Advertisement
ಅಧ್ಯಕ್ಷರ ಕಾರು ಯಾವುದೇ ಭೀಕರ ದಾಳಿಯಾದರೂ ಕಾರಿನ ಒಳಗಿದ್ದವರಿಗೆ ಯಾವುದೇ ಹಾನಿ ಮಾಡದಂತಹ ಸಾಧನಗಳನ್ನು ಹೊಂದಿದೆ. ಎಷ್ಟೇ ದೊಡ್ಡ ದಾಳಿಯಾದರೂ ತನ್ನ ದೇಶದ ನಾಯಕನಿಗೆ ಮಾತ್ರ ಇದರಿಂದ ತೊಂದರೆಯಾಗದು. ಅಮೆರಿಕದ ಅಧ್ಯಕ್ಷರ ಭದ್ರತೆಯ ಜವಾಬ್ದಾರಿ ಹೊತ್ತ “ಸೀಕ್ರೆಟ್ ಸರ್ವೀಸ್’ ಇದನ್ನು ನಿಭಾಯಿಸಲಿದೆ. ಈ ಸಂಸ್ಥೆ ಅಮೆರಿಕದ ಅಧ್ಯಕ್ಷರು ಮತ್ತು ಕುಟುಂಬ, ಮಾಜಿ ಅಧ್ಯಕ್ಷರು ಮತ್ತು ಕುಟುಂಬ, ವಿಪಕ್ಷದ ಪ್ರಮುಖರಿಗೆ ಭದ್ರತೆಯನ್ನು ನೀಡುತ್ತದೆ. ಜತೆಗೆ ಅಮೆರಿಕದ ಹಲವು ಕಟ್ಟಡಗಳ ಭದ್ರತೆಯ ಜವಾಬ್ದಾರಿಯನ್ನೂ ಈ ಸಂಸ್ಥೆ ಹೊತ್ತುಕೊಂಡಿದೆ.
ಟ್ರಂಪ್ ಪ್ರಯಾಣಿಸುವ ಕಾರು ವಿಶೇಷ ವಿನ್ಯಾಸ ಹೊಂದಿದ್ದು, ಐಷಾರಾಮಿ ಸೌಲಭ್ಯಗಳಿಂದ ಕೂಡಿದೆ. ಇದನ್ನು ಪ್ರತಿಷ್ಠಿತ ಕ್ಯಾಡಿಲಾಕ್ ಕಂಪನಿ ತಯಾರಿಸಿದ್ದು, ಶಸ್ತ್ರಸಜ್ಜಿತವಾಗಿದೆ. ಒಬಾಮ ಅಧ್ಯಕ್ಷರಾಗಿದ್ದ ಸಂದರ್ಭ ಕ್ಯಾಡಿಲಾಕ್ ವನ್ ಕಾರು ಬಳಸುತ್ತಿದ್ದರು. ಕಾರನ್ನು ಮಿಲಿಟರಿ ದರ್ಜೆಯ ಉಕ್ಕು, ಟೈಟಾನಿಯಂ, ಅಲ್ಯೂಮಿನಿಯಂ ಮತ್ತು ಪಿಂಗಾಣಿ ಸಾಮಗ್ರಿಗಳಿಂದ ಹೊರಭಾಗವನ್ನು ತಯಾರಿಸಲಾಗಿದೆ. ಇದು ಸುಮಾರು 4 ಇಂಚು ದಪ್ಪದ ಹೊದಿಕೆ ಹೊಂದಿದೆ. ಕಾರಿನ ಕಿಟಕಿ ಗಾಜು ಐದು ಪದರದ್ದಾಗಿದೆ. ಈ ಗಾಜಿಗೆ ಪಾಲಿಕಾರ್ಬೋನೆಟ್ ಬಳಕೆ ಮಾಡಲಾಗಿದ್ದು, ಗುಂಡು ನಿರೋಧಕವಾಗಿದೆ. ಇಂಧನ ಟ್ಯಾಂಕ್‌ಗೆ ಸ್ಫೋಟ ನಿಯಂತ್ರಣ ಹೊಂದಿರುವ ಫೋಮ್ ರಕ್ಷಣೆ ಇದೆ. ಬೋಯಿಂಗ್ 757 ಬಾಗಿಲ ಸಾಮರ್ಥ್ಯ
