ಆಶಿಷ್ ಕುಮಾರ್ (80 ಕೆಜಿ), ಸಂಜೀತ್ (92 ಕೆಜಿ) ಮತ್ತು ಸಾಗರ್ (+92 ಕೆಜಿ).