Advertisement

ಅಮೆರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿ:ಡಾ|ಸಲ್ಮಾ ಸುಹಾನಾಗೆ ಪ್ರಶಸ್ತಿ

05:30 AM Jan 10, 2019 | |

ಮಂಗಳೂರು: ದಾವಣಗೆರೆಯ ಎಸ್‌ಎಸ್‌ಐಎಂಎಸ್‌ ಆ್ಯಂಡ್‌ ಆರ್‌ಸಿ ವೈದ್ಯಕೀಯ ಕಾಲೇಜಿನಲ್ಲಿ ನ್ಯೂರಾಲಜಿ “ಸೂಪರ್‌ ಸ್ಪೆಷಾಲಿಟಿ’ ವ್ಯಾಸಂಗ ಮಾಡುತ್ತಿರುವ ಮಂಗಳೂರಿನ ಡಾ| ಸಲ್ಮಾ ಸುಹಾನಾ ಅವರನ್ನು ಅಮೆರಿಕನ್‌ ಅಕಾಡೆಮಿ ಆಫ್‌ ನ್ಯೂರಾಲಜಿ ಸಂಸ್ಥೆಯು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಕಾಲರ್‌ಶಿಪ್‌ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ಡಾ| ಸಲ್ಮಾ ಸುಹಾನಾ ಅವರು ಮಂಗಳೂರಿನ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನಲ್ಲಿ ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿಯೆಂದು ಪರಿಗಣಿಸಲ್ಪಟ್ಟು ಚಿನ್ನದ ಪದಕ ಪಡೆದಿದ್ದರು. ರಾಜೀವ್‌ ಗಾಂಧಿ ಆರೋಗ್ಯ ವಿವಿಯಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಎಂಬಿಬಿಎಸ್‌ ಪದವಿ, ಬೆಂಗಳೂರಿನ ಕೆಂಪೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ (ಕಿಮ್ಸ್‌) ನಲ್ಲಿ ಜನರಲ್‌ ಮೆಡಿಸಿನ್‌ ವಿಭಾಗದಲ್ಲಿ ಸ್ನಾತಕೋತ್ತರ (ಎಂಡಿ) ಪದವಿಯನ್ನು ಪಡೆದಿದ್ದರು.

ಅವರ “ಸೆರೆಬ್ರಲ್‌ ವೀನಸ್‌ ಥ್ರೊಂಬೋಸಿಸ್‌’ ಕುರಿತ ಅಧ್ಯಯನವನ್ನು ಗುರುತಿಸಿ ಅಕಾಡೆಮಿಯು ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಜಾಗತಿಕ ನರರೋಗ ತಜ್ಞರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಡಾ| ಸಲ್ಮಾ ಅವರು ಸೌದಿ ಅರೇಬಿಯಾದ ಖಸಿಂ ಯುನಿವರ್ಸಿಟಿಯ ದಂತ ವೈದ್ಯಕೀಯ ವಿಭಾಗದಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿರುವ ಡಾ| ಶಕಿಲ್‌ ಎಂ. ಅವರ ಪತ್ನಿ ಹಾಗೂ ನಿವೃತ್ತ ಡೆಪ್ಯುಟಿ ಡೈರೆಕ್ಟರ್‌ (ಎನ್‌ಎಂಪಿಟಿ) ಖಾಲಿದ್‌ ತಣ್ಣೀರುಬಾವಿ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next