ನವದೆಹಲಿ: ಭಾರತದೊಂದಿಗೆ ಗಡಿ ವಿಚಾರದಲ್ಲಿ ಆಗಾಗ ತಗಾದೆ ತೆಗೆಯುವ ಚೀನ ಜೂನ್ ಕೊನೆಯ ವಾರದಲ್ಲೂ ಅಂತದ್ದೊಂದು ಕೆಲಸ ಮಾಡಿತ್ತು. ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಚೀನಾದ ಯುದ್ಧ ವಿಮಾನ ಹಾರಾಟ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಯೋಧರು ಮತ್ತು ಅಲ್ಲಿ ಅಳವಡಿಸಲಾಗಿರುವ ರಡಾರ್‌ಗಳು ಇದನ್ನು ಗುರುತಿಸಿದ್ದು, ಎಚ್ಚೆತ್ತುಕೊಂಡಿದ್ದರು ಎಂದು ತಿಳಿಸಲಾಗಿದೆ.
ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಚೀನದ ವಿದೇಶಾಂಗ ಸಚಿವ ವಂಗ್ ಯಿ ಅವರೊಂದಿಗೆ ಬಾಲಿಯಲ್ಲಿ ಮಾತುಕತೆ ನಡೆಸಿದ್ದಾರೆ.
ವಾಸ್ತವ ನಿಯಂತ್ರಣ ರೇಖೆ, ಜಾಗತಿಕ ಬೆಳವಣಿಗೆ ಸೇರಿ ಅನೇಕ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಚೀನ ಹೊಸದೊಂದು ಕಾನೂನು ಮಾಡಿದ್ದು, ಯಾವುದೇ ಕಂಪನಿ ಯಾವುದೇ ದತ್ತಾಂಶವನ್ನು ವಿದೇಶಕ್ಕೆ ವರ್ಗಾಯಿಸಬೇಕೆಂದರೆ, ಅಧಿಕಾರಿಗಳಿಂದ ಅನುಮತಿ ಪಡೆದಿರಬೇಕೆಂದು ಆದೇಶಿಸಿದೆ.
ದಲೈಲಾಮ ಲೇಹ್ ಭೇಟಿ:
ಬುದ್ಧ ಧರ್ಮ ಗುರು ದಲೈಲಾಮ ಅವರು ಜು.15ರಂದು ಲೇಹ್‌ಗೆ ತೆರಳಲಿದ್ದು, ಅಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಲೇಹ್‌ಗೆ ಅವರು ಆಗಮಿಸಿರಲಿಲ್ಲ.