ನ್ಯೂಯಾರ್ಕ್: ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ನಲ್ಲಿ ಸ್ವಿಜರ್‌ಲ್ಯಾಂಡ್ ತಾರೆಗಳೆರಡು ಏಕಕಾಲದಲ್ಲಿ ಪತನಗೊಂಡಿವೆ. ಇದರಲ್ಲಿ ಆಘಾತಕಾರಿಯಾಗಿ ಸೋಲುಂಡು ನಿರ್ಗಮಿಸಿದವರು 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್. ಅವರನ್ನು ಬಡಿದುರುಳಿಸಿದವರು ಬಲ್ಗೇರಿಯಾದ 78ನೇ ರ್‍ಯಾಂಕಿಂಗ್ ಆಟಗಾರ ಗ್ರಿಗರ್ ಡಿಮಿಟ್ರೋವ್.
ಇದು ಡಿಮಿಟ್ರೋವ್ ಕಾಣುತ್ತಿರುವ ಮೊದಲ ಯುಎಸ್ ಓಪನ್ ಸೆಮಿಫೈನಲ್ ಕೂಡ ಹೌದು. 2014ರ ವಿಂಬಲ್ಡನ್ ಮತ್ತು 2017ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದು ಡಿಮಿಟ್ರೋವ್ ಅವರ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಸಾಧನೆಯಾಗಿದೆ. ಇದನ್ನೀಗ ಸರಿದೂಗಿಸಿದ್ದಾರೆ.
5 ಸೆಟ್‌ಗಳ ಅತ್ಯುತ್ತಮ ಕಾದಾಟ
2004ರಿಂದ 2008ರ ತನಕ ಸತತ 5 ವರ್ಷಗಳ ಕಾಲ ಯುಎಸ್ ಓಪನ್ ಚಾಂಪಿಯನ್ ಆದ ಬಳಿಕ ನ್ಯೂಯಾರ್ಕ್‌ನಲ್ಲಿ ಆಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಲೇ ಇದ್ದ ರೋಜರ್ ಫೆಡರರ್ ಪಾಲಿಗೆ ಇದು ಟೆನಿಸ್ ಬಾಳ್ವೆಯ ದೊಡ್ಡ ಸೋಲುಗಳಲ್ಲಿ ಒಂದು.
ಆದರೆ ಇದು 5 ಸೆಟ್‌ಗಳ ಕಾದಾಟವಾಗಿತ್ತು, ಇಲ್ಲಿ ಏನೂ ಕೂಡ ಸಂಭವಿಸಬಹುದಾಗಿತ್ತು ಎಂಬುದಾಗಿ ‘ಫ್ರೆಡ್ಡಿ’ ಹೇಳಿದರು. ಕುತ್ತಿಗೆ ನೋವಿನಿಂದಾಗಿ ಅವರು ಪಂದ್ಯದ ನಡುವೆ ವೈದ್ಯಕೀಯ ಚಿಕಿತ್ಸೆ ಪಡೆದು ಆಡಲಿಳಿದಿದ್ದರು.
ದಿನದ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ 2016ರ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಅವರನ್ನು ರಶ್ಯದ 5ನೇ ಶ್ರೇಯಾಂಕದ ಮೆಡ್ವಡೇವ್ 7-6 (8-6), 6-3, 3-6, 6-1 ಅಂತರದಿಂದ ಮಣಿಸಿದರು. ಸೆಮಿಫೈನಲ್ನಲ್ಲಿ ಡಿಮಿಟ್ರೋವ್-ಮೆಡ್ವಡೇವ್ ಪರಸ್ಪರ ಮುಖಾಮುಖೀಯಾಗಲಿದ್ದಾರೆ. ಮೆಡ್ವಡೇವ್ ಪಾಲಿಗೆ ಇದು ಕೇವಲ 3ನೇ ಯುಎಸ್ ಓಪನ್ ಪಂದ್ಯಾವಳಿ. 2017ರಲ್ಲಿ ಮೊದಲ ಸುತ್ತಲ್ಲೇ ಮುಗ್ಗರಿಸಿದ ಅವರು, ಕಳೆದ ವರ್ಷ 3ನೇ ಸುತ್ತಿನ ತನಕ ಬಂದಿದ್ದರು. ಗ್ರ್ಯಾನ್‌ಸ್ಲಾಮ್‌ನಲ್ಲಿ ಮೆಡ್ವಡೇವ್ ಕಾಣುತ್ತಿರುವ ಮೊದಲ ಸೆಮಿಫೈನಲ್ ಇದೆಂಬುದು ವಿಶೇಷ. ರೋಜರ್ ಫೆಡರರ್ ವಿರುದ್ಧ ಮೊದಲ ಜಯ
ರೋಜರ್ ಫೆಡರರ್ ವಿರುದ್ಧ ಆಡಿದ ಹಿಂದಿನ ಏಳೂ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಗ್ರಿಗರ್ ಡಿಮಿಟ್ರೋವ್ ಪಾಲಿಗೆ ಇದು ಟೆನಿಸ್ ಬಾಳ್ವೆಯ ಅವಿಸ್ಮರಣೀಯ ಗೆಲುವು ಎಂಬುದರಲ್ಲಿ ಅನುಮಾನವಿಲ್ಲ. ‘ಗೆಲುವು ಖುಷಿ ಕೊಟ್ಟಿದೆ. ನನ್ನ ಫಿಟ್‌ನೆಸ್ ಚೆನ್ನಾಗಿತ್ತು. ಯಾವುದೇ ಹೊಡೆತಗಳನ್ನು ಬಾರಿಸಬಲ್ಲೆನೆಂಬ ಆತ್ಮವಿಶ್ವಾವಿತ್ತು. ಫೆಡರರ್ ಅವರನ್ನು ಸೋಲಿಸಿದ್ದೊಂದು ಅಮೋಘ ಸಾಧನೆ’ ಎಂಬುದಾಗಿ ಡಿಮಿಟ್ರೋವ್ ಹೇಳಿದರು. ಅಂದಹಾಗೆ ಗ್ರಿಗರ್ ಡಿಮಿಟ್ರೋವ್ ಕಳೆದ ವರ್ಷ ಇಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದರು.