ನೇರಾ ನೇರವಾಗಿ ಇಂಧನ ಟ್ಯಾಂಕನ್ನು ಗುರಿ ಮಾಡಿ ದಾಳಿ ಮಾಡಲಾದರೂ ಯಾವುದೇ ಹಾನಿಯಾಗದು. ಇನ್ನು ಕಾರಿನ ಬಾಗಿಲು ಸದೃಢವಾಗಿದ್ದು, ಬೋಯಿಂಗ್ 757 ವಿಮಾನದ ಬಾಗಿಲಿನ ಗುಣಮಟ್ಟವನ್ನು ಇದು ಹೊಂದಿದೆ. ರಾಸಾಯನಿಕ ಅಸ್ತ್ರಗಳಿಂದ ರಕ್ಷಣೆ ಒದಗಿಸುತ್ತದೆ. ಟೈರ್ ಸ್ಫೋಟಗೊಂಡರೂ ಅಪಾಯದಿಂದ ಪಾರಾಗುವ ತಂತ್ರಜ್ಞಾನವನ್ನು ಕಾರು ಹೊಂದಿದೆ.ದಿ ಬೀಸ್ಟ್ ಕಾರಿಗೆ ಪಂಕ್ಚರ್ ನಿರೋಧಕ ಬಲಿಷ್ಠ ಟಯರ್‌ಗಳನ್ನು ಅಳವಡಿಸಲಾಗಿದೆ.
Related Articles
ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೋನೇಟ್ ಶೀಟ್‌ಗಳನ್ನು ಹೊಂದಿವೆ. ಆದರೆ ಅವುಗಳನ್ನು ಯಾವ ಕಾರಣಕ್ಕೂ ತೆರೆಯುವುದು ಸಾಧ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಚಾಲಕನ ಬಾಗಿಲಿನ ಕಿಟಕಿಯ ಗಾಜುಗಳನ್ನು ಮಾತ್ರ 3 ಇಂಚಿನಷ್ಟು ಮಾತ್ರ ಕೆಳಕ್ಕೆ ಇಳಿಸಬಹುದು.
Advertisement
ಮಿನಿ ಆರ್ಮಿಈ ಕಾರು ಯಾವುದೇ ಸೇನೆ ಕಮ್ಮಿ ಇಲ್ಲ. ಕಾರಿನ ಮುಂಭಾಗ ಶಾಟ್ ಗನ್‌ಗಳನ್ನು ಹೊಂದಿದೆ. ಅಶ್ರುವಾಯು ಅನಿಲದ ಸಿಲಿಂಡರ್, ಗ್ರೆನೇಡ್ ಲಾಂಚರ್, ಅಗ್ನಿ ಶಾಮಕ ವ್ಯವಸ್ಥೆ, ರಾತ್ರಿ ಹೊತ್ತಲ್ಲಿ ಕರ್ತವ್ಯ ನಿರ್ವಹಿಸಬಹುದಾದ ಹೈ ಕ್ಲಾರಿಟಿ ಮತ್ತು ರೆಸಲ್ಯೂಶನ್ ಹೊಂದಿರುವ ಕೆಮರ ಹೊಂದಿದೆ. ಟ್ರಂಪ್ ಅವರ ರಕ್ತದ ಗುಂಪಿನ ರಕ್ತದ ಚೀಲಗಳು ಇರಿಸಲಾಗಿರುತ್ತದೆ. ಕಾರಿನ ಚಾಲಕನ ಕ್ಯಾಬಿನ್ ಮತ್ತು ಹಿಂಬದಿಯ ಕ್ಯಾಬಿನ್ ಪ್ರತ್ಯೇಕವಾಗಿದೆ. ಚಾಲಕನ ಜತೆ ಸಂವಹನಕ್ಕೆ ಆಂತರಿಕ ವ್ಯವಸ್ಥೆ ಇರುತ್ತದೆ ಮತ್ತು ಕಾರಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ. ಅಧ್ಯಕ್ಷರ ಕಾರನ್ನು ಚಲಾಯಿಸುವವರಿಗೆ ವಿಶೇಷ ತರಬೇತಿಯನ್ನು ಅಮೆರಿಕ ಸೀಕ್ರೆಟ್ ಸರ್ವೀಸ್ (ಟ್ರಂಪ್ ಭದ್ರತೆಯ ಜವಾಬ್ದಾರಿ ಹೊತ್ತ ಸಂಸ್ಥೆ) ನೀಡಿರುತ್ತದೆ. ಗರಿಷ್ಠ ಸವಾಲನ್ನು ಎದುರಿಸುವ ಚಾಕಚಕ್ಯತೆ ಈ ಚಾಲಕನಿಗೆ ಇರುತ್ತದೆ. 