Advertisement
ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನೈರುತ್ಯ ಚೀನ ಭಾಗದಲ್ಲಿ ಶತ್ರುಗಳ ಯುದ್ಧ ವಿಮಾನಗಳನ್ನು, ಟ್ಯಾಂಕ್‌ಗಳನ್ನು ಹೊಡೆದುರು ಳಿಸುವ ಕಾರ್ಯಾಚರಣೆ ಹೇಗಿರಬೇಕು ಎನ್ನು ವುದರ ಅಭ್ಯಾಸ ನಡೆಸಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ. ಸಮರಾಭ್ಯಾಸದಲ್ಲಿ ಆರ್ಮಿಯ ಬಹುತೇಕ ವಿಭಾಗಗಳೆಲ್ಲವೂ ಪಾಲ್ಗೊಂಡಿದ್ದವು ಎಂದು ಚೀನ ಅಧಿಕೃತ ಮಾಧ್ಯಮ ಗ್ಲೋಬಲ್ ಟೈಮ್ಸ್ ಕೂಡ ವರದಿ ಮಾಡಿದೆ.
ಸಿಂಗ್‌ಗೆ ಮಮತಾ ಪತ್ರ
ಭಾರತ ಹಾಗೂ ಚೀನ ನಡುವಿನ ಬಿಕ್ಕಟ್ಟು ಈಗ ಗಡಿಗೆ ಹತ್ತಿರದ ರಾಜ್ಯಗಳಲ್ಲಿ ಆತಂಕ ಮೂಡಿಸಿದೆ. ಜಮ್ಮು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಬಳಿಕ ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ವಸ್ತುಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದು, ರಾಜ್ಯದಲ್ಲಿ ಚೀನ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಈ ಕುರಿತು ಪತ್ರ ಬರೆದಿರುವ ಮಮತಾ, ರಾಜ್ಯದಲ್ಲೂ ಚೀನ ಮೂಗು ತೂರಿಸಲು ಯತ್ನಿಸಿದೆ. ಕೇಂದ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.