Advertisement

ಅಮೇಥಿ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ ಕೊಲೆ ಪ್ರಕರಣ : ಐದನೇ ಶಂಕಿತ ಅರೆಸ್ಟ್‌

10:48 AM Jun 01, 2019 | Sathish malya |

ಹೊಸದಿಲ್ಲಿ : ಅಮೇಥಿ ಬಿಜೆಪಿ ಸಂಸದೆ ಸ್ಮ್ರತಿ ಇರಾನಿ ಅವರ ನಿಕಟವರ್ತಿ ಸುರೇಂದ್ರ ಸಿಂಗ್‌ ಕೊಲೆ ಕೇಸಿನ ಐದನೇ ಶಂಕಿತ ಆರೋಪಿ ವಸೀಮ್‌ ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ವಸೀಮ್‌ ನನ್ನು ಬಂಧಿಸಲು ಪೊಲೀಸರು ಎನ್‌ಕೌಂಟರ್‌ ನಡೆಸಬೇಕಾಯಿತು. ಈ ಕೊಲೆ ಪ್ರಕರಣದ ಇತರ ನಾಲ್ಕು ಶಂಕಿತರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಕೊಲೆಗೀಡಾದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್‌ ಅವರ ಅಂತ್ಯಕ್ರಿಯಯಲ್ಲಿ ಭಾಗವಹಿಸಿ ಆತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದ ಇರಾನಿ ಅವರ ಫೋಟೋ ವೈರಲ್‌ ಆಗಿತ್ತು.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿದ್ದ ಇರಾನಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪರಾಭವಗೊಳಿಸಿ ಪಕ್ಷಕ್ಕೆ ದೊಡ್ಡ ಗೆಲುವನ್ನು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next