180 ಡಿಗ್ರಿ ಆ್ಯಂಗಲ್‌ನಲ್ಲಿ ಕಾರು ತಿರುಗಿಸಬಹುದಾಗಿದ್ದು, ಅದರ ಮೇಲೆ ಚಾಲಕನಿಗೆ ಹಿಡಿತ ಇರುತ್ತದೆ. ಬಾಂಬ್ ನಿರೋಧಕ
ಈ ವಾಹನದಲ್ಲಿ ಪೊಲೀಸ್ ಸೈರನ್ ವ್ಯವಸ್ಥೆಯೂ ಇರಲಿದ್ದು, ಈ ವಾಹನದ ಹಿಂಬದಿಯ ಬಾಗಿಲು ಯಾವತ್ತೂ ತೆರದೇ ಇರುತ್ತದೆ. ಶಸ್ತ್ರ ಸಜ್ಜಿತ ಕಮಾಂಡೋಗಳು ಇಲ್ಲಿ ಕುಳಿತಿರುತ್ತಾರೆ. ಅಧ್ಯಕ್ಷರ ಕಾರಿಗೆ ಭಾರೀ ಬೆಂಗಾವಲು ಪಡೆ ಇರಲಿದೆ. ಶಸ್ತ್ರಾಸ್ತ್ರ, ಅಣ್ವಸ್ತ್ರ, ರಾಸಾಯನಿಕ, ಜೈವಿಕ ಬಾಂಬ್‌ಗಳನ್ನು ಗುರುತಿಸುವಂತಹ ಸೂಕ್ಷ್ಮ ಸೆನ್ಸರ್‌ಗಳನ್ನು ಬ್ಲ್ಯಾಕ್ ಟ್ರಕ್ ಹೊಂದಿರಲಿದೆ. ಅಪಾಯದ ಸೂಚನೆ ನೀಡುವ ವಿಶೇಷ ಸೌಲಭ್ಯ ಇದೆ. ಇರಲಿದ್ದು, ಅಗತ್ಯ ಬಿದ್ದರೆ ಅಧ್ಯಕ್ಷರ ಕಾರಿನ ರಕ್ಷಣಾ ಸಾಧನವನ್ನು ಮತ್ತಷ್ಟು ಒದಗಿಸುವ ಸಂಗ್ರಹ ಇದರಲ್ಲಿದೆ. ಅಧ್ಯಕ್ಷರ ಕಾರಿನ ಹಿಂದೆ-ಮುಂದೆ ಸಾಗುವ ಎಸ್‌ಯುುವಿ ವಾಹನಗಳು ಸಾಟಲೈಟ್‌ನಿಂದ ಕಾರ್ಯ ನಿರ್ವಹಿಸುವ ಸಂವಹನ ಸಾಧನಗಳನ್ನು ಹೊಂದಿವೆ. ಇದು ಶ್ವೇತಭವನಕ್ಕೆ ನೇರ ಸಂಪರ್ಕ ಒದಗಿಸುತ್ತದೆ. ಚಾಲಕನ ಹಿಂಬದಿಯ ಸೀಟ್‌ನಲ್ಲಿ ಸಾಟಲೈಟ್ ಫೋನ್ ಇದ್ದು, ಇದು ನೇರವಾಗಿ ಅಮೆರಿಕದ ಉಪಾಧ್ಯಕ್ಷ ಮತ್ತು ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್‌ಗೆ ಸಂಪರ್ಕ ಹೊಂದಿದೆ. ತುರ್ತು ಸಂದರ್ಭದ ಬಳಕೆಗಾಗಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್ ಇದರಲ್ಲಿದೆ. 80 ಕೋಟಿ ಖರ್ಚು
