Advertisement

ಚಿಲಿ ವಿರುದ್ಧ ಅಮೆರಿಕ ವಿಜಯೋತ್ಸವ

12:22 AM Jun 18, 2019 | Team Udayavani |

ಪ್ಯಾರಿಸ್‌: ವನಿತಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ರವಿವಾರ ರಾತ್ರಿಯ “ಎಫ್’ ವಿಭಾಗದ ಪಂದ್ಯದದಲ್ಲಿ ಅಮೆರಿಕ 3-0 ಗೋಲುಗಳಿಂದ ಚಿಲಿ ತಂಡವನ್ನು ಮಣಿಸಿದೆ.

Advertisement

ಇದು ಅಮೆರಿಕ ಸಾಧಿಸಿದ ಸತತ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಅದು ಥಾಯ್ಲೆಂಡ್‌ ಮೇಲೆ 13-0 ಗೋಲುಗಳಿಂದ ಸವಾರಿ ಮಾಡಿತ್ತು. ಈ ಸಾಧನೆಯಿಂದ ಅಮೆರಿಕ ಗುಂಪಿನ ಅಗ್ರಸ್ಥಾನ ಅಲಂಕರಿಸಿದೆ. ಸ್ವೀಡನ್‌ ಕೂಡ 2 ಜಯ ಸಾಧಿಸಿದ್ದು, ಇತ್ತಂಡಗಳು ಜೂ. 20ರಂದು ಮುಖಾಮುಖೀ ಆಗಲಿವೆ.

ಅಮೆರಿಕ ಪರ ಕಾರ್ಲಿ ಆ್ಯನ್‌ ಲಾಯ್ಡ 2 ಹಾಗೂ ಜೂಲಿ ಬೆನೆತ್‌ ಎಟ್ಜ್ì ಒಂದು ಗೋಲು ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next