Advertisement

ಅಮೆರಿಕದಿಂದ ಸಿದ್ಧವಾಯ್ತು ಅತ್ಯಾಧುನಿಕ ಲೇಸರ್‌ ಶಸ್ತ್ರ

09:53 AM Nov 10, 2019 | Team Udayavani |

ವಾಷಿಂಗ್ಟನ್‌: ಇದರ ಕಿರಣಗಳನ್ನು ಹಾಯಿಸಿದರೆ ಸಾಕು. ಡ್ರೋನ್‌, ಹೆಲಿಕಾಪ್ಟರ್‌ ಅಷ್ಟೇ ಏಕೆ ಯುದ್ಧ ವಿಮಾನವೂ ಕ್ಷಣಮಾತ್ರದಲ್ಲಿ ಭಸ್ಮ! ಇಂಥದ್ದೊಂದು ಭಸ್ಮಾಸುರ ಅಸ್ತ್ರವನ್ನು ತಯಾರಿಸಿರುವುದು ಅಮೆರಿಕದ ಸೇನೆ. 50 ಕಿ.ವ್ಯಾ.ನ ಅತ್ಯಾಧುನಿಕ ಲೇಸರ್‌ ಅಸ್ತ್ರವಾದ ಇದನ್ನು ಮಿಲಿಟರಿ ವಾಹನದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.

Advertisement

ಸುಮಾರು 6 ದಶಕಗಳಿಂದ ಇಂತಹ ತಂತ್ರಜ್ಞಾನಕ್ಕಾಗಿ ಸಂಶೋಧನೆ ನಡೆಸಲಾಗಿದ್ದು, ಈಗ ಪ್ರಾಯೋಗಿಕ ಪರೀಕ್ಷೆ ಹಂತದಲ್ಲಿದೆ. 2022ರ ವೇಳೆಗೆ ಇದು ಸೇನೆಯಲ್ಲಿ ಸೇವೆ ಲಭ್ಯವಾಗಲಿದೆ. ಆಕಾಶದಿಂದ ಆಗುವ ದಾಳಿಗಳನ್ನು ಲೇಸರ್‌ ಶಸ್ತ್ರಗಳ ಮೂಲಕ ಸಮರ್ಥವಾಗಿ ತಡೆಯಬಹುದು ಎಂದು ಸೇನೆ ಹೇಳಿಕೊಂಡಿದೆ.

8 ಚಕ್ರದ ಮಿಲಿಟರಿ ವಾಹನದಲ್ಲಿ ಇದನ್ನು ಅಳವಡಿಸಲಾಗುತ್ತಿದ್ದು, ಇದು ಲೇಸರ್‌ ಶಸ್ತ್ರದಿಂದಾಗುವ ಅದುರುವಿಕೆ ಮತ್ತು ಭಾರವನ್ನು ತಡೆಯಲು ಸಮರ್ಥವಾಗಿದೆ. ಈ ಹಿಂದೆ ಇಂತಹುದೇ ಶಸ್ತ್ರವನ್ನು ಅಮೆರಿಕ ನೌಕಾಪಡೆ ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿತ್ತು. ಇದನ್ನು ಅದು ಬಳಸಲು ಉದ್ದೇಶಿಸಿದೆ. ಇಂತಹ ಶಸ್ತ್ರಗಳು ಬಳಕೆಗೆ ಬಂದಿದ್ದೇ ಆದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲೇಸರ್‌ ಶಸ್ತ್ರಗಳನ್ನು ಬಳಸುವ ಮೊದಲ ದೇಶವಾಗಿ ಅಮೆರಿಕ ಹೆಸರು ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next