Advertisement

ಉಕ್ರೇನ್‌ನಿಂದ ಬರಲಿದೆ ವಂದೇ ಭಾರತ್‌ ರೈಲಿನ ಚಕ್ರಗಳು

10:33 PM May 09, 2022 | Team Udayavani |

ಕೀವ್‌/ನವದೆಹಲಿ: ರಷ್ಯಾದಿಂದ ಸತತ ದಾಳಿ ಎದುರಿಸುತ್ತಿರುವ ಉಕ್ರೇನ್‌ನಿಂದ ಭಾರತದ ವಂದೇ ಭಾರತ್‌ ರೈಲಿನ ಗಾಲಿಗಳ ಮೊದಲ ಬ್ಯಾಚ್‌ ಮೇ 12ರಂದು ಚೆನ್ನೈಗೆ ಬಂದು ತಲುಪಲಿದೆ.

Advertisement

ಉಕ್ರೇನ್‌ನ ಸಂಸ್ಥೆಯಿಂದ 36,000 ಗಾಲಿಗಳ ಖರೀದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಆದರೆ ಯುದ್ಧದ ಹಿನ್ನೆಲೆ ಅಲ್ಲಿನ ಗಾಲಿ ತಯಾರಿ ಕಾರ್ಖಾನೆಯ ಕೆಲಸಗಾರರೆಲ್ಲರೂ ದೇಶಕ್ಕಾಗಿ ಹೋರಾಡುತ್ತಿದ್ದಾರೆ.

ಸದ್ಯ 128 ಗಾಲಿಗಳು ತಯಾರಾಗಿದ್ದು, ಅದನ್ನು ಭೂ ಮಾರ್ಗವಾಗಿ ರೊಮೇನಿಯಾಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಮೂರು ಪ್ರತ್ಯೇಕ ಬ್ಯಾಚ್‌ಗಳಲ್ಲಿ ಅವುಗಳನ್ನು ಭಾರತಕ್ಕೆ ವಾಯುಮಾರ್ಗದಲ್ಲಿ ತರಲಾಗುವುದು. ಮೊದಲ ಬ್ಯಾಚ್‌ನಲ್ಲಿ 40 ಗಾಲಿಗಳು ಬರಲಿವೆ. ಅದನ್ನು ಬಳಕೆ ಮಾಡಲಿರುವ ವಂದೇ ಭಾರತ್‌ ರೈಲು ಇದೇ ಜುಲೈನಲ್ಲಿ ಹಳಿಗಿಳಿಯಲಿದೆ. ಉಕ್ರೇನ್‌ ಜತೆ ಅಮೆರಿಕ, ಜೆಕ್‌ ಗಣರಾಜ್ಯ ಮತ್ತು ಪೋಲೆಂಡ್‌ನಿಂದಲೂ ಗಾಲಿಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ : ಕರ್ನಾಟಕ-ಗೋವಾ ರೈಲ್ವೆ ಹಳಿ ಡಬ್ಲಿಂಗ್‌ ಅನುಮತಿ ರದ್ದು ಪಡಿಸಿದ ಸುಪ್ರೀಂಕೋರ್ಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next