Advertisement
ಆಗಿದ್ದೇನು?ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾ. 27ರಂದು ಆಫ್ರಿಕಾ ಸರಕಾರ ವಿಧಿಸಿದ 3 ವಾರಗಳ ಲಾಕ್‌ಡೌನ್‌ನಿಂದಾಗಿ ಎನ್‌ಕ್ಯೂಬ್ ಅವರಿಗೆ ತಮ್ಮ ಕಾಯಕ ಮಾಡಲು ಸಾಧ್ಯವಾಗುತ್ತಿಲ್ಲ. ತನ್ನ 20 ವರ್ಷಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಬೀದಿಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಎನ್‌ಕ್ಯೂಬ್‌ನಂತಹ ಕಾರ್ಮಿಕರಿಗೆ ವೇತನ ಇಲ್ಲ. ಬದಲಾಗಿ ಅವರು ಸಂಗ್ರಹಿಸುವ ಕಸದ ಮೊತ್ತಕ್ಕೆ ಸಂಬಳ ಪಡೆಯುತ್ತಾರೆ, ಸಾಮಾನ್ಯವಾಗಿ ದಿನಕ್ಕೆ ಸುಮಾರು 70 ದಕ್ಷಿಣ ಆಫ್ರಿಕಾದ ರಾಂಡ್ ( 3.85 ಡಾಲರ್) ಪಡೆಯುತ್ತಾರೆ.
Related Articles
ಕೌನ್ಸಿಲ್ ಫಾರ್‌ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನ 2016 ರ ವರದಿ ಪ್ರಕಾರ, ದಕ್ಷಿಣ ಆಫ್ರಿಕಾದ ಶೇ. 80ರಿಂದ 90 ರಷ್ಟು ಪ್ಯಾಕೇಜಿಂಗ್ ಮತ್ತು ಕಾಗದವನ್ನು ಮರುಬಳಸಲಾಗುತ್ತದೆ. ಈ ಅನೌಪಚಾರಿಕ ವಲಯವು ವಾರ್ಷಿಕವಾಗಿ 750 ಮಿಲಿಯನ್ ರಾಂಡ್ (2 ಮಿಲಿಯನ್ ಡಾಲರ್) ವರೆಗೆ ವಿವಿಧ ಮೂಲಗಳಿಂದ ಉಳಿಸುತ್ತದೆ.
Advertisement
ಬೆಜೆಕೆಲಾ ಎಂದರೇನು ಗೊತ್ತಾ?ದಕ್ಷಿಣ ಆಫ್ರಿಕಾದಲ್ಲಿ 60 ರಿಂದ 90 ಸಾವಿರ ಮಂದಿ ತ್ಯಾಜ್ಯ ಸಂಗ್ರಹಕಾರರಿದ್ದಾರೆ. ಜೋಹಾನ್ಸ್ ಬರ್ಗ್ ನಲ್ಲಿನ ಸುಮಾರು 250 ತ್ಯಾಜ್ಯ ತೆಗೆಯುವವರಲ್ಲಿ ಎನ್‌ಕ್ಯೂಬ್ ಒಬ್ಬರು. ಈ ಸಮುದಾಯವನ್ನು ಬೆಕೆಜೆಲಾ ಎನ್ನಲಾಗುತ್ತದೆ. ದಕ್ಷಿಣ ಆಫ್ರಿಕಾದ 11 ಅಧಿಕೃತ ಭಾಷೆಗಳಲ್ಲಿ ಒಂದಾದ “ಇಸಿಝುಲು’ವಿನಲ್ಲಿ ಬೆಕೆಜೆಲಾ ಎಂದರೆ “ಸಹಿಸಿಕೊಳ್ಳುವುದು’ ಅಥವಾ “ಸತತವಾಗಿ ಪ್ರಯತ್ನಿಸುವುದು” ಎಂದರ್ಥ. ಬಡತನ ಇದೆ
ವಿಶ್ವಬ್ಯಾಂಕ್ ಪ್ರಕಾರ, 1994ರಲ್ಲಿ ವರ್ಣಭೇದ ನೀತಿಯ ಬಳಿಕ ದಕ್ಷಿಣ ಆಫ್ರಿಕಾ ವಿಶ್ವದ ಅತ್ಯಂತ ಅಸಮಾನತೆಯ ದೇಶ. ದೇಶದ ಅರ್ಧದಷ್ಟು ಜನಸಂಖ್ಯೆ ಇನ್ನೂ ಬಡತನ ರೇಖೆಗಿಂತ ಕೆಳಗಿದೆ. ಅಂದರೆ ದೇಶದ ಬಹುಪಾಲು ಸಂಪತ್ತು ಇನ್ನೂ ಕೆಲವೇ ಗಣ್ಯರ ಕೈಯಲ್ಲಿದೆ. ಇದೀಗ ಇವರ ಬೆಂಬಲಕ್ಕೆ ಜೋಹಾನ್ಸ್ ಬರ್ಗ್‌ನ ವಿಟ್ಸ್ ವಿ ವಿ ಉಪನ್ಯಾಸಕರು ನಿಂತಿದ್ದಾರೆ. ಹಸಿವಿನಿಂದ ಬಳಲಿದರೆ ಕೋವಿಡ್ ಸೋಂಕು ಸುಲಭವಾಗಿ ಕಾಣಿಸಿಕೊಳ್ಳುವ ಅಪಾಯ ಇದೆ. ಹಸಿವು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇವರಲ್ಲಿ ದೇಹಕ್ಕೆ ಬಡತನ ಇದೆ. ಆದರೆ ಇಚ್ಛಾಶಕ್ತಿಗಲ್ಲ. ತಮ್ಮ ಹಸಿವನ್ನು ದೂರ ಮಾಡಲು ಅವರಿಗೆ ಕೆಲಸ ಬೇಕು. ಆದರೆ ಕಾನೂನಿಂದ ಅವರನ್ನು ರಕ್ಷಿಸಲು ಅವರಿಗೆ ಅಗತ್ಯ ಸೇವೆಗಳ ಸಾಲಿಗೆ ಇದನ್ನೂ ಸೇರಿಸಬೇಕು. ಪುರಸಭೆಗಳು ಇವರಿಗೆ ಮಾಸ್ಕ್ ಮತ್ತು ಕೈಗವಸುಗಳನ್ನು ಒದಗಿಸಬೇಕು ಮತ್ತು ಅವರ ಸಮುದಾಯಗಳಿಗೆ ಸ್ಯಾನಿಟೈಸರ್ ಮತ್ತು ಕೈ ತೊಳೆಯುವ ವ್ಯವಸ್ಥೆಗಳನ್ನು ಮಾಡಬೇಕು ಎಂಬ ಕೂಗು ದಟ್ಟವಾಗಿದೆ. – ಕಾರ್ತಿಕ್ ಅಮೈ