Advertisement

America ವರದಿ: ಬಡತನದಿಂದ ಹೊರಬಂದ ಭಾರತ

11:33 PM Mar 02, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುತ್ತಿರು ವವರ ಪ್ರಮಾಣದಲ್ಲೂ ಇಳಿಕೆ ಕಂಡು ಬಂದಿದೆ. 2011-12ರಲ್ಲಿ ಶೇ.12.2 ರಷ್ಟಿದ್ದ ಪ್ರಮಾಣ 2022-23ರಲ್ಲಿ ಶೇ.2ಕ್ಕೆ ಇಳಿಕೆ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಬಡತನ ಪ್ರಮಾಣ ಶೇ.2.5ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಬಡತನ ಪ್ರಮಾಣ ಪ್ರಮಾಣ ಶೇ.1ರಷ್ಟಿದೆ ಎಂದು ಅಮೆರಿಕದ “ದ ಬ್ರೂಕಿಂಗ್‌ ಇನ್‌ಸ್ಟಿಟ್ಯೂಟ್‌ನ ಇಬ್ಬರು ಅರ್ಥಶಾಸ್ತ್ರಜ್ಞರಾದ ಸುರ್ಜಿತ್‌ ಭಲ್ಲಾ, ಕರಣ್‌ ಭಾಸಿನ್‌ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

Advertisement

ದೇಶದ ಗ್ರಾಮೀಣ ಪ್ರದೇಶದ ಜನರ ಖರ್ಚು ಶೇ.31ರಷ್ಟು ಏರಿಕೆಯಾಗಿದ್ದು, ಭಾರತವು ಕಡುಬಡತನದಿಂದ ಹೊರ ಬಂದಿದೆ ಎಂದು ವರದಿ ತಿಳಿಸಿದೆ. ಅದರ ಪ್ರಕಾರ ಭಾರತದಲ್ಲಿ ತಲಾದಾಯವನ್ನು ಖರ್ಚು ಮಾಡುವ ಪ್ರಮಾಣ ಅಧಿಕವಾಗಿದೆ. 2011-12ನೇ ಸಾಲಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಪ್ರಮಾಣ ಶೇ.2.6 ರಷ್ಟು ಖರ್ಚು ಮಾಡುವ ಪ್ರಮಾಣ ಹೆಚ್ಚಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.3.1ರಷ್ಟು ಹೆಚ್ಚಳವಾಗಿದೆ.

ಆದಾಯದ ಹಂಚಿಕೆ ಅಸಮಾನತೆ ನಗರ ಪ್ರದೇಶದಲ್ಲಿ ಶೇ.36.7ರಿಂದ ಶೇ.31.9ಕ್ಕೆ, ಗ್ರಾಮೀಣ ಪ್ರದೇಶದಲ್ಲಿ ಶೇ.28.7ರಿಂದ ಶೇ.27ಕ್ಕೆ ಇಳಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next