Advertisement

ತಮಿಳುನಾಡು:ಭಾರೀ ಪ್ರತಿಭಟನೆಯ ನಡುವೆಯೂ ರಾಮ ರಾಜ್ಯ ರಥ ಯಾತ್ರೆ 

10:55 AM Mar 21, 2018 | Team Udayavani |

ಚೆನ್ನೈ: ಭಾರಿ ಪ್ರತಿಭಟನೆಯ ನಡುವೆಯೂ ವಿಶ್ವಹಿಂದು ಪರಿಷದ್‌ನ ‘ರಾಮ ರಾಜ್ಯ ರಥ ಯಾತ್ರೆ’ ತಮಿಳುನಾಡಿನಲ್ಲಿ ಸಾಗುತ್ತಿದ್ದು ಬುಧವಾರ ಮಧುರೈ ತಲುಪಿದೆ. 

Advertisement

ಮಂಗಳವಾರ ತಿರುನಲ್‌ವೇಲಿಯಲ್ಲಿ ಪ್ರತಿಭಟನೆಗೆ ಮುಂದಾಗದ ಹಲವು ಸಂಘಟನೆಗಳು ಮತ್ತು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. 

ರಥ ಯಾತ್ರೆಗೆ ಅವಕಾಶ ನೀಡಿದುಕ್ಕಾಗಿ ವಿಪಕ್ಷ ಡಿಎಂಕೆ ಆಡಳಿತೂರೂಢ ಎಐಡಿಎಂಕೆ ವಿರುದ್ಧ ಕಿಡಿ ಕಾರಿದೆ. ವಿಪಕ್ಷ ನಾಯಕ ಸ್ಟಾಲಿನ್‌ ‘ಯಾತ್ರೆಯಿಂದ ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಲಿದೆ, ಕಾನೂನು ಮತ್ತು ಸುವ್ಯವಸ್ಥೆ ಹಾಳಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಐಎಡಿಎಂಕೆ ಸರ್ಕಾರ ಇದೆಯೋ ಬಿಜೆಪಿ ಸರ್ಕಾರ ಇದೆಯೊ ತಿಳಿಯುತ್ತಿಲ್ಲ’ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಫೆಬ್ರವರಿಯಲ್ಲಿ ಅಯೋಧ್ಯೆಯಿಂದ ಹೊರಟಿರುವ 39 ದಿನಗಳ ರಾಮ ರಾಜ್ಯ ರಥ ಯಾತ್ರೆ ಮಾರ್ಚ್‌ 25ರಂದು ರಾಮೇಶ್ವರದಲ್ಲಿ ಸಮಾಪ್ತಿಯಾಗಲಿದೆ. ಯಾತ್ರೆ ತೆರಳುವ ಮಾರ್ಗದುದ್ದಕ್ಕೂ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next