ಟ್ರಂಪ್ ಅವರು ವಿಶೇಷ ವಿಮಾನ ಏರ್‌ಫೋರ್ಸ್-1 ಫೆಬ್ರವರಿ 24ರಂದು ಬೆಳಗ್ಗೆ 11.55ಕ್ಕೆ ಅಹಮದಬಾದ್ ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ಟ್ರಂಪ್ ಮತ್ತು ಮೋದಿ ಸಾಬರಮತಿ ಆಶ್ರಮಕ್ಕೆ ತೆರಳಲಿದ್ದಾರೆ. ಸುಮಾರು 25 ನಿಮಿಷಗಳ ಕಾಲ ಅಲ್ಲಿಯೇ ಇದ್ದು, ಬಳಿಕ ಮೋದಿ ಅವರೊಂದಿಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣ ಉದ್ಘಾಟಿಸಿ ಭಾಷಣ ಮಾಡಲಿದ್ದು, ಬಳಿಕ ಆಗ್ರಾಕ್ಕೆ ತೆರಳಲಿದ್ದಾರೆ. ಟ್ರಂಪ್ ಅವರು ಗುಜರಾತ್‌ನಲ್ಲಿ ಇರುವ ಅತ್ಯಲ್ಪ ಸಮಯಕ್ಕೆ ಗುಜರಾತ್ ಸರಕಾರ ಸುಮಾರು 80 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ. ಭಾರತೀಯ ಪೊಲೀಸರು
ಅಧ್ಯಕ್ಷ ಟ್ರಂಪ್ ಅವರ ಭದ್ರತೆಗೆ 65 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 200 ಇನ್‌ಸ್ಪೆಕ್ಟರ್‌ಗಳು, 800 ಸಬ್ ಇನ್‌ಸ್ಪಕ್ಟರ್‌ಗಳು ಮತ್ತು 12,000 ನಗರ ಪೊಲಿಸ್ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಎನ್‌ಎಸ್‌ಜಿ, ಸೆಂಟ್ರಲ್ ಫೋರ್ಸ್, ಎಸ್‌ಪಿಜಿ, ಎಸ್‌ಆರ್‌ಪಿಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಒಟ್ಟು 25 ಸಾವಿರ ಸೈನಿಕರನ್ನು ಅವರ ರಕ್ಷಣೆಯಲ್ಲಿ ನಿಯೋಜಿಸಲಾಗುತ್ತದೆ. ಕಾರಿನ ಮೈಲೇಜ್
9 ಟನ್ ತೂಕದ ಕಾರು ಪ್ರತಿ ಗಂಟೆಗೆ 97 ಕಿ.ಮೀ ಸಂಚರಿಸುತ್ತದೆ. ಒಂದು ಯುಎಸ್ ಗ್ಯಾಲನ್ (3.7 ಲೀಟರ್) ಇಂಧನಕ್ಕೆ 12 ಕಿ.ಮೀ. ಸಂಚರಿಸುವ ಸಾಮರ್ಥ್ಯವನ್ನು ಕಾರು ಹೊಂದಿದೆ.