Advertisement

ಅಮೆರಿಕ ವೀಸಾ ನೀತಿ: ಸಂಗಾತಿ ಕೆಲಸಕ್ಕೆ ಕೊಕ್‌

03:45 AM Mar 09, 2017 | Team Udayavani |

ವಾಷಿಂಗ್ಟನ್‌: ಹೊಸ ವಲಸೆ ನೀತಿಗೆ ಸಹಿ ಹಾಕಿದ ಬೆನ್ನಲ್ಲೇ ಇದೀಗ ಅಮೆರಿಕದ ಟ್ರಂಪ್‌ ಆಡಳಿತದ ಕಣ್ಣು ವಲಸೆ ಕಾರ್ಮಿಕರು ಹಾಗೂ ವಿದೇಶಿ ನೌಕರರ ಮೇಲೆ ಬಿದ್ದಿದೆ. ಅಕ್ರಮವಾಗಿ ಇಲ್ಲಿ ನೆಲೆಸಿದವರು ಮಾತ್ರವಲ್ಲ, ಕೆಲಸ ಮಾಡಲು ಕಾನೂನಾತ್ಮಕವಾಗಿ ಅನುಮತಿ ಪಡೆದವರ ಮೇಲೂ ಇದರ ಬಿಸಿ ತಟ್ಟಲಿದೆ.

Advertisement

ಪರಿಣಾಮ, ಎಚ್‌-1ಬಿ ವೀಸಾ ಹೊಂದಿರುವವರ ಪತಿ/ಪತ್ನಿ (ಎಚ್‌4-ಇಎಡಿ ಹೊಂದಿರುವವರು) ಅಮೆರಿಕದಲ್ಲಿ ಕೆಲಸ ಮಾಡುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಸಾವಿರಾರು ಮಂದಿ ಭಾರತೀಯರು ಇರುವ ಕಾರಣ, ಮತ್ತೆ ಅವರಲ್ಲಿ ಅಭದ್ರತಾ ಭಾವ ಕಾಡತೊಡಗಿದೆ.

ಎಚ್‌-1ಬಿ ವೀಸಾ ಹೊಂದಿರುವ ವ್ಯಕ್ತಿಗಳು ಕಾನೂನಾತ್ಮಕ ಗ್ರೀನ್‌ ಕಾರ್ಡ್‌ ಪಡೆಯುವ ಪ್ರಕ್ರಿಯೆಯಲ್ಲಿದ್ದರೆ ಅಂಥವರ ಪತಿ/ಪತ್ನಿಗೆ ಅಮೆರಿಕದಲ್ಲಿ ಕಾರ್ಯನಿರ್ವಹಿಸಲು ಹಿಂದಿನ ಒಬಾಮ ಆಡಳಿತ ಅವಕಾಶ ಕಲ್ಪಿಸಿತ್ತು. ಅದಕ್ಕೂ ಮೊದಲು ವೀಸಾದಾರರನ್ನು ಅವಲಂಬಿಸಿ ದವರಿಗೆ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶವಿರಲಿಲ್ಲ. ಹಲವು ಹೋರಾಟಗಳ ಬಳಿಕ 2015ರ ಫೆಬ್ರವರಿಯಲ್ಲಿ ಅವರು ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ನಂತರ, ಇದನ್ನು ಪ್ರಶ್ನಿಸಿ
“ಸೇವ್‌ ಜಾಬ್ಸ್ ಯುಎಸ್‌ಎ’ ಎಂಬ ಗುಂಪು ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಜಿಲ್ಲಾ ನ್ಯಾಯಾಲಯ ಈ ಅರ್ಜಿಯನ್ನು ತಳ್ಳಿಹಾಕಿತ್ತು.

ಕಾಲಾವಕಾಶ ಕೋರಿದ ಸರ್ಕಾರ: ಈಗ ಟ್ರಂಪ್‌ ಅವರು ಅಧಿಕಾರ ಸ್ವೀಕರಿಸಿದ ಬೆನ್ನಿಗೇ, ಇದೇ ಗುಂಪು ಮತ್ತೆ ಮೇಲ್ಮನವಿ ಸಲ್ಲಿಸಿದೆ. ಇದಕ್ಕೆ ಟ್ರಂಪ್‌ ಆಡಳಿತವೂ ಸಂಪೂರ್ಣ ಬೆಂಬಲ ನೀಡಿದೆ. ಜತೆಗೆ, ಈ ಕುರಿತು ಪ್ರತಿಕ್ರಿಯಿಸಲು 60 ದಿನಗಳ ಕಾಲಾವಕಾಶ ನೀಡುವಂತೆ ಅಮೆರಿಕದ ಮೇಲ್ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಒಂದು ವೇಳೆ ನ್ಯಾಯಾಲಯವು ಒಬಾಮ ಆಡಳಿತ ನಿರ್ಧಾರವನ್ನು ವಜಾ ಮಾಡಿದರೆ, ಸಾವಿರಾರು ಭಾರತೀಯರು ತೀವ್ರ ಸಂಕಷ್ಟಕ್ಕೆ
ಸಿಲುಕಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next