Advertisement
ಮಂಗಳವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಗ್ರಿಗರ್ ಡಿಮಿಟ್ರೋವ್ 5 ಸೆಟ್‌ಗಳ ಅಮೋಘ ಕಾಳಗದಲ್ಲಿ 3-6, 6-4, 3-6, 6-4, 6-2 ಅಂತರದಿಂದ ಫೆಡರರ್ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಕಳೆದ 10 ವರ್ಷಗಳ ಗ್ರ್ಯಾನ್‌ಸ್ಲಾಮ್ ಇತಿಹಾಸಲ್ಲಿ ಅತೀ ಕೆಳ ಶ್ರೇಯಾಂಕದ ಆಟಗಾರನೊಬ್ಬ ಸೆಮಿಫೈನಲ್ ಪ್ರವೇಶಿಸಿದಂತಾಯಿತು. 2008ರಲ್ಲಿ 94ನೇ ರ್‍ಯಾಂಕಿಂಗ್‌ನ ಜರ್ಮನಿಯ ರೈನರ್ ಶಟ್ಲರ್ ವಿಂಬಲ್ಡನ್ ಉಪಾಂತ್ಯ ತಲುಪಿದ್ದರು.
2004ರಿಂದ 2008ರ ತನಕ ಸತತ 5 ವರ್ಷಗಳ ಕಾಲ ಯುಎಸ್ ಓಪನ್ ಚಾಂಪಿಯನ್ ಆದ ಬಳಿಕ ನ್ಯೂಯಾರ್ಕ್‌ನಲ್ಲಿ ಆಧಿಪತ್ಯ ಸ್ಥಾಪಿಸಲು ಪ್ರಯತ್ನಿಸುತ್ತಲೇ ಇದ್ದ ರೋಜರ್ ಫೆಡರರ್ ಪಾಲಿಗೆ ಇದು ಟೆನಿಸ್ ಬಾಳ್ವೆಯ ದೊಡ್ಡ ಸೋಲುಗಳಲ್ಲಿ ಒಂದು.
Related Articles
Advertisement
ಮೆಡ್ವಡೇವ್‌ಗೆ ಮೊದಲ ಉಪಾಂತ್ಯದಿನದ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ 2016ರ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕ ಅವರನ್ನು ರಶ್ಯದ 5ನೇ ಶ್ರೇಯಾಂಕದ ಮೆಡ್ವಡೇವ್ 7-6 (8-6), 6-3, 3-6, 6-1 ಅಂತರದಿಂದ ಮಣಿಸಿದರು. ಸೆಮಿಫೈನಲ್ನಲ್ಲಿ ಡಿಮಿಟ್ರೋವ್-ಮೆಡ್ವಡೇವ್ ಪರಸ್ಪರ ಮುಖಾಮುಖೀಯಾಗಲಿದ್ದಾರೆ. ಮೆಡ್ವಡೇವ್ ಪಾಲಿಗೆ ಇದು ಕೇವಲ 3ನೇ ಯುಎಸ್ ಓಪನ್ ಪಂದ್ಯಾವಳಿ. 2017ರಲ್ಲಿ ಮೊದಲ ಸುತ್ತಲ್ಲೇ ಮುಗ್ಗರಿಸಿದ ಅವರು, ಕಳೆದ ವರ್ಷ 3ನೇ ಸುತ್ತಿನ ತನಕ ಬಂದಿದ್ದರು. ಗ್ರ್ಯಾನ್‌ಸ್ಲಾಮ್‌ನಲ್ಲಿ ಮೆಡ್ವಡೇವ್ ಕಾಣುತ್ತಿರುವ ಮೊದಲ ಸೆಮಿಫೈನಲ್ ಇದೆಂಬುದು ವಿಶೇಷ. ರೋಜರ್ ಫೆಡರರ್ ವಿರುದ್ಧ ಮೊದಲ ಜಯ