Advertisement

ವಿಶ್ವಕ್ಕೆ ಒಳ್ಳೆಯದನ್ನು ಬಯಸುವ ಪುಣ್ಯಭೂಮಿ ನಮ್ಮ ಭಾರತ: ಮೋದಿ

11:56 AM Sep 11, 2017 | Sharanya Alva |

ನವದೆಹಲಿ: 2001ರ ಮೊದಲು 1893ರ ಸೆಪ್ಟೆಂಬರ್ 11ರ ಮಹತ್ವ ವಿಶ್ವಕ್ಕೆ(ಅಮೆರಿಕ) ಗೊತ್ತಿರಲಿಲ್ಲವಾಗಿತ್ತು. 2001ರ ಸೆಪ್ಟೆಂಬರ್ 11ರ ಬಳಿಕ ವಿವೇಕಾನಂದರ ಭಾಷಣ ವಿಶ್ವವೇ ನೆನಪಿಸಿಕೊಳ್ಳುವಂತಾಯಿತು. ಅದು ಕೇವಲ ಐತಿಹಾಸಿಕ ದಿನವಾಗಿರಲಿಲ್ಲ, ಬದಲಿಗೆ  ವಿಶ್ವವಿಜೇತ ದಿನವಾಗಿತ್ತು. ವಿಶ್ವಕ್ಕೆ ಒಳ್ಳೆಯದನ್ನು ಬಯಸುವ ಪುಣ್ಯಭೂಮಿ ನಮ್ಮ ಭಾರತ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

Advertisement

ಅಮೆರಿಕದ ಚಿಕಾಗೋ ವಿಶ್ವಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣದ 125ನೇ ವರ್ಷದ ಸ್ಮರಣಾರ್ಥ ಸೋಮವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಯಂಗ್ ಇಂಡಿಯಾ, ನ್ಯೂ ಇಂಡಿಯಾ ಕಾರ್ಯಕ್ರಮದಡಿ ವಿವಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

1983ರ ಸೆಪ್ಟೆಂಬರ್ 11ರ ದಿನಾಂಕವನ್ನು ಅಮೆರಿಕದವರು ಮರೆತುಬಿಟ್ಟಿದ್ದರು, 2001ರ ಸೆಪ್ಟೆಂಬರ್ 11ರಂದು ದಾಳಿ ನಡೆದ ಬಳಿಕ ಅದರ ಮಹತ್ವ ಜಗತ್ತಿಗೆ ತಿಳಿಯುವಂತಾಯಿತು. ಚಿಕಾಗೋ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು ಸಹಿಷ್ಣುತೆ, ಶ್ರದ್ಧೆ, ಸಮಾನತೆ ಬಗ್ಗೆ ಮಾತನಾಡಿದ್ದರು.

ಇಂದು ಇಡೀ ವಿಶ್ವವೇ 9/11ರಂದು ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ ಬಗ್ಗೆ ಚರ್ಚೆಯಾಗುತ್ತಿದೆ. ಜನಸೇವೆಯೇ ದೇವರ ಸೇವೆ ಎಂದು ವಿವೇಕಾನಂದರು ಹೇಳಿದ್ದರು. ಒಂದು ವೇಳೆ ಸ್ವಾಮಿ ವಿವೇಕಾನಂದರು ಇಂದು ಬದುಕಿರುತ್ತಿದ್ದರೆ ಗಂಗಾನದಿಯನ್ನು ಮಾಲಿನ್ಯಗೊಳಿಸುತ್ತಿರುವುದನ್ನು ತಪ್ಪಿಸುತ್ತಿದ್ದರು ಎಂದು ಮೋದಿ ವ್ಯಾಖ್ಯಾನಿಸಿದರು.

ವಿವೇಕಾನಂದರು ನಮ್ಮಲ್ಲಿರುವ ವಿಶ್ವಾಸವನ್ನು ಹೆಚ್ಚಿಸಿದರು. 9/11ರ ಭಾಷಣದ ನಂತರ ಭಾರತಕ್ಕೆ ವಿಶ್ವದಲ್ಲಿ ಹೊಸ ಗುರುತನ್ನು ಕೊಟ್ಟರು. ಪಾಶ್ಚಿಮಾತ್ಯರಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟರು. ನಾವು ಏನು ತಿನ್ನುತ್ತೇವೆ, ಏನನ್ನು ತಿನ್ನುವುದಿಲ್ಲ ಎಂಬುದು ಪರಂಪರೆಯಲ್ಲ, ಸ್ತ್ರೀಯರನ್ನು ಗೌರವದಿಂದ ಕಾಣಬೇಕೆಂದು ಅಪೇಕ್ಷಿಸಿದರು, ನಮ್ಮ ಹೆಣ್ಣುಮಕ್ಕಳು ಆತ್ಮಗೌರವದಿಂದ ಬದುಕೋದು ಮುಖ್ಯ ಎಂದು ಹೇಳಿದರು.

Advertisement

ಇಡೀ ವಿಶ್ವಕ್ಕೆ ಅದ್ಭುತ ಕೊಡುಗೆಯನ್ನು ಕೊಟ್ಟ ಬೆಂಗಾಲಿಯರಿಗೆ ನಾವು ಗೌರವ ಸೂಚಿಸಬೇಕಾಗಿದೆ. ಚಿಕಾಗೋ ಭಾಷಣದ ಮೂಲಕ ಹೊಸ ದಿಕ್ಕನ್ನು ರೂಪಿಸಿದ ಸ್ವಾಮೀ ವಿವೇಕಾನಂದ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟ್ಯಾಗೋರ್ ಅಭಿನಂದನೀಯರು ಎಂದು ಮೋದಿ ತಿಳಿಸಿದರು.

ಚಿಕಾಗೋ ಸರ್ವಧರ್ಮ ಭಾಷಣದಲ್ಲಿ ಮಿಸ್ಟರ್ ಅಂಡ್ ಮಿಸೆಸ್ ಎಂದು ಹೇಳುವ ಬದಲು ಸೋದರರೇ, ಸೋದರಿಯರೇ ಎಂದು ಹೇಳುವ ಮೂಲಕ ಇಡೀ ವಿಶ್ವದ ಗಮನದ ಸೆಳೆದ ಮಹಾನ್ ಶಕ್ತಿ ಸ್ವಾಮಿ ವಿವೇಕಾನಂದ. ಯುವ ಜನಾಂಗವೇ ನಮ್ಮ ದೇಶದ ಶಕ್ತಿ ಎಂದು ನಂಬಿದ್ದವರು ಅವರು, ಅವರು ಕಂಡ ಭವ್ಯ ಕನಸನ್ನು ಇಂದಿನ ಯುವಕರು ನನಸು ಮಾಡಬೇಕಾಗಿದೆ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next