Advertisement

ಅರ್ಜುನ ಪ್ರಶಸ್ತಿ: ಅಮಿತ್‌, ಗೌರವ್‌ ಹೆಸರು ಶಿಫಾರಸು

10:34 AM May 01, 2019 | Team Udayavani |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಮತ್ತು ಚಾಂಪಿಯನ್‌ಶಿಪ್‌ ಚಿನ್ನದ ಪದಕ ವಿಚೇತ ಅಮಿತ್‌ ಪಂಗಾಲ್‌ ಮತ್ತು 2017ರ ವಿಶ್ವ ಕಂಚಿನ ಪದಕ ವಿಜೇತ ಗೌರವ್‌ ಬಿಧುರಿ ಅವರ ಹೆಸರನ್ನು ಭಾರತೀಯ ಬಾಕ್ಸಿಂಗ್‌ ಫೆಡರೇಶನ್‌ (ಬಿಎಫ್ಐ) ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

Advertisement

ಏಶ್ಯನ್‌ ಗೇಮ್ಸ್‌ನ ಫೈನಲ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಹಸನಾºಯ್‌ ಡುಸ್ಮಾಟೋವ್‌ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದ ಅಮಿತ್‌ ಅವರನ್ನು ಕಳೆದ ಬಾರಿ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಆದರೆ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲಾಗಿರಲಿಲ್ಲ.

ಉಳಿದಂತೆ ವನಿತಾ ಬಾಕ್ಸಿಂಗ್‌ನ ಸಹಾಯಕ ಕೋಚ್‌ ಮತ್ತು ಮಾಜಿ ಪ್ರಧಾನ ಕೋಚ್‌ ಶಿವ್‌ ಸಿಂಗ್‌ ಅವರನ್ನು ದ್ರೋಣಾ ಚಾರ್ಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next